ದೇಶ ರಕ್ಷಕರ ಪಡೆ. ಸ್ವದೇಶಿ ಜಾಗರಣಾ ಮಂಚನಿಂದ ಬಸವ ನಾಡಿನಲ್ಲಿ ನಡೆದಿರುವ ನಿಸ್ವಾರ್ಥ ಸೇವೆಗೊಂದು ಸಲಾಂ

ವಿಜಯಪುರ: ಇದ್ದರೆ ಇರಬೇಕು ಇಂಥ ಯುವಕರ ಸಂಘಟನೆಗಳು ಎಂಬ ಮಾತಿಗೆ ಹೇಳಿ ಮಾಡಿಸಿದಂತಿವೆ ಈ ಯುವಕರ ಪಡೆಗಳು. ಬಸವ ನಾಡಿನಲ್ಲಿ ಸದ್ದಿಲ್ಲದೇ ಈ ಸಂಘಟನೆಗಳು ಕೊರೊನಾ ಸೋಂಕಿತರ, ಅವರ ಸಂಬಂಧಿಕರ ಮತ್ತು ಅಸಹಾಯಕರ ಸೇವೆ ಮಾಡುವ ಮೂಲಕ ಮನೆ ಮಾತಾಗಿವೆ.

ಕೊರೊನಾ ಎರಡನೇ ಅಲೆಗೆ ಉಳ್ಳವರೂ ನಲುಗಿ ಹೋಗಿದ್ದಾರೆ. ಇನ್ನು ಬಡವರ ಪಾಡಂತೂ ದೇವರಿಗೆ ಪ್ರೀತಿ ಎಂಬ ಪರಿಸ್ಥಿತಿ ಇದೆ. ಇಂಥ ಬಡವರು ಮತ್ತು ಅಸಹಾಯಕರಿಗೆ ವಿಜಯಪುರ ನಗರದ ದೇಶ ರಕ್ಷಕರ ಪಡೆ ತ್ತು ಸ್ವದೇಶಿ ಜಾಗರಣಾ ಮಂಚ್ ಪ್ರತಿನಿತ್ಯ ಸೇವೆ ಮಾಡುವ ಮೂಲಕ ಗಮನ ಸೆಳೆದಿವೆ.

ಹಿರಿಯ ಮಹಿಳೆಯನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿರುವ ದೇಶ ರಕ್ಷಕರ ಪಡೆ ಯುವಕ

ಕೊರೊನಾ ಸೋಂಕಿನ ಭಯದಿಂದ ಸೋಂಕಿತರ ಸಂಬಂಧಿಕರೇ ದೂರವಿದ್ದಾರೆ. ಸಂಬಂಧಗಳಿಗೆ ಬೆಲೆಯೇ ಇಲ್ಲದ ಪರಿಸ್ಥಿತಿಯಿದೆ. ಇಂಥ ಸಂಕಷ್ಟಕರ ಪರಿಸ್ಥಿತಿಯಲ್ಲಿ ಯುವಕರು ತಂಡ ರಚಿಸಿಕೊಂಡು ಅ ಸಹಾಯಕರ ನೆರವಿಗೆ ಈ ಸಂಘಟನೆಗಳ ಯುವಕರು ಶ್ರಮಿಸುತ್ತಿದ್ದಾರೆ. ದೇಶ ರಕ್ಷಕ ಪಡೆ ಮತ್ತು ಸ್ವದೇಶಿ ಜಾಗರಣ ಮಂಚ್ ಗಳು ಬಡವರು ಹಾಗೂ ಕೊರೊನಾ ಸೋಂಕಿತರಿಗೆ, ಸೋಂಕಿತರ ಸಹಾಯಕರಿಗೆ ಊಟೋಪಚಾರ ಸೇರಿದಂತೆ ಔಷಧಿಗಳನ್ನು ವಿತರಿಸುವ ಮೂಲಕ ಭೇಷ್ ಎನಿಸಿಕೊಂಡಿವೆ.

ಹಿರಿಯ ಮಹಿಳೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವ ದೇಶ ರಕ್ಷಕರ ಪಡೆಯ ಯುವಕ

ಇದರ ಜೊತೆಗೆ ಈವರೆಗೆ 12 ಕ್ಕೂ ಕೊರೊನಾ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಲಾಕಡೌನ್ ಹಿನ್ನೆಲೆಯಲ್ಲಿ ದೀರ್ಘಕಾಲದ ರೋಗಿಗಳಿಗೆ ಔಷಧಿಯನ್ನು ಅವರವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನೂ ಈ ಸಂಘಟನೆಗಳು ಮಾಡುವ ಮೂಲಕ ಗಮನ ಸೆಳೆದಿವೆ. ಅಷ್ಟೇ ಅಲ್ಲ, ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಜೊತೆಗೆ ಇತರೆ ಚಿಕಿತ್ಸೆಗಾಗಿ ರಕ್ತದಾನ ಕಾರ್ಯಗಳನ್ನು ಮಾಡುವ ಮೂಲಕ ಜನಮೆಚ್ಚುವ ಕಾರ್ಯದಲ್ಲಿ ನಿರತವಾಗಿವೆ.

ಈ ಎರಡು ಸಂಘಟನೆಗಳು ಕಳೆದ ವರ್ಷ ಲಾಕಡೌನ್ ಹಾಗೂ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಸಂದರ್ಭಗಳಲ್ಲಿಯೂ ಸಂತ್ರಸ್ತರಿಗೆ ನೆರವು ನೀಡಿದ್ದವು.ಈ ಸಲವೂ ಕೊರೊನಾ ಕೊರೊನಾ ಸೋಂಕಿತರನ್ನು ಈ ಸಂಘಟನೆಗಳ ಸದಸ್ಯರು ಖುದ್ದಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಒದಗಿಸುತ್ತಿದ್ದಾರೆ. ಇಲ್ಲಿಯವರೆಗೆ 70 ಕ್ಕೂ ಹೆಚ್ಚು ಇತರೆ ಕಾಯಿಲೆಗಳಿಗೆ ಔಷಧಿಗಳನ್ನು ಉಚಿತವಾಗಿ ರೋಗಿಗಳ ಮನೆಗೆ ತಲುಪಿಸಿದ್ದಾರೆ. ಅಷ್ಟೇ ಅಲ್ಲ, 15 ಕ್ಕೂ ಹೆಚ್ಚು ಜನರಿಗೆ ರಕ್ತದಾನದ ಮೂಲಕ ಜೀವದಾನ ಮಾಡಿದ್ದಾರೆ.

ಕೊವಿಡ್ ಕೇರ್ ಸೆಂಟರ್ ಗೆ ತೆರಳಿ ಊಟ ವಿತರಿಸುತ್ತಿರುವ ದೇಶ ರಕ್ಷಕರ ಪಡೆ, ಸ್ವದೇಶಿ ಜಾಗರಣ ಮಂಚ ಯುವಕರು

500ಕ್ಕೂ ಹೆಚ್ಚು ಜನರಿಗೆ ಡಾ. ಗಿರಿಧರ ಕಜೆಯವರ ಆಯುರ್ವೇದ ಔಷಧಿಯನ್ನು ವಿತರಿಸಿದ್ದಾರೆ. ಈ ಸಂಘಟನೆಗಳ ಯುವಕರಾದ ರೋಹನ್ ಆಪ್ಟೆ, ಆದಿತ್ಯ ತಾವರಗೆರೆ, ವಿಕ್ರಮ ತಾಂಬೇಕರ, ರಘುನಾಥ ಪೋಳ, ರಾಕೇಶ ಭಾಸುತ್ಕರ, ರಜನಿಕಾಂತ ಕಲ್ಲುರಕರ, ಶ್ರೀಧರ ತಾಂಬೆ, ಕಲ್ಪೇಶ್ ಹಳ್ಳಿ ಹಾಗೂ ಮಲ್ಲಯ್ಯ ಮಠಪತಿ ಮುಂತಾದವರು ಕೊವಿಡ್ ಕೇರ್ ಸೆಂಟರ್ ಗಳಿಗೆ ಪ್ರತಿನಿತ್ಯ ಊಟ ವಿತರಿಸುವ ಮೂಲಕ ಅನ್ನದಾಸೋಹದಲ್ಲೂ ಸೈ ಎನಿಸಿಕೊಂಡಿದ್ದಾರೆ.

ರೋಗಗಿಳೆಗ ಮನೆಗೆ ತೆರಳಿ ಔಷಧಿ ವಿತರಿಸುತ್ತಿರುವ ದೇಶ ರಕ್ಷಕರ ಪಡೆ, ಸ್ವದೇಶಿ ಜಾಗರಣ ಮಂಚ ಯುವಕ

ಕೊರೊನಾ ಬಂದಿದೆ ಎಂದರೆ ಸಾಕು ಒ ಡ ಹುಟ್ಟಿದವರೂ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ತಮಗೆ ಪರಿಚಯವೇ ಇಲ್ಲದವರ ನೆರವಿಗೆ ಧಾವಿಸಿ, ಹಲವಾರು ಜನರ ಜೀವ ಉಳಿಸುವ ಮೂಲಕ ದೇಶ ರಕ್ಷಣಾ ಪಡೆ ಮತ್ತು ಸ್ವದೇಶಿ ಜಾಗರಣಾ ಮಂಚ್ ಯುವಕರಿಗೊಂದು ಸಲಾಂ ಹೇಳಲೇಬೇಕು.

Leave a Reply

ಹೊಸ ಪೋಸ್ಟ್‌