ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಗಾಗಿ ರೂ. 55 ಲಕ್ಷ ಶಾಸಕರ ಅನುದಾನ ನೀಡಲು ಅರುಣ ಶಹಾಪುರ ನಿರ್ಧಾರ

ವಿಜಯಪುರ: ಕೊರೊನಾ ಎರಡನೇ ಅಲೆ ಈಗ ಸಾಕಷ್ಟು ಜನರಕನ್ನು ಹೈರಾಣಾಗಿಸಿದೆ. ಅಲ್ಲದೇ, ಸಂಕಷ್ಟಕ್ಕೂ ದೂಡಿದೆ. ಈ ಮಧ್ಯೆ, ಕೊರೊನಾ ಮೂರನೇ ಅಲೆಯ ಆತಂಕವೂ ಎದುರಾಗಿದ್ದು, ಈ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದೂ ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತಮ್ಮ ಸ್ವಂತ ಊರಾದ ಸಿಂದಗಿಗೆ ತಮ್ಮ ಅನುದಾನದಲ್ಲಿ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. 2021-22ನೇ ಆರ್ಥಿಕ ವರ್ಷದಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ರೂ. 55 ಲಕ್ಷ ರೂಪಾಯಿಯನ್ನು ಮಕ್ಕಳ ಆರೋಗ್ಯ ಸಂಬಂಧಿ ಕಾರ್ಯಗಳಿಗೆಗಾ ಬಿಡುಗಡೆ ಮಾಡುವಂತೆ ಅರುಣ ಶಹಾಪುರ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಮಕ್ಕಳಿಗಾಗಿ ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಕಟ್ಟ ನಿರ್ಮಾಣ ಸೇರಿದಂತೆ ನಾನಾ ಕಾಮಗಾರಿ ಮತ್ತು ಸಲಕರಣೆ ಖರೀದಿಗಾಗಿ ಅವರು ಯಾವುದಕ್ಕೆ ಎಷ್ಟು ಹಣ ಮೀಸಲಿಡಬೇಕು ಎಂಬುದನ್ನೂ ವಿವರಿಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿಕೆ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಅನುದಾನ ಬಿಡುಗಡೆಗಾಗಿ ಬರೆದಿರುವ ಪತ್ರದ ಪ್ರತಿ

ಅರುಣ ಶಹಾಪುರ ಯಾವ ಕಾಮಗಾರಿಗೆ ಎಷ್ಟು ಅನುದಾನ ನೀಡಬೇಕು ಎಂದು ವಿವರಿಸಿರುವ ಮಾಹಿತಿ ಇಲ್ಲಿದೆ.

  1. ಮಕ್ಕಳಿಗಾಗಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ರೂ. 20 ಲಕ್ಷ,
  2. ಮಕ್ಕಳಿಗಾಗಿ ನಾಲ್ಕು ತೀವ್ರ ನಿಗಾ ಘಟಕದ ಬೆಡ್ ಗಳಿಗಾಗಿ ರೂ. 10 ಲಕ್ಷ,
  3. ಆ್ಯಂಬುಲನ್ಸ್ ಗಾಗಿ ರೂ. 15 ಲಕ್ಷ ಮತ್ತು
  4. ಮಕ್ಕಳ ಆರೈಕೆಗಾಗಿ ಬರುವ ಪೋಷಕರು ಮತ್ತು ಸಂಬಂಧಿಕರು ತಂಗಲು ಕಟ್ಟಡ ನಿರ್ಮಾಣಕ್ಕಾಗಿ ರೂ. 19 ನೀಡಬೇಕು ಎಂದು ಮನವಿ ಪತ್ರದಲ್ಲಿ ಅರುಣ ಶಹಾಪುರ ತಿಳಿಸಿದ್ದಾರೆ.

ಈ ಮೂಲಕ ಅರುಣ ಶಹಾಪುರ ತಮ್ಮ ತವರು ಸಿಂದಗಿ ತಾಲೂಕಿನ ಮಕ್ಕಳಿಗಾಗಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.

Leave a Reply

ಹೊಸ ಪೋಸ್ಟ್‌