ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ, ಕೇಂದ್ರ ಸರಕಾರಗಳು ವಿಫಲ ಆರೋಪ- ಏಳು ಎಡಪಕ್ಷಗಳಿಂದ ಆನಲೈನ್ ಮೂಲಕ ಮನೆಮನೆಗಳಿಂದಲೇ ಪ್ರತಿಭಟನೆ

ವಿಜಯಪುರ: ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ಏಳು ಎಡ ಪಕ್ಷಗಳು ಆನಲೈನ್ ಮೂಲಕ ಮನೆಮನೆಗಳಿಂದಲೇ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಸಿಪಿಐ, ಸಿಪಿಐ(ಎಂ), ಎಸ್‌ ಯು ಸಿ ಐ(ಸಿ), ಸಿಪಿಐ(ಎಂಎಲ್) ಲಿಬರೇಶನ್, ಎ ಐ ಎಫ್ ಬಿ, ಆರ್ ಪಿ ಐ, ಸ್ವರಾಜ ಇಂಡಿಯಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಂಟಿಯಾಗಿ ಪಾಲ್ಗೋಂಡರು.

ರಾಜ್ಯ, ಕೇಂದ್ರ ಸರಕಾರಗಳ ವಿರುದ್ಧ ಮನೆಮನೆಗಳಿಂದಲ ಆನಲೈನ್ ಪ್ರತಿಭಟನೆ ನಡೆಸಿದ ಎಡಪಕ್ಷಗಳ ಕಾರ್ಯಕರ್ತರು

ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ತಂತಮ್ಮ ಮನೆಗಳ ಮುಂದೆ ಕೈಯಲ್ಲಿ ಭಿತ್ತಿ ಪತ್ರ ಹಿಡಿ ಕಾರ್ಯಕರ್ತರು ಜೀವ ಉಳಿಸಿ- ಜೀವನ ರಕ್ಷಿಸಿ-ಮೂರನೇ ಅಲೆಗೆ ಸನ್ನದ್ಧರಾಗಿ ಎಂಬ ಘೋಷ ವಾಕ್ಯದೊಂದಿಗೆ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿದವು.

ವಿಜ್ಞಾನಿಗಳು ಮತ್ತು ತಜ್ಞರು ಕೊರೊನಾ ಕುರಿತು ಸಾಕಷ್ಟು ಮುನ್ನೆಚ್ಚರಿಕೆ ನೀಡಿದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಕೊರೊನಾ ಮೊದಲ ಮತ್ತು ಎರಡನೇ ಅಲೆಯಿಂದಾಗಿ ಸಾರ್ವಜನಿಕರು ಸಾಕಷ್ಟು ತೊಂದರೆಗೆ ಸಿಲುಕುವಂತಾಯಿತು. ಅಲ್ಲದೇ, ಲಾಕಡೌನಿಂದಾಗಿ ದಿನಗೂಲಿ ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಬಡವರ್ಗದವರೇ ಹೆಚ್ಚಾಗಿ ಸಂಕಷ್ಟ ಎದುರಿಸುವಂತಾಗಿದೆ ಎಂದು ಈ ಪಕ್ಷಗಳ ಪದಾಧಿಕಾರಿಗಳು ಆರೋಪಿಸಿದ್ದಾರೆ.

ರಾಜ್ಯ, ಕೇಂದ್ರ ಸರಕಾರಗಳ ವಿರುದ್ಧ ಮನೆಮನೆಗಳಿಂದಲ ಆನಲೈನ್ ಪ್ರತಿಭಟನೆ ನಡೆಸಿದ ಎಡಪಕ್ಷಗಳ ಕಾರ್ಯಕರ್ತರು

ಈಗ ಕೊರೊನಾ ಮೂರನೇ ಅಲೆಯ ಬಗ್ಗೆ ತಜ್ಞರು ಮತ್ತು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದು, ಈಗಿನಿಂದಲೇ ಮೂರನೇ ಅಲೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ, ಎಲ್ಲರಿಗೂ ಕೂಡಲೇ ಲಸಿಕೆ ಹಾಕಬೇಕು. ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕು. 200 ದಿನಗಳ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಮತ್ತು ಅಗತ್ಯ ಪರಿಕರ ಒದಗಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ರಾಜ್ಯ, ಕೇಂದ್ರ ಸರಕಾರಗಳ ವಿರುದ್ಧ ಮನೆಮನೆಗಳಿಂದಲ ಆನಲೈನ್ ಪ್ರತಿಭಟನೆ ನಡೆಸಿದ ಎಡಪಕ್ಷಗಳ ಕಾರ್ಯಕರ್ತರು

ಈ ಆನಲೈನ್ ಪ್ರತಿಭಟನೆಯಲ್ಲಿ ವಿಜಯಪುರದಿಂದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ, ಮುಖಂಡರಾದ ಪ್ರಕಾಶ ಹಿಟ್ನಳ್ಳಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಎಸ್ ಯು ಸಿ ಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಸುರೇಖಾ ರಜಪೂತ, ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಎಚ್. ಟಿ. , ಸಿದ್ದಲಿಂಗ ಬಾಗೇವಾಡಿ, ಎಚ್. ಟಿ. ಭರತಕುಮಾರ, ಬಾಳು ಜೇವೂರ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಈರಣ್ಣ ಬೆಳ್ಳುಂಡಗಿ, ಸರಕಾರಿ ಹಾಸ್ಟೇಲ್ ಹೊರ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಹುಲಿಗೆಪ್ಪ ಚಲವಾದಿ, ರೈತ ಸಂಘದ ಸಿದ್ಧರಾಮ ಬಂಗಾರಿ ಸೇರಿದಂತೆ ನಾನಾ ಮುಖಂಡರು ಮತ್ತು ಕಾರ್ಯಕರ್ತರು ಆನಲೈನ್ ಪ್ರತಿಭಟನೆಯಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌