ಕೊರೊನಾ ರೋಗಿಗಳಿಗಾಗಿ ಶೇ. 50 ರಷ್ಟು ಬೆಡ್ ಗಳನ್ನು ಸರ್ಕಾರಿ ಕೋಟಾದಡಿ ಕಾಯ್ದಿರಿಸಲು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಸೂಚನೆ
ವಿಜಯಪುರ: ರಾಜ್ಯ ಸರಕಾರದಿಂದ ಅಭಿವೃದ್ಧಿ ಪಡಿಸಿದ ಬೆಡ್ ಮ್ಯಾನೇಜಮೆಂಟ್ ಸಿಸ್ಟಮ್ ಅಡಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಹಂಚಿಕೆ ಮಾಡಲಾದ ಬೆಡ್ ಪೈಕಿ ಶೇ.50ರಷ್ಟು ಹಾಸಿಗೆಗಳನ್ನು ಸರಕಾರಿ ಕೋಟಾದಡಿ ಕಾಯ್ದಿರಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚಿನೆ ನೀಡಿದ್ದಾರೆ. ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆ ಮುಖ್ಯಸ್ಥರು, ವೈದ್ಯಾಧಿಕಾರಿಗಳು, ಚಿಕ್ಕ ಮಕ್ಕಳ ತಜ್ಞ ವೈದ್ಯರು, ಇಂಡಿಯನ್ ಅಕ್ಯಾಡೆಮಿ ಆಫ್ ಪಿಡಿಯಾಟ್ರಿಕ್ಸ, ಅಧ್ಯಕ್ಷರು, ಐ ಎಮ್ ಎ ಅಧ್ಯಕ್ಷರೊಂದಿಗೆ ಕೊರೊನಾ ಮೂರನೇ […]
ಜೂ. 5 ರಂದು ಲಾಕಡೌನ್ ವಿಸ್ತರಣೆ ಬಗ್ಗೆ ನಿರ್ಧಾರ- ಮೂರನೇ ಅಲೆ ಎದುರಿಸಲು 24 ಸಾವಿರ ಆಕ್ಸಿಜನ್ ಬೆಡ್ ನಿರ್ಮಾಣ- ಬೊಮ್ಮಾಯಿ
ಹಾವೇರಿ- ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕಡೌನ್ ವಿಸ್ತರಣೆ ಕುರಿತು ಜೂ. 5 ರಂದು ನಿಗದಿಯಾಗಿರುವ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ. ಜೂ.4 ರಂದು ಮುಖ್ಯಮಂತ್ರಿ ಬಿ ಎಸ್ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. […]
ವಿಜಯಪುರ ಬಿದರಿ ಆಸ್ಪತ್ರೆಗೆ ಡಿಸಿ ಭೇಟಿ- 3ನೇ ಅಲೆ ತಡೆಯಲು ಸಿದ್ಧತೆಗೆ ಸೂಚನೆ
ವಿಜಯಪುರ: ಕೊರೊನಾ ಮೂರನೇ ಅಲೆಯಲ್ಲಿ ಸೋಂಕಿತ ಮಕ್ಕಳಿಗೆ ತುರ್ತು ಚಿಕಿತ್ಸೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ವೈದ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದ್ದಾರೆ. ವಿಜಯಪುರ ನಗರದ ಬಿದರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿರುವ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮೂರನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಈ ಕುರಿತು ಈಗಿನಿಂದಲೇ ಅವಶ್ಯಕ […]
ಬಸವ ನಾಡಿನಲ್ಲಿ ಕಂಡ ಕೌತುಕ- ಸೂರ್ಯನ ಸುತ್ತ ಕಾಣಿಸಿದ ಕಾಮನ ಬಿಲ್ಲನ್ನು ಮೊಬೈಲಿನಲ್ಲಿ ಸೆರೆ ಹಿಡಿದ ಆರಕ್ಷಕ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಟಮಟ ಮಧ್ಯಾಹ್ನ ಆಗಸದಲ್ಲಿ ಕೌತುಕವೊಂದು ಕಾಣಿಸಿದೆ. ಸೂರ್ಯನ ಸುತ್ತಲು ಕಾಮನ ಬಿಲ್ಲು ಕಾಣಿಸಿಕೊಂಡಿದೆ. ಸೂರ್ಯನನ್ನು ಈ ಕಾಮನ ಬಿಲ್ಲು ವೃತ್ತಾಕಾರದಲ್ಲಿ ಸುತ್ತುವರೆದಿದ್ದು, ಈ ದೃಶ್ಯವನ್ನು ಕಂಡು ಸ್ವತಃ ಪೊಲೀಸ್ ಪೇದೆ ಅಚ್ಚರಿಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆಯ ಹೊರಗಡೆ ಈ ದೃಶ್ಯ ಕಂಡು ಬಂದಿದ್ದು, ಮುಖ್ಯ ಪೊಲೀಸ್ ಪೇದೆ ವಿಶ್ವನಾಥ ಎಸ್. ಹಿಪ್ಪರಗಿ ಈ ಕೌತುಕವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಮಟಮಟ ಮಧ್ಯಾಹ್ನ ಹೊರಗಡೆ ಬಂದ ಪೇದೆ ಠಾಣೆಯಿಂದ ಹೊರ […]
ಕೊರೊನಾ ವಾರಿಯರ್ಸ್, ಬಡವರು, ಅಸಹಾಯಕರಿಗೆ ರೋಗ ನೀರೋಧಕ ಔಷಧಿ ನೀಡುವ ಮೂಲಕ ಗಮನ ಸೆಳೆದ ಕನೇರಿ ಮಠ, ಸಂಘದ ಕಾರ್ಯಕರ್ತರು
ವಿಜಯಪುರ: ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಸಾಕಷ್ಟು ತೊಂದರೆ ಉಂಟು ಮಾಡಿದೆ. ಈ ಎರಡನೇ ಅಲೆಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಸೋಂಕಿತರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದರೂ ಕೊರೊನಾ ಭಯ ಮಾತ್ರ ಮುಂದುವರೆದಿದೆ. ಅದರಲ್ಲೂ ಸರಕಾರ ಕೊರೊನಾ ತಡೆಗಟ್ಟಲು, ಸೋಂಕಿತರಿಗೆ ಚಿಕಿತ್ಸೆ ನೀಡಲು ಹಗಲಿರುಳು ಶ್ರಮಿಸುತ್ತಿದ್ದು, ಇತ್ತ ಮಠಗಳೂ ಕೂಡ ಜನರ ಸಹಾಯಕ್ಕೆ ಧಾವಿಸಿವೆ. ಉಳ್ಳವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಹಣ ನೀಡಿ ಖರೀದಿಸಿದರೆ, ಬಡವರಿಗೆ ಆರೋಗ್ಯವರ್ಧಕ ಔಷಧಿಗಳು ಮರಿಚಿಕೆಯಾಗಿದ್ದವು. ಆದರೆ, ಇಂಥ ಬಡವರ ಪಾಲಿಗೆ […]