ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮಟಮಟ ಮಧ್ಯಾಹ್ನ ಆಗಸದಲ್ಲಿ ಕೌತುಕವೊಂದು ಕಾಣಿಸಿದೆ.
ಸೂರ್ಯನ ಸುತ್ತಲು ಕಾಮನ ಬಿಲ್ಲು ಕಾಣಿಸಿಕೊಂಡಿದೆ. ಸೂರ್ಯನನ್ನು ಈ ಕಾಮನ ಬಿಲ್ಲು ವೃತ್ತಾಕಾರದಲ್ಲಿ ಸುತ್ತುವರೆದಿದ್ದು, ಈ ದೃಶ್ಯವನ್ನು ಕಂಡು ಸ್ವತಃ ಪೊಲೀಸ್ ಪೇದೆ ಅಚ್ಚರಿಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆಯ ಹೊರಗಡೆ ಈ ದೃಶ್ಯ ಕಂಡು ಬಂದಿದ್ದು, ಮುಖ್ಯ ಪೊಲೀಸ್ ಪೇದೆ ವಿಶ್ವನಾಥ ಎಸ್. ಹಿಪ್ಪರಗಿ ಈ ಕೌತುಕವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಮಟಮಟ ಮಧ್ಯಾಹ್ನ ಹೊರಗಡೆ ಬಂದ ಪೇದೆ ಠಾಣೆಯಿಂದ ಹೊರ ಬಂದಾಗ ಆಗಸ ಗಮನಿಸಿದ್ದಾರೆ. ಆಗ ಈ ಅಚ್ಚರಿ ಗೋಚರಿಸಿದೆ.
ಸುಮಾರು 10 ರಿಂದ 15 ನಿಮಿಷ ಕಂಡ ಈ ಖಗೋಳ ಕೌತುಕವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿಯುವ ಮೂಲಕ ವಿಶ್ವನಾಥ ಎಸ್. ಹಿಪ್ಪರಗಿ ಆ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಇನ್ನು ಈ ರೀತಿ ಸೂರ್ಯನ ಸುತ್ತಲೂ ಕಾಮನ ಬಿಲ್ಲು ಕಾಣಲು ಕಾರಣ ಎನು ಎಂಬುದನ್ನು ಖಗೋಳ ವಿಜ್ಞಾನಿಗಳೇ ಬಹಿರಂಗ ಪಡಿಸಬೇಕಿದೆ.