ಕೊರೊನಾ ಹಿನ್ನೆಲೆ ಜನದಟ್ಟಣೆ ಕಡಿಮೆ ಮಾಡಲು ಬಬಲೇಶ್ವರ ಮತಕ್ಷೇತ್ರದ ಐದು ಕಡೆ ಬೀಜ, ಗೊಬ್ಬರ ವಿತರಣೆಗೆ ಹೊಸ ಕೇಂದ್ರ ಆರಂಭ- ಶಾಸಕ ಎಂ. ಬಿ. ಪಾಟೀಲ
ವಿಜಯಪುರ: ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆಗಳನ್ನು ನಡೆಸಿದ್ದು, ಅವರಿಗೆ ಬೀಜ ಹಾಗೂ ಗೊಬ್ಬರ ಸರಬರಾಜು ಮಾಡಲು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಐದು ಕಡೆಗಳಲ್ಲಿ ಹೆಚ್ಚುವರಿ ವಿತರಣಾ ಕೇಂದ್ರಗಳು ಆರಂಭವಾಗಲಿವೆ ಎಂದು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಟಕ್ಕಳಕಿ, ಹೊನವಾಡ, ಕಾಖಂಡಕಿ, ನಿಡೋಣಿ ಮತ್ತು ಕೃಷ್ಣಾ ನಗರಗಳಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಶನಿವಾರದಿಂದ ಈ ಸ್ಥಳಗಳಲ್ಲಿ ವಿತರಣೆ ಆರಂಭವಾಗಲಿದೆ ಎಂದು […]
ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ-ಅಧಿಕಾರಿಗಳು ಬಿಜೆಪಿ ಎಜೆಂಟರಂತೆ ವರ್ತಿಸುತ್ತಿದ್ದಾರೆ- ಶಾಸಕ ದೇವಾನಂದ ಚವ್ಹಾಣ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯಪುರ ನಾಗಠಾಣ(ಮೀ) ಶಾಸಕ ಡಾ. ದೇವಾನಂದ ಚವ್ಹಾಣ ಮತ್ತೋಮ್ಮೆ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನಾಗಠಾಣ ಮತಕ್ಷೇತ್ರದಲ್ಲಿ ಕೊವಿಡ್ ಕೇರ್ ಸೆಂಟರ್ ಗಳು ಖಾಲಿ ಖಾಲಿಯಾಗಿವೆ. ನನ್ನ ಮತಕ್ಷೇತ್ರದಲ್ಲಿ ಎಂಟು ಕೊವಿಡ್ ಕೇರ್ ಸೆಂಟರ್ ಗಳಿವೆ. ಇನ್ನೂ ಹೆಚ್ಚಿನ ಕೊವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಮನವಿ ಮಾಡಿದ್ದಿನಿ. ಆದರೆ, ಕೊವಿಡ್ ಕೇರ್ ಸೆಂಟರ್ ಗಳ ಪರಿಸ್ಥಿತಿ ಯಾವ ರೀತಿ ಆಗಿದೆ […]
ವಿಜಯಪುರ ನಗರವನ್ನು ಲಾಕಡೌನ್ ಮುಕ್ತ ಮಾಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಶಾಸಕ ಯತ್ನಾಳ
ವಿಜಯಪುರ: ವಿಜಯಪುರ ನಗರವನ್ನು ಲಾಕಡೌನ್ ಮುಕ್ತವಾಗಿ ಮಾಡಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬೆ. 10 ರಿಂದ ಸಂ. 5 ಗಂಟೆಯವರೆಗೆ ವಿಜಯಪುರ ನಗರದಲ್ಲಿ ಲಾಕಡೌನ್ ತೆರವುಗೊಳಿಸಬೇಕು ಎಂದು ಯತ್ನಾಳ ಆಗ್ರಹಿಸಿದ್ದು, ಯತ್ನಾಳ ಬರೆದಿರುವ ಪತ್ರದ ಪ್ರತಿ ಬಸವ ನಾಡಿಗೆ ಲಭ್ಯವಾಗಿದೆ. ಈ ಪತ್ರದಲ್ಲಿ ವಿಜಯಪುರ ನಗರವನ್ನು ಯಾಕೆ ಲಾಕಡೌನ್ ಮುಕ್ತ ಮಾಡಬೇಕು ಎಂಬುದನ್ನು ಯತ್ನಾಳ ಜಿಲ್ಲಾಧಿಕಾಪಿ ಪಿ. ಸುನೀಲ ಕುಮಾರ ಅವರಿಗೆ ಮನವರಿಕೆ ಮಾಡಿ ಕೊಡುವ […]
ಕೊರೊನಾ, ಲಾಕಡೌನ್ ಕಲಿಸಿದ ಪಾಠ- ಮನೆಯಂಗಳದಲ್ಲಿಯೇ ಕೈದೋಟ ನಿರ್ಮಿಸಿ ಮಾದರಿಯಾದ ದಂಪತಿ
ವಿಜಯಪುರ: ಕೊರೊನಾ ಎರಡನೇ ಅಲೆ ಬಸವ ನಾಡು ಅಷ್ಟೇ ಅಲ್ಲ, ಇಡೀ ರಾಜ್ಯ ಮತ್ತು ದೇಶವನ್ನು ಹೈರಾಣಾಗಿಸಿದೆ. ಇದರ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡಿರುವ ಲಾಕಡೌನ್ ಜನರನ್ನು ಮನೆಯಲ್ಲಿಯೇ ಕೂಡುವಂತೆ ಮಾಡಿದ್ದು, ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ಬಸವ ನಾಡಿನ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ. ಬರಿ ಮನೆಯಲ್ಲಿ ಇದ್ದು ಏನು ಉಪಯೋಗ? ಈ ಸಮಯವನ್ನು ಸದುಪಯೋಗ ಪಡಿಸಿಕೊಂಡರಾಯಿತು ಎಂದು ಯೋಚಿಸಿದ ವಿಜಯಪುರ ನಗರದ ದಂಪತಿ ಹೊಸ ಯೋಜನೆಯನ್ನು ರೂಪಿಸಿ ಜಾರಿಗೆ ತಂದು ಈಗ ಅದರ ಫಲ ಉಣ್ಣುತ್ತಿದ್ದಾರೆ. […]