ಹೆಸರಿಗೆ ತಕ್ಕ ಕಾರ್ಯ- ಬಡವರಿಗೆ, ಕೊರೊನಾ ವಾರಿಯರ್ಸ್ ಗೆ ಆಹಾರದ ಕಿಟ್ ದಾನ ನೀಡಿದ ದಾನಶ್ರೀ ಸೌಹಾರ್ದ

ವಿಜಯಪುರ: ಕೊರೊನಾ ಎರಡನೇ ಅಲೆಯಿಂದಾಗಿ ಬಡವರು, ದಿನಗೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಲಾಕಡೌನ್ ಜಾರಿಯಿಂದಾಗಿ ಕೆಲಸವಿಲ್ಲದೆ ಹಲವಾರು ಜನ ಆರ್ಥಿಕವಾಗಿಯೂ ಮಗ್ಗಟ್ಟು ಎದುರಿಸುತ್ತಿದ್ದು, ಸರಕಾರ ಹಲವಾರು ವರ್ಗಗಳಿಗೆ ಪ್ಯಾಕೇಜ್ ನೀಡಿದರೂ ಅದು ಸಾಕಾಗುತ್ತಿಲ್ಲ ಎಂಬ ದೂರುಗಳೂ ಇವೆ.

ವಿಜಯಪುರದಲ್ಲಿ ದಾನಶ್ರೀ ಸೌಹಾರ್ದ ಸಂಸ್ಥೆಯ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಭಾಷಣ

ಈ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರ ದಲ್ಲಿ ನಾನಾ ಸಂಘ-ಸಂಸ್ಥೆಗಳು ಸಹಾಯ ನಿರೀಕ್ಷಿಸುತ್ತಿರುವವ ನೆರವಿಗೆ ಧಾವಿಸಿವೆ. ಅದರಲ್ಲಿ ಹೆಸರಿಗೆ ತಕ್ಕಂತೆ ದಾನಶ್ರೀ ಸೌಹಾದ್ರದ ಕ್ರೆಡಿಟ್ ಸಹಕಾರಿ ಕೂಡ ಜನಮೆಚ್ಚುವ ಕಾರ್ಯ ಮಾಡಿದೆ. ಕೈಯಲ್ಲಿ ಕೆಲಸ ಇಲ್ಲದೇ ಒಂದು ತುತ್ತಿಗೂ ಪರದಾಡುತ್ತಿರುವ ಬಡವರ ನೆರವು ನೀಡಿವೆ.

ವಿಜಯಪುರದಲ್ಲಿ ದಾನಶ್ರೀ ಸೌಹಾರ್ದದಿಂದ ಬಡುವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮ

ಇದರ ಜೊತೆ ಕೊರೊನಾ ನಿಯಂತ್ರಣಕ್ಕಾಗಿ ಜೀವದ ಹಂಗು ತೊರೆದು ಕರ್ತವ್ಯ ನಿರತಾರಿರುವ ಕೊರೊನಾ ವಾರಿಯರ್ಸ್ ಗಳಿಗೂ ಸಹಾಯ ಮಾಡುತ್ತಿದೆ. ಈ ಸಂಸ್ಥೆ ಬಡವರು, ರಸ್ತೆ ಬದಿ ವ್ಯಾಪಾರಿಗಳು ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಫುಡ್ ಕಿಟ್ ವಿತರಣೆ ಮಾಡುವ ಮೂಲಕ ಗಮನ ಸೆಳೆದಿವೆ.

ವಿಜಯಪುರದಲ್ಲಿ ದಾನಶ್ರೀ ಸೌಹಾರ್ದದಿಂದ ಬಡುವರಿಗೆ ನೀಡಿದ ಆಹಾರ ಧಾನ್ಯಗಳ ಕಿಟ್

ವಿಜಯಪುರ ನಗರದ ಆನಂದ ನಗರದಲ್ಲಿ ನಡೆದ ನಡೆದ ಕಾರ್ಯಕ್ರಮದಲ್ಲಿ ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರ ಮೂಲಕ ಆಹಾರದ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸರಕಾರ, ಜನಪ್ರತಿನಿಧಿಗಳ ಜೊತೆ ಸಾರ್ವಜನಿಕರು ಮತ್ತು ನಾನಾ ಸಂಘ-ಸಂಸ್ಥೆಗಳೂ ಕೂಡ ಬಡವರ ಮತ್ತು ಕೊರೊನಾ ವಾರಿಯರ್ಸ್ ನೆರವಿಗೆ ಮುಂದಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಸೌಹಾರ್ಧದ ಹೆಸರಿನಲ್ಲಿರುವಂತೆ ದಾನಶ್ರೀ ಸಹಕಾರಿ ನಿಯಮಿತ ಹೆಸರಿಕೆ ತಕ್ಕಂತೆ ದಾನ ಮಾಡುತ್ತಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ವಿಜಯಪುರದಲ್ಲಿ ದಾನಶ್ರೀ ಸೌಹಾರ್ದದಿಂದ ಬಡುವರಿಗೆ ನೀಡಿದ ಆಹಾರ ಧಾನ್ಯಗಳ ಕಿಟ್

ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರಿ ನಿಯಮಿತದ ಅಧ್ಯಕ್ಷ ಅಪ್ಪು ಇಟ್ಟಂಗಿ, ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ತಮ್ಮ ಸಂಸ್ಥೆ ಬಡವರಿಗಾಗಿ ಈ ರೀತಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌