ವಿಜಯಪುರ ನಗರದ ಆದರ್ಶ ನಗರದಲ್ಲಿ ಕನೇರಿ ಮಠದ ಆರೋಗ್ಯ ವರ್ಧಕ ಔಷಧಿ ಉಚಿತವಾಗಿ ವಿತರಣೆ

ವಿಜಯಪುರ: ಕೊರೊನಾ ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ವಹಿಸಲು ಮತ್ತು ಆರೋಗ್ಯ ವರ್ಧಿಸಲು ಮಹಾರಾಷ್ಟ್ರದ ಕೊಲ್ಹಾಪುರದ ಕನೇರಿ ಮಠದ ಶ್ರೀ ಅದೃಷ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೀಡಿರುವ ಆರೋಗ್ಯ ವರ್ಧಕ ಔಷಧಿಯ ವಿತರಣೆ ಕಾರ್ಯ ವಿಜಯಪುರ ಜಿಲ್ಲೆಯಲ್ಲಿ ಮುಂದುವರೆದಿದೆ.

ವಿಜಯಪುರ ನಗರದ ಆದರ್ಶ ನಗರದಲ್ಲಿರುವ ಶ್ರೀ ಹನುಮಾನ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಚಂದ್ರಶೇಖರ ಕವಟಗಿ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗುರಲಿಂಗಪ್ಪ ಅಂಗಡಿ ಚಾಲನೆ ನೀಡಿದರು.

ವಿಜಯಪುರ ನಗರದ ಆದರ್ಶ ನಗರದಲ್ಲಿ ಆರೋಗ್ಯ ವರ್ಧಕ ಔಷಧಿ ತಯಾರಿಸುತ್ತಿರುವುದು

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿತ ಸದಸ್ಯರಾದ ಧರ್ಮರಾಯ ಮಮದಾಪುರ, ಎಸ್. ಐ. ಪಟ್ಟಣಶೆಟ್ಟಿ, ಎಸ್. ಎಸ್. ಹರನಾಳ, ಅಶೋಕ ನಡುವಿನಮನಿ, ಎಸ್. ಪಿ. ಚೌಧರಿ, ಸಮಾಜ ಸೇವಕ ಅಶೋಕ ತಿಮಶೆಟ್ಟಿ, ಬಡವಾಣೆ ನಿವಾಸಿಗಳಾದ ವಿಶ್ವನಾಥ ವೈ. ಶಟಗಾರ ಮುಂತಾದವರು ಉಪಸ್ಥಿತರಿದ್ದರು.

ಆದರ್ಶ ನಗರ ಶ್ರೀ ಹನುಮಾನ ದೇವಸ್ಥಾನ ಜೀರ್ಣೋದ್ದಾರ ಸೇವಾ ಸಮೀತಿ ಮತ್ತು ಆದರ್ಶ ನಗರ ಅಭಿವೃಧ್ಧಿ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸುಮಾರು 500 ಜನರಿಗೆ ಆರೋಗ್ಯ ವರ್ಧಕ ಔಷಧಿಯನ್ನು ವಿತರಿಸಲಾಯಿತು.

ಮಹಾರಾಷ್ಟ್ರದ ಕೊಲ್ಹಾರ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಕಳುಹಿಸಿರುವ ಆರೋಗ್ಯ ವರ್ಥದ ಔಷಧಿ

ಕನೇರಿ ಮಠದಿಂದ ಈ ಔಷಧಿಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತೆಗೆದುಕೊಂಡು ಬಂದಿದ್ದು, ವಿಜಯಪುರ ಜಿಲ್ಲಾದ್ಯಂತ ವಿತರಿಸುವಂತೆ ಸಂಘ ಪರಿವಾರದವರಿಗೆ ಉಸ್ತುವಾರಿ ವೀಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಆರ್ ಎಸ್ ಎಸ್ ಕಾರ್ಯಕರ್ತರು ಆರೋಗ್ಯ ವರ್ಧಕ ಔಷಧಿ ವಿತರಣೆಯಲ್ಲಿ ತೊಡಗಿದ್ದು, ಈಗಾಗಲೇ ಜಿಲ್ಲಾದ್ಯಂತ ಸುಮಾರು ಮೂರು ಲಕ್ಷ ಜನರಿಗೆ ಆರೋಗ್ಯ ವರ್ಧಕ ಔಷಧಿಯನ್ನು ವಿತರಿಸಿದ್ದಾರೆ. ಅಲ್ಲದೇ, ವಿಜಯಪುರ ನಗರವೊಂದರಲ್ಲಿಯೇ ಸುಮಾರು 60 ಸಾವಿರಕ್ಕೂ ಹೆಚ್ಚು ಜನರಿಗೆ ಈ ಔಷಧಿಯನ್ನು ವಿತರಿಸಲಾಗಿದೆ ಎಂದು ಆರ್ ಎಸ್ ಎಸ್ ಮೂಲಗಳು ಬಸವ ನಾಡಿಗೆ ತಿಳಿಸಿವೆ.

ಆದರ್ಶ ನಗರ ಶ್ರೀ ಹನುಮಾನ ದೇವಸ್ಥಾನ ಜೀರ್ಣೋದ್ದಾರ ಸೇವಾ ಸಮೀತಿ (ರಿ) ಹಾಗು ಆದರ್ಶ ನಗರ ಅಭಿವೃಧ್ಧಿ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 09/06/2021 ರಂದು ಬುಧವಾರ ಮುಂಜಾನೆ 10 ಘಂಟೆಗೆ ಕರೋನಾ ನಿರ್ಮೂಲನೆಗಾಗಿ ಕೊಲ್ಹಾಪೂರ ಕಣೇರಿ ಮಠದ ಶಕ್ತಿ ವರ್ಧಕ ಒೌಷದವನ್ನು ಉಚಿತವಾಗಿ ವಿತರಿಸಲಾಗುವದು ಆದ್ದರಿಂದ ಆದರ್ಶ ನಗರದ ಎಲ್ಲ ನಾಗರಿಕರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ವಿನಂತಿಸಲಾಗಿದೆ
ಈ ಕಾರ್ಯಕ್ರಮ ಚಾಲನೆಗೆ ಹಿರಿಯ ಮುಖಂಡರಾದ ಶ್ರೀ ಚಂದ್ರಶೇಖರ ಕವಟಗಿಯವರು ಹಾಗು ಶ್ರೀ ಗುರಲಿಂಗಪ್ಪ ಡಿ ಅಂಗಡಿ ಅದ್ಯಕ್ಷರು ಆದರ್ಶ ನಗರ ಶ್ರೀ ಹನುಮಾನ ಜೀರ್ಣೊದ್ದಾರ ಸೇವಾ ಸಮೀತಿ ಮತ್ತು ಮಾಜಿ ಮಹಾನಗರ ಪಾಲಿಕೆಯ ಸದಶ್ಶರಾದ ಶ್ರೀ ಎಮ ಎಸ್ ಕರಡಿಯವರು ಹಾಗು ಶ್ರೀ ರವೀಂದ್ರ ಲೋಣಿಯವರು ಹಾಗು ಆರ್ ಎಸ್ ಎಸ್ ಕಾರ್ಯಕರ್ತರು ಹಿರಿಯ ಸಮಾಜ ಸೇವಕರಾದ ಶ್ರೀ ಅಶೋಕ ತಿಮಶೆಟ್ಟಿ ಯವರು ಬಡಾವಣೆಯ ಹಿರಿಯರು ಹಾಜರಿರುತ್ತಾರೆ

Leave a Reply

ಹೊಸ ಪೋಸ್ಟ್‌