ವಿಜಯಪುರ: ಕೊರೊನಾ ಮತ್ತು ಲಾಕಡೌನ್ ಎಲ್ಲರಿಗೂ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಿದ್ದರೆ, ಹಲವರಿಲ್ಲಿನ ಪ್ರತಿಭೆಯನ್ನು ಹೊರ ಹಾಕಲೂ ಕಾರಣವಾಗಿವೆ.
ಲಾಕಡೌನ್ ಗೂ ಮುಂಚೆ ಸ್ಟೀಯರಿಂಗ್ ಹಿಡಿಯುತ್ತಿದ್ದ ಕೈಗಳು ಈಗ ಬಸ್ ಡಿಲೋ ಮತ್ತು ಬಸ್ ನಿಲ್ದಾಣಗಲಲ್ಲಿ ಚಿತ್ತಾರ ಮೂಡಿಸಲು ಕಾರಣವಾಗಿವೆ. ವಿಜಯಪುರ ಈಶಾನ್ಯ ಸಾರಿಗೆ ಸಿಬ್ಬಂದಿ ಈಗ ಲಾಕಡೌನ್ ಸಂದರ್ಭದಲ್ಲಿ ಬೇರೊಂದು ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಕೆಲವು ಜನ ಪ್ರತಿಭಾನ್ವಿತ ಸಿಬ್ಬಂದಿ ತಮ್ಮ ಕಲೆಯ ಪ್ರದರ್ಶನ ಮಾಡಿದ್ದಾರೆ. ಬಿಡುವಿನ ಈ ಸಂದರ್ಭದಲ್ಲಿ ಪೇಟಿಂಗ್ ಮಾಡುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನೂ ಸಾರಿದ್ದಾರೆ.
ವಿಜಯಪುರ ನಗರದ ಡಿಪೋಗಳ ಸಂಖ್ಯೆ ಒಂದು, ಎರಡು ಮತ್ತು ಮೂರರಲ್ಲಿ ನಾನಾ ರೀತಿಯ ಪೇಟಿಂಗ್ ಮಾಡುವ ಮೂಲಕ ಚಾಲಕರು ಕೊರೊನಾ ಮತ್ತು ಇತರ ಸಾಮಾಜಿಕ ಜವಾಬ್ದಾರಿಗಳ ಜಾಗೃತಿ ಮೂಡಿಸಿದ್ದಾರೆ. ಮದ್ಯ ಸೇವಿಸಿದರೆ ಆಗುವ ಆಪತ್ತುಗಳು, ಗಿಡ ಕಡಿಯುವುದರಿಂದ ಉಂಟಾಗುವ ಸಮಸ್ಯೆಗಳು, ಅವಸರ ಚಾಲನೆಯಿಂದಾಗುವ ತೊಂದರೆಗಳು ಹೀಗೆ ತರಹೇವಾರಿ ಸಮಸ್ಯೆಗಳ ಕುರಿತು ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಇದು ಇಲ್ಲಿನ ಹಿರಿಯ ಅಧಿಕಾರಿಗಳಿಗೆ ಸಂತಸವನ್ನುಂಟು ಮಾಡಿದೆ.
ಅಷ್ಟೇ ಅಲ್ಲ ವಿಜಯಪುರ ನಗರದ ಕೇಂದ್ರ ನಗರದ ಬಸ್ ನಿಲ್ದಾಣದ ಒಳಗೋಡೆಗಳ ಮೇಲೆ ಕೂಡ ಹಸಿರಾದರೆ ಜಗತ್ತು ಅಳಿಯುವದು, ವೇಗ ನಿಯಂತ್ರಿಸಿ ಅಪಘಾತ ತಪ್ಪಿಸಿ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ಕೊರೋನಾ ತಡೆಗಟ್ಟುವ ಹಿನ್ನಲೆ ಸರಿಯಾಗಿ ಮಾಸ್ಕ ಬಳಿಸಿ, ಆರು ಅಡಿ ಅಂತರ ಕಾಯ್ದುಕೊಳ್ಳಿ, ಗಿಡ ಮರಗಳ ನಾಶದಿಂದ ಉಂಟಾಗುವ ಆಕ್ಸಿಜನ್ ಸಮಸ್ಯೆ, ಸ್ವಚ್ಚ ಭಾರತದ ಪರಿಕಲ್ಪನೆ ಹೀಗೆ ಹಲವು ಚಿತ್ರಗಳನ್ನು ಬಸ್ ನಿಲ್ದಾಣದ ಒಳಗಿನ ಗೋಡೆಗಳ ಮೇಲೆ ಬಿಡಿಸಿದ್ದಾರೆ.
ಕೊರೊನಾದ ಈ ಸಂದರ್ಭದಲ್ಲಿ ಖಾಲಿ ಕುಳಿತು ಸಮಯ ಹಾಳು ಮಾಡುವ ಬದಲು ಕಲೆಯನ್ನು ಸಿಬ್ಬಂದಿಗಳು ಕಚೇರಿಗೆ ಬಂದು ಈ ರೀತಿಯಾಗಿ ಚಿತ್ರಗಳನ್ನು ಬಿಡಿಸಿ ಸಮಾಜಕ್ಕೂ ಉತ್ತಮ ಸಂದೇಶ ಸಾರುತ್ತಿರುವುದಕ್ಕೆ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಹಿರೆಕುರುಬರ ಮತ್ತು ವಿಜಯಪುರ ವಿಭಾಗೀಯ ಸಂಚಾರಿ ಅಧಿಕಾರಿ ದೇವಾನಂದ ಬಿರಾದಾರ. ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಿಬ್ಬಂದಿಯ ಕಾರ್ಯಕ್ಕೆ ಶಹಬ್ಬಾಷ್ ಹೇಳಲೇಬೇಕು.