ಅಸಂಘಟಿತ ಕಾರ್ಮಿಕರಿಗೆ ಸಹಾಯ ಧನ: ಸದುಪಯೋಗಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕರೆ

ವಿಜಯಪುರ: ರಾಜ್ಯ ಸರಕಾರ ಅಸಂಘಟಿತ ಕಾರ್ಮಿಕರಾದ ಆಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲ‌ರಗಳು, ಮೆಕ್ಯಾನಿಕ್ ಗಳು, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಚಮ್ಮಾರರು
ಹಾಗೂ ಭಟ್ಟಿ ಕಾರ್ಮಿಕರು ಸೇರಿದಂತೆ ಒಟ್ಟು 12 ವರ್ಗಗಳಿಗೆ ತಲಾ ರೂ.2000 ಗಳಂತೆ ಮತ್ತು ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರೂ.3000 ಸಹಾಯ ಧನವನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿಗಳಾದ ಪಿ. ಸುನಿಲ ಕುಮಾರ ತಿಳಿಸಿದ್ದಾರೆ.

ಅರ್ಹ ಫಲಾನುಭವಿಗಳು ಕರ್ನಾಟಕ ಸರಕಾರದ ಸೇವಾ ಸಿಂಧು ತಂತ್ರಾಂಶದಲ್ಲಿ
https://sevasindhu.karnataka.gov.in ಸಿಟಿಜನ್ ಲಾಗಿನ್ ಆಗಿ ಅಗತ್ಯ ದಾಖಲೆಗಳೊಂದಿಗೆ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲೆಯ ಗ್ರಾಮೀಣ ಮಟ್ಟದಲ್ಲಿ ಗ್ರಾಮ್ ಒನ್ ಕೇಂದ್ರದ ಮೂಲಕ ಹಾಗೂ ನಗರ ಪ್ರದೇಶದಲ್ಲಿ ಸೇವಾ ಸಿಂಧು ನಾಗರಿಕ ಸೇವಾ ಕೇಂದ್ರದ ಮೂಲಕ ಅಗತ್ಯ ದಾಖಲೆಗಳೊಂದಿಗೆ ಸೇವಾ ಶುಲ್ಕವನ್ನು ಪಾವತಿಸಿ ಸಹಾಯಧನವನ್ನು ಪಡೆಯಬಹುದಾಗಿದೆ.

ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್‌ಗಳು , ಮೆಕ್ಯಾನಿಕ್‌ಗಳು, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು ,ಕುಂಬಾರರು, ಚಮ್ಮಾರರು ಹಾಗೂ ಭಟ್ಟಿ ಕಾರ್ಮಿಕರು ಸೇರಿದಂತೆ ಒಟ್ಟು 12 ವರ್ಗಗಳಿಗೆ ರೂ. 25 ಸೇವಾ ಶುಲ್ಕವನ್ನು ಪಾವತಿಸಬೇಕು ಹಾಗೂ
ಟ್ಯಾಕ್ಸಿ ಚಾಲಕರು ರೂ. 20 ಸೇವಾ ಶುಲ್ಕ ಪಾವತಿಸಬೇಕು. ಕೆಲವೊಂದು ನಾಗರಿಕ ಸೇವಾ ಕೇಂದ್ರದಲ್ಲಿ ಸರಕಾರವು ನಿಗದಿ ಪಡಿಸಿದ ಸೇವಾ ಶುಲ್ಕವನ್ನು ಹೊರತು ಪಡಿಸಿ ಹೆಚ್ಚಿಗೆ ಹಣ ಕೇಳಿದಲ್ಲಿ ಸಾರ್ವಜನಿಕರು ಸಮೀಪದ ತಹಸೀಲ್ದಾರರು ಅಥವಾ ಉಪವಿಭಾಗಾಧಿಕಾರಿ ಇಲ್ಲವೇ ಜಿಲ್ಲಾಧಿಕಾರಿಗಳ ಕಛೇರಿಗೆ ದೂರನ್ನು ಸಲ್ಲಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ‌.

ಗ್ರಾಮ್ ಓನ್ ನಾಗರಿಕ ಸೇವಾ ಕೇಂದ್ರದ ಆಪರೇಟರ್‌ಗಳು ಸರಕಾರವು ನಿಗದಿ ಪಡಿಸಿದ ಸೇವಾ ಶುಲ್ಕವನ್ನು ಹೊರತು ಪಡಿಸಿ ಹೆಚ್ಚಿಗೆ ಮೊತ್ತವನ್ನು ಪಡೆಯಬಾರದು. ಒಂದು ವೇಳೆ ಹೆಚ್ಚಿಗೆ ಹಣ ಪಡೆದ ಬಗ್ಗೆ ದೂರು ದಾಖಲಾದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌