ಕೊರೊನಾ, ಲಾಕಡೌನ್ ಸಮಯದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ 50 ದಿನಗಳಲ್ಲಿ 50 ಸಾವಿರ ಜನರಿಗೆ ಆಹಾರ ವಿತರಣೆ

ವಿಜಯಪುರ: ಕೊರೊನಾ ಮತ್ತು ಲಾಕಡೌನ ಸಂದರ್ಭದಲ್ಲಿ ಸತತ 50 ದಿನ 50 ಸಾವಿರ ಹಸಿದ ಹೊಟ್ಟೆಗಳ ಹಸಿವು ನೀಗಿಸುವ ಮೂಲಕ ಗಣೇಶ ಭಕ್ತರು ಮತ್ತು ಮಾಜಿ ಸಚಿವರು ಗಮನ ಸೆಳೆದಿದ್ದಾರೆ.

ಹೀಗೆ ಹಸಿವಿನಿಂದ ಬಳಲಿದವರಿಗೆ ಬಸವನಾಡಿನ ಗಣೇಶ ಭಕ್ತರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅನ್ನ ಹಾಕಿದ್ದಾರೆ. ಸಮಾಜ ಸೇವೆಗೆ ನಿಂತು ಸೈ ಎನಿಸಿಕೊಂಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೇ, ಹೊಟೇಲುಗಳಿಗೆ ತೆರಳಲು ಸಾಧ್ಯವಾಗದೇ, ಆರ್ಥಿಕ ಸಂಕಷ್ಟದಲ್ಲಿದ್ದವರ ಪಾಲಿಗೆ ಇವರು ಈ ಮೂಲಕ ಅನ್ನದಾತರಾಗಿದ್ದಾರೆ.

ಕೊರೊನಾ ಮತ್ತು ಲಾಕಡೌನ್ ಹಿನ್ನೆಲೆಯಲ್ಲಿ ಒಂದು ಹೊತ್ತಿನ ತುತ್ತಿಗೂ ಪರದಾಡುತ್ತಿದ್ದವರಿಗೆ ವಿಜಯಪುರ ನಗರದಲ್ಲಿ ಸಾರ್ವಜನಿಕ ಗಜಾನನ ಮಂಡಳಿಗಳ ಮಹಾಮಂಡಳ ಕಾರ್ಯಕರ್ತರು ಅನ್ನ ದಾಸೋಹಕ್ಕೆ ನಿಂತಿದ್ದಾರೆ. ಈ ಮಹಾಮಂಡಳದ ಸದಸ್ಯರು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸಮಾಜ ಸೇವೆ, ಪರಿಸರ ಪ್ರೇಮದ ಜೊತೆಗೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತ ಬಂದಿದ್ದಾರೆ. ಸೆಮಿ ಲಾಕ್ ಡೌನ್ ಆದಾಗಲೇ ಸುಮಾರು 60 ಕ್ಕೂ ಹೆಚ್ಚು ಯುವಕರು ಸೇರಿಕೊಂಡು ಅನ್ನದಾಸೋಹಕ್ಕೆ ಆರಂಭಿಸಿದ್ದಾರೆ. ವಿಜಯಪುರ ನಗರದಲ್ಲಿ ಕೊರೊನಾ ಅಬ್ಬರಿಸುತ್ತಿರುವಾಗಲೇ ನಗರದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಹಾಗೂ ಅವರ ಪರಿಚಾರಕರಿಗೆ ಊಟ ವಿತರಿಸುವ ಮೂಲಕ ಬಸವಣ್ಣನವರ ತತ್ವದಂತೆ ಹಸಿದವರ ಹೊಟ್ಟೆ ತುಂಬಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಪ್ರತಿ ದಿನ ಚಪಾತಿ, ಪಲ್ಯ, ಜೊತೆಗೆ ಅನ್ಮ ಸಾಂಬಾರ ಇರುವ ಪುಡ್ ಕಿಟ್ ವಿತರಿಸಿದ್ದಾರೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ವಿತರಿಸಿ ಹಸಿದವರ ಪಾಲಿಗೆ ಅನ್ನದಾಸೋಹಿಗಳಾದ್ದಾರೆ. ವಿಜಯಪುರ ಜಿಲ್ಲೆ ಹೇಳಿ ಕೇಳಿ ಶರಣರ ನಾಡು. ಶರಣರ ತತ್ವಗಳನ್ನು ಪಾಲಿಸಿ ಗಣೇಶ ಭಕ್ತರು ನಿಜವಾಗಿಯೂ ಒಂದೊಳ್ಳೆ ಕೆಲಸ ಮಾಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆ‌ ಉದ್ಯೋಗ ಸಿಗದ ಕಾರಣ ಖಾಲಿಯಿದ್ದ ಅಡುಗೆಯವರನ್ನು ಇವರು ಕೆಲಸ ಪಡೆದುಕೊಂಡಿದ್ದಾರೆ. ಅಲ್ಲದೆ ಸಂಕಷ್ಟಕ್ಕೆ ಗುರಿಯಾಗಿದ್ದ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಅನ್ನಹಾಕುವ ಮೂಲಕ ಗಮನ ಸೆಳೆದಿದ್ದು, ಮಾಜಿ ಸಚಿವರ ಕಾರ್ಯಕ್ಕೆ ಮತ್ತು ಗಜಾನನ ಮಹಾ‌ ಮಹಾಮಂಡಳದ ಸದಸ್ಯರ ಕಾರ್ಯವನ್ನು ಫಲಾನುಭವಿ ಶ್ವೇತಾ ಮತ್ತು ಅಡುಗೆ ತಯಾರಕಿ ಕಸ್ತೂರಿ ಶ್ಲಾಘಿಸಿದ್ದಾರೆ.

ಗಣೇಶ ಭಕ್ತರಿಗೆ ಅನ್ನದಾಸೋಹದ ಕಾರ್ಯಕ್ಕೆ ಪ್ರೋತ್ಸಾಹಿಸುವ ಮೂಲಕ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾದರಿಯಾಗಿದ್ದಲ್ಲದೇ ಸ್ಥಳೀಯರ ಹಾಗೂ ಸಂಘ ಸಂಸ್ಥೆಗಳ ಮೂಲಕ ತಮ್ಮ ಕೈಯಿಂದ ಹಣ ಹಾಕಿ ಅನ್ನದಾಸೋಹದ ಪರಿಕಲ್ಪನೆಗೆ ಚಾಲನೆ ನೀಡಿದ್ದಾರೆ. ಗಣೇಶೋತ್ಸವ ಎಂದರೆ ಕೇವಲ ಗಣೇಶ ಪ್ರತಿಷ್ಠಾಪಿಸಿ ಡಿಜೆ ಸೌಂಡ್ ಗೆ ಸ್ಟೆಪ್ ಹಾಕುವದಲ್ಲ. ಬದಲಿಗೆ ಸಾಮಾಜಿಕ ಪರಿಸರ ಕಾಳಜಿ ಮೆರೆಯುವದು ಎಂದು
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದ್ದಾರೆ.

ಪ್ರತಿದಿನ ಬೆ.‌6ಕ್ಕೆ ಪ್ರಾರಂಭವಾಗುತ್ತಿದ್ದ ಅಡುಗೆ ತಯಾರಿ ಕೆಲಸ ರಾತ್ರಿ ವರೆಗೆ ಮುಂದುವರೆಯುತ್ತಿತ್ತು. ‌ಪ್ರತಿನಿತ್ಯ ನಾನಾ ತರಕಾರಿ, ಅಗತ್ಯ ವಸ್ತುಗಳ ತರಲು ಯುವಕ ಪಡೆ ಕಾರ್ಯ ನಿರ್ವಹಿಸಿದೆ. ಈ ಯುವಕರು ಹಗಲಿರುಳು ಎನ್ನದೆ ಶ್ರಮಿಸಿದ್ದಾರೆ. ಅಲ್ಲದೇ, ಸತತ 50; ದಿನಗಳ ಕಾಲ ಕನಿಷ್ಠ 50 ಸಾವಿರ ಜನರಿಗೆ ದಿನನಿತ್ಯ ಆಹಾರ ಒದಗಿಸಿದ್ದಾರೆ‌.

Leave a Reply

ಹೊಸ ಪೋಸ್ಟ್‌