ವಿಜಯಪುರ: ಪೋಷಕರು ನಿರ್ಲಕ್ಷ್ಯಿಸಿದರೆ ಏನಾಗಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಯಾವೆಲ್ಲ ವಸ್ತುಗಳು ಎಲ್ಲೆಲ್ಲಿ ಹೇಗೇಗೆ ಸುರಕ್ಷಿತವಾಗಿ ಇಡಬೇಕು ಎಂದು ಜಾಗೃತೆ ವಹಿಸಲೂ ಇದೊಂದು ಉದಾಹರಣೆ ಸಾಕು.
ಬಾಲಕನ ಮಕ್ಕಳಾಟದಿಂದ ಆಕಸ್ಮಿಕವಾಗಿ ಹಾರಿದ ಗುಂಡು ಆತನ ತೊಡೆಗೆ ತಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆಸಿದೆ.
ಚಡಚಣ ಪಟ್ಟಣದ ಮರಡಿ(ಮಡ್ಡಿ) ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ನಾಲ್ಕು ವರ್ಷದ ಬಾಲಜ ಗಾಯಗೊಂಡಿದ್ದಾನೆ. ಇಂದು ಮಧ್ಯಾಹ್ಯದ ಸುಮಾರು ಮನೆಯಲ್ಲಿದ್ದ ವಾಲಕ ತಿಜೋರಿಯಲ್ಲಿದ್ದ ಗುಂಡುಗಳನ್ನು ಹಾಕಿಡಲಾಗಿದ್ದ ರಿವಾಲ್ವರ್ ತೆಗೆದುಕೊಂಡು ಆಟವಾಡಿದ್ದಾನೆ. ಆಗ, ಟ್ರಿಗರ್ ಒತ್ತಿದ ಕಾರಣ ರಿವಾಲ್ವರ್ ಗುಂಡು ಬಾಲಕನ ಹೊಟ್ಟೆಯ ಕೆಳಬಾಗಕ್ಕೆ ತಾಗಿ ಹೊರಗೆ ಹೋಗಿದೆ.
ನಂತರ ಈ ಘಟನೆ ಬಗ್ಗೆ ತಿಳಿದ ಆತನ ಪೋಷಕರು ಬಾಲಕನನ್ನು ಮೊದಲಿಗೆ ಚಡಚಣ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರಕ್ಕೆ ಕರೆದೊಕೊಂಡು ಹೋಗಿದ್ದಾರೆ.
ಅನುಮತಿ ಹೊಂದಿರುವ ರಿವಾಲ್ವರ ಇದಾಗಿದ್ದು, ಮನೆಯವರ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರ ಮಡಿವಾಳರ ಮತ್ತು ಪಿ ಎಸ್ ಐ ಸತಿಗೌಡರ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.