ವಿಜಯಪುರ: ಡ್ರಗ್ಸ್ ಕೇಸ್ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಚಿತ್ರನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಆ ವಿಚಾರದ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ನಾನು ತಪ್ಪು ಮಾಡಿಲ್ಲ. ಅಂದ್ರೆ ನಾವು ಟೆನ್ಷನ್ ಮಾಡಿಕೊಳ್ಳಬಾರದು ಡ್ರಗ್ಸ್ ವಿಚಾರದಲ್ಲಿ 100% ಟಾರ್ಗೆಟ್ ಮಾಡಲಾಗಿದೆ. ಬರಿ ಒಂದು ಕೇಸ್ ವಿಚಾರವಾಗಿ ಮಾತ್ರವಲ್ಲ. ಹೆಣ್ಣು ಮಕ್ಕಳು ಎಂದರೆ ಸಾಕು. ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತದೆ. ಹೆಣ್ಮಕ್ಕಳನ್ನು ತುಂಬಾ ಈಜಿಯಾಗಿ ರಾರ್ಗೆಟ್ ಮಾಡುವುದು ಹವ್ಯಾಸವಾಗಿದೆ. ಬ್ಲೇಮ್ ಮಾಡುವ ಬದಲು ಎಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲಿ ಕರೆಕ್ಟ್ ಆಗಿದ್ರೆ ಸಾಕು ಎಂದು ಅವರು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಅವರು ನಿಜವಾಗಿಯೂ ನನಗೆ ಪರಿಚಯವಿಲ್ಲ. ಅವರೊಂದಿಗೆ ನಾನು ಮಾತನಾಡಿಲ್ಲ. ಅವರು ಏನು ಮಾತಾಡುತ್ತಾರೋ ಮಾತನಾಡಲಿ. ನನಗೆ ಅವರ ಪರಿಚಯವಿಲ್ಲ. ಅವರವರ ಓಪಿನಿಯನ್ ಮಾತನಾಡುತ್ತಾರೆ. ಅದನ್ನು ನಾನು ಕಂಟ್ರೋಲ್ ಮಾಡಲು ಆಗಲ್ಲ. ನಾನು ಏನು ಮಾಡುತ್ತೇನೆ, ಏನು ಮಾತನಾಡುತ್ತೇನೆ ಎಂಬುವುದನ್ನು ಮಾತ್ರ ಕಂಟ್ರೋಲ್ ಮಾಡುತ್ತೇನೆ ಎಂದು ತಿಳಿಸಿದರು.
ನನ್ನನ್ನು ಎಲ್ಲರೂ ಇಷ್ಟ ಪಡುತ್ತಾರೆ. ನನಗೆ ಫ್ಯಾನ್ಸ್ ಇದ್ದಾರೆ. ಅವರಿಗೆಲ್ಲ ಧನ್ಯವಾದ ಹೇಳುತ್ತೇನೆ. ನನ್ನನ್ನು ಇಷ್ಟ ಪಟ್ಟವರಿಗೂ, ಇಷ್ಟ ಪಡದವರಿಗೂ ಥ್ಯಾಂಕ್ಯೂ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಕನ್ನಡ ಚಿತ್ರೋದ್ಯಮದಲ್ಲಿ ಕಾಸ್ಟಿಂಗ್ ಕೌಚ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಸ್ಟಿಂಗ್ ಕೌಚ್ ಎಂಬುದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಜರ್ನಿ ಮೇಲೆ ಅದು ಡಿಪೇಂಡ್ ಆಗಿರುತ್ತೆ. ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗುವುದಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಲೈಫ್‌ನಲ್ಲಿ ನನಗೆ ಎಕ್ಸಪೀರಿಯನ್ಸ್ ಆಗಿಲ್ಲ. ಲೈಫ್ ನಲ್ಲಿ ಎರಡು ಥರ ಜೀವನ ಇದೆ. ಒಂದು ಶಾರ್ಟ್ ಕಟ್. ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ನಾವು ಬೆಳೆಯುತ್ತೇವೆ. ಪ್ರತಿಯೊಂದು ಸ್ಟೆಪ್ ಬೈ ಸ್ಟೆಪ್ ಆಗುತ್ತೆ. ಶಾರ್ಟ್ ಕಟ್ ತಗೊಂಡ್ರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ. ಅತೀ ಶೀಘ್ರದಲ್ಲಿ ನೇಮು, ಫೇಮು, ದುಡ್ಡು ಗಳಿಸೋದನ್ನ ಬಿಟ್ಟು, ನಮ್ಮ ಕೆಲಸದ ಮೇಲೆ ನಾವು ಏನು ಮಾಡ್ತಿವಿ ಎಂಬುದರ ಮೇಲೆ ಫೋಕಸ್ ಮಾಡಬೇಕು ಎಂದು ಹೇಳಿದರು.
12 ವರ್ಷದಿಂದ ಸಿನೇಮಾ ಇಂಡಸ್ಟ್ರೀಯಲ್ಲಿದ್ದೇನೆ. ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ. ಯಾರಾದ್ರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದರೆ ಬಹುಷ ಅವರು ಅಂಥ ಪರಿಸ್ಥಿತಿ ಅನುಭವಿಸಿರಬಹುದು. ಅವರಿಗೆ ಆ ಥರ ಅನುಭವ ಆಗಿರಬೇಕು. ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ ಎಂದು ರಾಗಿಣಿ ದ್ವಿವೇದಿ ಮಾರ್ಮಿಕವಾಗಿ ಹೇಳಿದರು.