ಕೊರೊನಾದಿಂದ ಮೃತರಾದ ಬಿ ಎಲ್ ಡಿ ಇ ಸಂಸ್ಥೆಯ ಸಿಬ್ಬಂದಿಗಳ ಕುಟುಂಬಕ್ಕೆ ತಲಾ ರೂ. 1 ಲಕ್ಷ ಆರ್ಥಿಕ ನೆರವು ನೀಡಿ ಮಾದರಿಯಾದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ಆಧುನಿಕ ಭಗೀರಥ ಎಂದೇ ಹೆಸರಾಗಿರುವ ಮಾಜಿ ಸಚಿವ, ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಎಂದರೆ ಅವರೇ ಬೇರೆ, ಅವರ ಶೈಲಿಯೇ ಬೇರೆ. ಅವರ ಮಾನವೀಯತೆ ಮತ್ತು ಹೃದಯ ವೈಶಾಲ್ಯತೆಗೆ ಮತ್ತೋಂದು ತಾಜಾ ಉದಾಹರಣೆ ಇಲ್ಲಿದೆ.

ವಿಜಯಪುರದಲ್ಲಿ ಕೊರೊನಾದಿಂದ ಮೃತರಾದ ಬಿ ಎಲ್ ಡಿ ಇ ಸಂಸ್ಥೆಯ ಸಿಬ್ಬಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ

ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಸರಕಾರ ನಿಗದಿ ಪಡಿಸಿದ ದರಕ್ಕಿಂತಲೂ ಶೇ. 70 ರಷ್ಟು ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ನೆರವಾಗಿದ್ದರು. ಈಗ ತಮ್ಮ ಸಂಸ್ಥೆಯ ಸಿಬ್ಬಂದಿಯ ನೆರವಿಗೆ ಧಾವಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯಪುರದಲ್ಲಿ ಕೊರೊನಾದಿಂದ ಮೃತರಾದ ಬಿ ಎಲ್ ಡಿ ಇ ಸಂಸ್ಥೆಯ ಸಿಬ್ಬಂದಿಗೆ ಶಾಸಕ ಎಂ. ಬಿ. ಪಾಟೀಲರಿಂದ ಚೆಕ್ ವಿತರಣೆ

ಕೊರೊನಾದಿಂದಾಗಿ ಬಿ ಎಲ್ ಡಿ ಇ ಸಂಸ್ಥೆಗೆ ಸೇರಿದ 16 ಜನ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ಸಿಬ್ಬಂದಿಯಲ್ಲಿ ಇಬ್ಬರು ವೈದ್ಯರನ್ನು ಹೊರತು ಪಡಿಸಿ ಉಳಿದ 14 ಜನ ಸಿಬ್ಬಂದಿಗಳ ಕುಟುಂಬಗಳಿಗೆ ಎಂ. ಬಿ. ಪಾಟೀಲ ತಮ್ಮ ಸಂಸ್ಥೆಯ ವತಿಯಿಂದ ತಲಾ ರೂ. 1 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. ಅಷ್ಟೇ ಅಲ್ಲ, ಮೃತರ ಕುಟುಂಬದ ಓರ್ವ ಅರ್ಹ ಸದಸ್ಯರಿಗೆ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಉದ್ಯೋಗದ ಭರವಸೆ ಕೊಟ್ಟಿದ್ದಾರೆ.

ವಿಜಯಪುರದಲ್ಲಿ ಕೊರೊನಾದಿಂದ ಮೃತರಾದ ಬಿ ಎಲ್ ಡಿ ಇ ಸಂಸ್ಥೆಯ ಸಿಬ್ಬಂದಿಗೆ ಶಾಸಕ ಎಂ. ಬಿ. ಪಾಟೀಲರಿಂದ ಚೆಕ್ ವಿತರಣೆ

ಮಾತ್ರವಲ್ಲ, ಅವರ ಮಕ್ಕಳ ಶಿಕ್ಷಣಕ್ಕೂ ನೆರವು ನೀಡುವುದಾಗಿ ತಿಳಿಸಿದ್ದಾರೆ. ಈ ರೀತಿಯಾಗಿ ಕೊರೊನಾದ ಸಂಕಷ್ಟ ಸಮಯದಲ್ಲಿ ತಮ್ಮವರನ್ನು ಕಳೆದುಕೊಂಡ ಸಿಬ್ಬಂದಿಗೆ ಮನೆಯ ಸದಸ್ಯನ ರೂಪದಲ್ಲಿ ಎಂ. ಬಿ. ಪಾಟೀಲ ನೆರವಾಗುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ.

ವಿಜಯಪುರದಲ್ಲಿ ಕೊರೊನಾದಿಂದ ಮೃತರಾದ ಬಿ ಎಲ್ ಡಿ ಇ ಸಂಸ್ಥೆಯ ಸಿಬ್ಬಂದಿಗೆ ಶಾಸಕ ಎಂ. ಬಿ. ಪಾಟೀಲರಿಂದ ಚೆಕ್ ವಿತರಣೆ

ಬಿ ಎಲ್ ಡಿ ಇ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತರ ಸ್ಮರಣಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ನಂತರ ಅವರ ಕುಟುಂಬ ಸದಸ್ಯರಿಗೆ ಶಾಸಕ ಎಂ. ಬಿ. ಪಾಟೀಲ ರೂ. 1 ಲಕ್ಷ ಆರ್ಥಿಕ ನೆರವಿನ ಚೆಕ್ ವಿತರಿಸಿದರು.

ವಿಜಯಪುರದಲ್ಲಿ ಕೊರೊನಾದಿಂದ ಮೃತರಾದ ಬಿ ಎಲ್ ಡಿ ಇ ಸಂಸ್ಥೆಯ ಸಿಬ್ಬಂದಿಗೆ ಶಾಸಕ ಎಂ. ಬಿ. ಪಾಟೀಲರಿಂದ ಚೆಕ್ ವಿತರಣೆ

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ಆರ್. ವಿ. ಕುಲಕರ್ಣಿ, ಬಿ ಎಲ್ ಡಿ ಇ ವಿವಿ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಬಿ ಎಲ್ ಡಿ ಇ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಡಾ. ಎಂ. ಎಸ್. ಮದಭಾವಿ, ಕನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

2 Responses

Leave a Reply

ಹೊಸ ಪೋಸ್ಟ್‌