ಮಾಧ್ಯಮ ಮಿತ್ರರೇ ನಾನು ಶ್ರೀ ಅರುಣ್ ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿಲ್ಲ ಸುಳ್ಳು ಸುದ್ದಿ ಬಿತ್ತರಿಸಬೇಡಿ- ಫೇಸ್ ಬುಕ್ ನಲ್ಲಿ ಯತ್ನಾಳ ಸ್ಪಷ್ಟನೆ

ವಿಜಯಪುರ: ಮಾಧ್ಯಮ ಮಿತ್ರರೇ ನಾನು ಶ್ರೀ ಅರುಣ್ ಸಿಂಗ್ ಅವರ ಭೇಟಿಗೆ ಅವಕಾಶ ಕೇಳಿಲ್ಲ ಸುಳ್ಳು ಸುದ್ದಿ ಬಿತ್ತರಿಸಬೇಡಿ. ಹೀಗಂತ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಫೇಸ್ ಬುಕ್ ಅಕೌಂಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

https://m.facebook.com/story.php?story_fbid=2427192324091872&id=100004033850943

ರಾಜ್ಯ ಬಿಜೆಪಿಯಲ್ಲಿನ ಘಟನಾವಳಿಗಳ ಅಧ್ಯಯನ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ಸ್ವಪಕ್ಷೀಯರಿಂದಲೇ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌ ಪಾಟೀಲ ಯತ್ನಾಳ

ಈ ಸಂದರ್ಭದಲ್ಲಿ ಯಡಿಯೂರಪ್ಪ ಪರ ಮತ್ತು ವಿರೋಧಿ ಬಣಗಳು ತಮ್ಮ ಅಳಲು ತೋಡಿಕೊಳ್ಳಲು ಅರುಣ ಸಿಂಗ್ ಅವರ ಭೇಟಿಗೆ ಕಾಲಾವಕಾಶ ಕೋರಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿರುವ ಯತ್ನಾಳ ಕೂಡ ಅರುಣ ಸಿಂಗ್ ಭೇಟಿಗೆ ಕಾಲಾವಕಾಷ ಕೇಳಿದ್ದಾರೆ ಎಂದು ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಯತ್ನಾಳ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಆರು ಫೋಟೋಗಳನ್ನೂ ಹಾಕಿದ್ದಾರೆ.

ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಶಾಸಕರ ಹೆಸರು ಹೊಂದಿರುವ ಫೋಟೋ

ಈ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಯತ್ನಾಳ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯಲು ಪ್ರಯತ್ನಿಸಿದ್ದಾರೆ. ಈ ಫೋಟೋಗಳಲ್ಲಿ ಹಲವಾರು ಜನ ಬಿಜೆಪಿ ಶಾಸಕರ ಹೆಸರುಗಳಿವೆ. ಅದರಲ್ಲಿ ಯತ್ನಾಳ ಹೆಸರು ಇಲ್ಲ. ಹೀಗಾಗಿ ತಾವು ಅರುಣ ಸಿಂಗ್ ಭೇಟಿಗೆ ಕಾಲಾವಕಾಶ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಶಾಸಕರ ಹೆಸರು ಹೊಂದಿರುವ ಫೋಟೋ

ಈ ಪೋಸ್ಟ್ ಗಳಲ್ಲಿ ಕೈಬರಹದಿಂದ ಬರೆಯಲಾದ ಹಾಗೂ ಮುದ್ರಿಸಲಾದ ಶಾಸಕರ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನೂ ಕೂಡ ಹಾಕಲಾಗಿರುವ ಪೋಸ್ಟ್ ಗಳು ಸೇರಿವೆ. ಅದರಲ್ಲಿ ಕೆಲವು ಶಾಸಕರ ಹೆಸರುಗಳ ಮುಂದೆ ಟಿಕ್ ಮಾಡಲಾಗಿದ್ದು, ಅವರು ಅರುಣ ಸಿಂಗ್ ಅವರನ್ನು ಭೇಟಿಯಾಗಿರಬಹುದು ಇಲ್ಲವೇ ಭೇಟಿಯಾಗಲು ಸಮಯಾವಕಾಶ ಕೇಳಿರಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.

ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಶಾಸಕರ ಹೆಸರು ಹೊಂದಿರುವ ಫೋಟೋ

ಈ ಪೋಸ್ಟ್ ಗಳ ಮೂಲಕ ಯತ್ನಾಳ ಮತ್ತೋಂದು ಸಂದೇಶ ರವಾನಿಸಿದ್ದು, ಈವರೆಗೆ ಯಾವ ಶಾಸಕರು ಅರುಣ ಸಿಂಗ್ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ ಮತ್ತು ಭೇಟಿಯಾಗಿದ್ದಾರೆ ಎಂಬುದನ್ನು ಬಿಜೆಪಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಯತ್ನಾಳ ಅವರು ಅರುಣ ಸಿಂಗ್ ಅವರ ಭೇಟಿಗೆ ಅಥವಾ ಭೇಟಿಯಾಗಿರುವ ಶಾಸಕರ ಹೆಸರನ್ನು ಬಹಿರಂಗ ಮಾಡುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಪರ ಮತ್ತು ವಿರೋಧಿ ಬಣದ ಶಾಸಕರ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಶಾಸಕರ ಹೆಸರು ಹೊಂದಿರುವ ಫೋಟೋ

ಈ ಮೂಲಕ ಯತ್ನಾಳ, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮತ್ತೋಮ್ಮೆ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮಗಳು ಸುದ್ದಿ ಸುದ್ದಿ ಹರಡುತ್ತಿವೆ ಎಂದು ಮಾಧ್ಯಮಗಳ ವಿರುದ್ಧವೂ ಅಸಮಾಧನಾ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌