ವಿಜಯಪುರದ ನಗರದ ಪಾರೇಖ್ ನಗರದಲ್ಲಿ ಕೊರೊನಾ ಲಸಿಕೆ ಅಭಿಯಾನ

ವಿಜಯಪುರ: ವಿಜಯಪುರ ನಗರದಲ್ಲಿ ಕೊರೊನಾ ಲಸಿಕೆ ಅಭಿಯಾನ ಮುಂದುವರೆದಿದೆ.

ವಿಜಯಪುರ ನಗರದ ಶ್ರೀ ಜ್ಞಾನಯೋಗಾಶ್ರಮದ ಬಳಿ ಇರುವ ಪಾರೇಖ್ ನಗರದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಡಾವಣೆಯ ಮುಖಂಡ ರಾಜು ಹಿರೇಮಠ, ಸರಕಾರ ನೀಡುತ್ತಿರುವ ಕೊರೊನಾ ಉಚಿತ ಲಸಿಕೆಯನ್ನು ಎಲ್ಲರೂ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು . ಕೊರೊನಾ ಲಸಿಕೆ ಪಡೆಯುವುದರಿಂದ ಮನಸ್ಸಿಗೆ ಧೈರ್ಯ ಬರುತ್ತದೆ. ಹಿಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹಲವಾರು ರೋಗಗಳು ಬಂದಿದ್ದವು. ಅವುಗಳನ್ನು ನಾಶಮಾಡುವ ಶಕ್ತಿಯು ನಮ್ಮ ದೇಶದ ತಜ್ಞ ವೈದ್ಯರಲ್ಲಿ ಇದೆ. ಕೊರೊನಾ ಕೆಲವೇ ದಿನಗಳಲ್ಲಿ ಔಷಧಗಳಿಂದ ಕಡಿಮೆಯಾಗುತ್ತದೆ. ಎಲ್ಲರೂ ಧೈರ್ಯ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಿಂದಿಯಾದ ದೀಪಾ ಸುವಾಕಾಣಿ, ಮಲ್ಲಿಕಾರ್ಜುನ ಸಾವಳಗಿ, ಪವಿತ್ರ ಬಡಿಗೇರ, ಸಾವಿತ್ರಿ ತೇಲಿ, ಸುನಿತಾ ಸಜ್ಜನ, ಆರತಿ ಸಾವಳಗಿ ಬಡಾವಣೆ ನಿವಾಸಿಗಳಾದ ರಾಜುಗೌಡ ಪಾಟೀಲ, ಗುರುನಾಥ ಅಂದೇವಾಡಿ, ಡಿ. ಎಸ್. ಪೂಜೇರಿ, ಪ್ರಕಾಶ ಚವ್ಹಾಣ, ಮಂಜುನಾಥ ಪಲ್ಲೇದ, ಹರೀಶ ಬರಟಗಿ, ರಾಜು ಭಜಂತ್ರಿ, ನಾಗರಾಜ ಮುಳವಾಡ, ರಾಜು ಕಬನೂರ, ಅಶೋಕ ತಿಮಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌