ವಿಜಯಪುರ ಜಿಲ್ಲೆಯಲ್ಲಿ ಅನಲಾಕ್ ಬಗ್ಗೆ ನಾಳೆ ನಿರ್ಧಾರ ನಿರೀಕ್ಷೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ವಿಜಯಪುರ: ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಿದ್ದರೂ ವಿಜಯಪುರ ಜಿಲ್ಲೆಯನ್ನು ಅನಲಾಕ್ ಜಿಲ್ಲೆಗಳ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಜಿಲ್ಲಾದ್ಯಂತ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು. ಈ ಕುರಿತು ಬಸವ ನಾಡು ಕೂಡ ಕೆಲವು ಹೊತ್ತಿನ ಮುಂಚೆ ವರದಿ ಪ್ರಕಟ ಮಾಡಿತ್ತು. ಇದೀಗ ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರತಿಕ್ರಿಯೆ ನೀಡಿದ್ದು, ವಿಜಯಪುರ ಜಿಲ್ಲೆಯಲ್ಲೂ ಅನಲಾಕ್ ಜಾರಿಯ ಬಗ್ಗೆ ನಾಳೆ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ […]
ನಾಳೆ ಸೋಮವಾರದಿಂದ ವಿಜಯಪುರ ಜಿಲ್ಲೆಯಲ್ಲೂ ಬಸ್ ಸಂಚಾರ ಆರಂಭ- ನಾರಾಯಣಪ್ಪ ಕುರುಬರ
ವಿಜಯಪುರ: ನಾಳೆ ಸೋಮವಾರದಿಂದ ವಿಜಯಪುರ ಜಿಲ್ಲೆಯಲ್ಲೂ ಬಸ್ ಸಂಚಾರ ಆರಂಭವಾಗಲಿವೆ. ಕೊರೊನಾ ಮಾರ್ಗಸೂಚಿಯನ್ವಯ ಸರಕಾರದ ಸೂಚನೆಯಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬಸ್ ಸಂಚಾರ ಆರಂಭವಾಗಲಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬುರ ತಿಳಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಂದಿರುವುದರಿಂದ ರಾಜ್ಯ ಸರಕಾರ ಜೂ.21ರ ಬೆ.6 ಗಂಟೆಯಿಂದ ಜು. 5ರ ಬೆ. 5 ಗಂಟೆಯವರೆಗೆ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸರಕಾರದ […]
ವಿಜಯಪುರ ನಗರದಲ್ಲಿ ಇಂದು ಕೊರೊನಾ ಒಂದೂ ಹೊಸ ಕೇಸ್ ಇಲ್ಲ- ಪಾಸಿಟಿವಿಟಿ ದರವೂ ಇಂದು ಶೇ. 1ಕ್ಕಿಂತಲೂ ಕಡಿಮೆ- ಆದರೂ ಅನಲಾಕ್ ಯಾಕಿಲ್ಲ?
ವಿಜಯಪುರ: ಬಹಳ ತಿಂಗಳ ಬಳಿಕ ವಿಜಯಪುರ ನಗರದಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ಇಂದು ಒಂದೂ ಹೊಸ ಪ್ರಕರಣ ದಾಖಲಾಗಿಲ್ಲ. ಆದರೆ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿಯೇ ಅತೀ ಕಡಿಮೆ ಅಂದರೆ 23 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಒಂದು ವಾರದಿಂದ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗುತ್ತ ಸಾಗಿದೆ. ಒಟ್ಟು ನಡೆಸಲಾಗುವ ಪರೀಕ್ಷೆಗಳಲ್ಲಿ ಶೇ. 5 ಕ್ಕಿಂತಲೂ ಕಡಿಮೆ ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ ಒಂದು ಎಂಟು ದಿನಗಳಲ್ಲಿ ಜಿಲ್ಲೆಯಲ್ಲಿ ದಾಖಲಾದ ಹೊಸ ಪ್ರಕರಣಗಳು ಮತ್ತು ಶೇಕಡವಾರು […]
ಜೂ. 21 ಮತ್ತು 22 ರಂದು ಶಾಸಕ ಎಂ. ಬಿ. ಪಾಟೀಲ ಬಬಲೇಶ್ವರ ಮತಕ್ಷೇತ್ರದಲ್ಲಿ ಪ್ರವಾಸ
ವಿಜಯಪುರ: ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ನಾಳೆ ಜೂ. 21 ಮತ್ತು ಜೂ. 22 ರಂದು ಬಬಲೇಶ್ವರ ಮತಕ್ಷೇತ್ರದಲ್ಲಿ ಪ್ರವಾಸ ಕೈಗೊಂಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜೂ. 21 ಸೋಮವಾರ ಬೆ.10ಕ್ಕೆ ನಿರ್ಮಿತಿ ಕೇಂದ್ರದಿಂದ ಅರಕೇರಿ ಸರಕಾರಿ ಪ್ರೌಢ ಶಾಲೆ ಹಾಗೂ ಬಿಸೇನ ದೊಡ್ಡಿ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಜೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬೆ.11.30ಕ್ಕೆ ಲೋಕೋಪಯೋಗಿ ಇಲಾಖೆಯಿಂದ ತಿಕೋಟಾದಲ್ಲಿ […]