ಜೂ. 21 ಮತ್ತು 22 ರಂದು ಶಾಸಕ ಎಂ. ಬಿ. ಪಾಟೀಲ ಬಬಲೇಶ್ವರ ಮತಕ್ಷೇತ್ರದಲ್ಲಿ ಪ್ರವಾಸ

ವಿಜಯಪುರ: ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ನಾಳೆ ಜೂ. 21 ಮತ್ತು ಜೂ. 22 ರಂದು ಬಬಲೇಶ್ವರ ಮತಕ್ಷೇತ್ರದಲ್ಲಿ ಪ್ರವಾಸ ಕೈಗೊಂಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಅವರು ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಜೂ. 21 ಸೋಮವಾರ ಬೆ.10ಕ್ಕೆ ನಿರ್ಮಿತಿ ಕೇಂದ್ರದಿಂದ ಅರಕೇರಿ ಸರಕಾರಿ ಪ್ರೌಢ ಶಾಲೆ ಹಾಗೂ ಬಿಸೇನ ದೊಡ್ಡಿ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣಕ್ಜೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬೆ.11.30ಕ್ಕೆ ಲೋಕೋಪಯೋಗಿ ಇಲಾಖೆಯಿಂದ ತಿಕೋಟಾದಲ್ಲಿ ಬಸವೇಶ್ವರ ವೃತ್ತ ಅಭಿವೃದ್ಧಿ ಕಾಮಗಾರಿ ಹಾಗೂ ಮಿನಿ ವಿಧಾನಸೌಧ ಕಟ್ಟಡ ಪರಿವೀಕ್ಷಣೆ ನಡೆಸಲಿದ್ದಾರೆ. ಬಳಿಕ ಹೆಸ್ಕಾಂ ಉಪವಿಭಾಗ ಕಛೇರಿ ಕಟ್ಟಡ ಕಾಮಗಾರಿಗೆ ಭೂಮಿ ನೇರವೇರಿಸಲಿದ್ದಾರೆ.

ಮ.1ಕ್ಕೆ ಕೆ ಆರ್ ಐ ಡಿ ಎಲ್ ವತಿಯಿಂದ ಬಾಬಾನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, ಚಾಲನೆ ನೀಡಲಿದ್ದಾರೆ.

ಜೂ. 22 ಮಂಗಳವಾರ ಬೆ.10ಕ್ಕೆ ಕೆ ಆರ್‌ ಐ ಡಿ ಎಲ್ ವತಿಯಿಂದ ಎಸ್ ಸಿ ಪಿ ಯೋಜನೆಯಡಿ ಕಾರಜೋಳ ಗ್ರಾಮದ ವಡ್ಡರ ಹಾಗೂ ಭಜಂತ್ರಿ ಸಮಾಜದ ಸಮುದಾಯ ಭವನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಅಲ್ಲದೇ, ಗ್ರಾಮದ ಹಕ್ಕುಪತ್ರ ವಿತರಿಸಲಿದ್ದಾರೆ.

ಬೆ.11ಕ್ಕೆ ಮಮದಾಪುರ ನಿರ್ಮಿತಿ ಕೇಂದ್ರದಿಂದ ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಮ.12ಕ್ಜೆ ಪಿ ಆರ್ ಡಿಯಿಂದ ಹೊಸ ಜೈನಾಪುರ-ಹಳೆ ಬೆಳ್ಳುಬ್ಬಿ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ, ಹೊಳೆ ಹಂಗರಗಿ-ಬೆಳ್ಳುಬ್ಬಿ ವರೆಗೆ ರಸ್ತೆ ಕಾಮಗಾರಿ ಪರೀವಿಕ್ಷಣೆ ನಡೆಸಲಿದ್ದಾರೆ.

ಮ.2ಕ್ಜೆ ನಿರ್ಮಿತಿ ಕೇಂದ್ರದಿಂದ ಕಂಬಾಗಿ ಗ್ರಾಮದ ಸರಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಕೊಠಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ನಂತರ ಕಂಬಾಗಿ 110 ಕೆವಿ ವಿದ್ಯುತ್ ಕೇಂದ್ರದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಮ.3ಕ್ಕೆ ಬಬಲೇಶ್ವರ ವೈ ಜಂಕ್ಷನ್ ಮತ್ತು ಶಾಂತವೀರ ವೃತ್ತ, ಗಾಂಧಿ ವೃತ್ತದಿಂದ ಹ್ಯಾಳಕಟ್ಟಿವರೆಗೆ ಸಿಸಿ ರಸ್ತೆ ಕಾಮಗಾರಿ ಹಾಗೂ ಮಿನಿ ವಿಧಾನಸೌಧ ಕಟ್ಟಡ ನಿವೇಶನದ ಪರಿವೀಕ್ಷಣೆ ಮಾಡಲಿದ್ದಾರೆ. ನಂತರ ಬಬಲೇಶ್ವರ ನೂತನ ಪಟ್ಟಣ ಪಂಚಾಯಿತಿ ಕಾರ್ಯಾಲಯ ಉದ್ಘಾಟಿಸಲಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಿಮಯದನ್ವಯ ಸಭೆ, ಸಮಾರಂಭಗಳು ಮತ್ತು ಕಾರ್ಯಕ್ರಮಗಳು ಇರುವುದಿಲ್ಲ. ಕೇವಲ ಸರಕಾರಿ ಮಾರ್ಗಸೂಚಿಗಳ ಅನುಸಾರ ಮಾತ್ರ ಈ ನಿಗದಿತ ಭೂಮಿ ಪೂಜೆ, ಶಂಕುಸ್ಥಾಪನೆ, ಉದ್ಘಾಟನೆ, ಪರಿವೀಕ್ಷಣೆಗಳನ್ನು ನೆರವೇರಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದಯ ಶಾಸಕ ಎಂ. ಬಿ. ಪಾಟೀಲ ಅವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

ಹೊಸ ಪೋಸ್ಟ್‌