ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕ್ರಮಕ್ಕೆ ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಮೆಚ್ಚುಗೆ- 3ನೇ ಅಲೆ ತಡೆಯಲು ಸನ್ನದ್ಧರಾಗಿರಲು ಸೂಚನೆ

ವಿಜಯಪುರ: ಕೊರೊನಾ ನಿಯಂತ್ರಣಕ್ಕೆ ವಿಜಯಪುರ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಉಪಲೋಕಾಯುಕ್ತ ಬಿ. ಎಸ್. ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ಹೊಸ ಪ್ರವಾಸಿ ಮಂದಿರ(ಐಬಿ) ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣ ಕ್ರಮಗಳು ಮತ್ತು ಲಸಿಕಾಕರಣದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಂಭವನೀಯ 3ನೇ ಅಲೆಯ ಎದುರಿಸಲು ಸೂಕ್ತ ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. […]

ಆರು ದಿನಗಳ ಯೋಗ ತರಬೇತಿ ಮುಕ್ತಾಯ-25 ಜನರಿಗೆ ತರಬೇತಿ ನೀಡಿದ ಆಯುರ್ವೇದ ವೈದ್ಯ ಡಾ. ಮಹೇಶ ನಾವದಗಿ

ವಿಜಯಪುರ: ವಿಜಯಪುರ ನಗರದ ಕಬಾಡೆ ಲೇ ಔಟ್ ನಲ್ಲಿ ಆರು ದಿನಗಳ ಯೋಗ ತರಬೇತಿ ಶಿಬಿರ ಮುಕ್ತಾಯವಾಗಿದೆ. ಅಂತಾರಾಷ್ಟ್ಯೀಯ ಯೋಗ ದಿನದಂದು ಮುಕ್ತಾಯ ಕಾರ್ಯಕ್ರಮ ನಡೆಯಿತು. ಅಷ್ಟಲಕ್ಷ್ಮಿ ಮಹಿಳಾ ಸಂಘದ ಸಹಯೋಗದಲ್ಲಿ ನಡೆದ ಈ ತರಬೇತಿ ಶಿಬಿರದಲ್ಲಿ ಆಯುರ್ವೇದ ವೈದ್ಯ ಡಾ. ಮಹೇಶ ನಾವದಗಿ ತರಬೇತಿ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ಈ ತರಬೇತಿಯನ್ನು ನೀಡಲಾಗಿದೆ. ಈ ಶಿಬಿರದಲ್ಲಿ ಸುಮಾರು 20 ರಿಂದ 25 ಜನರು ಯೋಗ ತರಬೇತಿ ಪಡೆದಿದ್ದಾರೆ. ಬಹುತೇಕ ಮಹಿಳೆಯರೇ ಈ ಯೋಗ ಶಿಬಿರದಲ್ಲಿ […]

ಬಬಲೇಶ್ವರ ಮತಕ್ಷೇತ್ರದಲ್ಲಿ ಗುತ್ತಿಗೆದಾರರು ಗುಣಮಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವಂತೆ ಶಾಸಕ ಎಂ. ಬಿ. ಪಾಟೀಲ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನಾ ಇಲಾಖೆಗಳ ಕಾಮಗಾರಿಗಳು ಬರದಿಂದ ಸಾಗಿವೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಸೂಚನೆ ನೀಡಿದ್ದಾರೆ‌‌. ಅರಕೆರಿ ಸರಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಬಲೇಶ್ವರ ಮತಕ್ಷೇತ್ರಾದ್ಯಂತ ಈಗಾಗಲೇ ನೀರಾವರಿ ಸೌಕರ್ಯ ಕಲ್ಪಿಸಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆಗಳು ಸೇರಿದಂತೆ ನಾನಾ ಇಲಾಖೆಗಳ […]

ಕಳೆದ ವಾರ ಯಡಿಯೂರಪ್ಪ ಇಂದು ಯತ್ನಾಳ ವಿಕ್ಟರಿ ಸಿಂಬಾಲ್- ಯತ್ನಾಳ ಗೆಲುವಿನ ಸಂಕೇತ ತೋರಿಸಿರುವ ಹಿಂದಿರುವ ಗುಟ್ಟೇನು?

ವಿಜಯಪುರ: ಕಳೆದ ವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ ಮೇಲೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಕೈಯಿಂದ ವಿಕ್ಟರಿ ಸಿಂಬಾಲ್ ತೋರಿಸುವ ಮೂಲಕ ನಸುನಕ್ಕಿದ್ದರು. ಇಂದು ಇದೇ ರೀತಿ ವಿಜಯಪುರ ನಗರ ಬಿಜೆಪಿ ಶಾಸಕ ಮತ್ತು ಬಿಜೆಪಿಯಲ್ಲಿ ಬಂಡಾಯ ನಾಯಕ ಎಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ ಯತ್ನಾಳ, ವಿಜಯಪುರದಲ್ಲಿ ವಿಕ್ಟರಿ ಸಿಂಬಾಲ್ ತೋರಿಸುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಅರುಣ ಸಿಂಗ್ ರಾಜ್ಯಕ್ಕೆ ಬಂದು ಹೋದ ಮೇಲೆ ಸಿಎಂ ಬಿ. […]

ನಿಷೇಧವಿದ್ದರೂ ಮಠಕ್ಕೆ ಲಗ್ಗೆಯಿಟ್ಟ ಭಕ್ತರು- ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ಬಂದ ಭಕ್ತ- ಬಬಲಾದಿ ಸದಾಶಿವ ಮುತ್ಯಾನ ಮಠದ ಸುತ್ತ ಭಕ್ತಸಾಗರ

ವಿಜಯಪುರ: ಸರಕಾರ ಮತ್ತು ವಿಜಯಪುರ ಜಿಲ್ಲಾಡಳಿತ ನಿಷೇಧ ವಿಧಿಸಿದ್ದರೂ ಭಕ್ತರು ಮಾತ್ರ ಹೊಳೆಬಬಲಾದಿ ಸದಾಶವಿ ಮುತ್ಯಾನ ಮಠಕ್ಕೆ ಈಗಲೂ ಕೂಡ ಹರಿದು ಬರುತ್ತಿದ್ದಾರೆ. ಕೊರೊನಾ ಸೋಂಕು ನಿವಾರಣೆಯಾಗಬೇಕಾದರೆ ಭಕ್ತರು ತಂತಮ್ಮ ಮನೆಗಳಲ್ಲಿಯೇ ಅಂಬಲಿ ಮಾಡಿ ನೈವೇದ್ಯ ಅರ್ಪಿಸಿ ಎಂದು ಐದು ವಾರಗಳ ಹಿಂದೆ ಇದೇ ಬಬಲಾದಿ ಸದಾಶಿವ ಮಠದ ಕಾರ್ಣಿಕ ಸಿದ್ಧರಾಮಯ್ಯ ಹಿರೇಮಠ ಭಕ್ತರಿಗೆ ಸಲಹೆ ನೀಡಿದ್ದರು. ಕಾರ್ಣಿಕರು ಸ್ಪಷ್ಟವಾಗಿ ಹೇಳಿದ್ದರೂ ಲೆಕ್ಕಸದ ಭಕ್ತರು ಕಳೆದ ನಾಲ್ಕು ಸೋಮವಾರಗಳಿಂದ ಮಠಕ್ಕೆ ಆಗಮಿಸುತ್ತಲೇ ಇದ್ದಾರೆ. ಪ್ರತಿ ಸೋಮವಾರ ಬಬಲಾದಿ […]

ಸೈಕ್ಲಿಷ್ಟ್ ಗಳಿಂದ ವಿಜಯಪುರದ ಅರಣ್ಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ವಿಜಯಪುರ: ಇಂದು ವಿಶ್ವ ಯೋಗ ದಿನ. ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿಜಯಪುರ ಸೈಕ್ಲಿಂಗ್ ಗ್ರೂಪ್ ವತಿಯಿಂದ ಕಾರ್ಯಕ್ರಮ ನಡೆಯಿತು. ವಿಜಯಪುರ ನಗರದ ಹೊರ ವಲಯದ ಕರಾಡದೊಡ್ಡಿ ಬಳಿ ಭೂತನಾಳ ಕೆರೆಯ ಹಿಂಭಾಗದಲ್ಲಿ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ಹಚ್ಚ ಹಸುರಿನ ಹುಲ್ಲು ಪ್ರದೇಶದಲ್ಲಿ ನಡೆದ ಕಾರ್ಯಕ್ರಮ ಗಮನ ಸೆಳೆಯಿತು. ವಿಜಯಪುರ ಸೈಕ್ಲಿಂಗ್ ಗ್ರೂಪ್ ಈಗಾಗಲೇ ಸರ್ವರಿಗೂ ಆರೋಗ್ಯ ಹಾಗೂ ಪರಿಸರ ದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತ ಬಂದಿದ್ದು, ರಾಜ್ಯದ ನಾನಾ ಕಡೆ ಖ್ಯಾತಿ ಗಳಿಸಿದೆ. […]

ವಿಜಯಪುರ ಜಿಲ್ಲೆಯಲ್ಲೂ ಅನಲಾಕ್- ಫಲ ನೀಡಿದ ಜಿಲ್ಲಾಧಿಕಾರಿ ಪ್ರಯತ್ನ, ಸಚಿವರ ಸ್ಪಂದನೆ

ವಿಜಯಪುರ: ವಿಜಯಪುರ ಜಿಲ್ಲೆಯನ್ನು ಅನಲಾಕ್ ಪಟ್ಟಿಗೆ ಸೇರಿಸಲಾಗಿದೆ. ಸರಕಾರ ಈ ಕುರಿತು ಆದೇಶ ಹೊರಡಿಸಿದ್ದು, ಈಗ ಹೊರಡಿಸಿದ್ದು ಹೊಸದಾಗಿ ಉಡುಪಿ, ಬೆಂಗಳೂರು, ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳನ್ನು ಅನಲಾಕ್ ಜಿಲ್ಲೆಗಳ ಪಟ್ಟಿಗೆ ಸೇರಿಸಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸರಕಾರ ಹೊರಡಿಸಿರುವ ಆದೇಶದ ಕುರಿತು ಮಾಹಿತಿ ನೀಡಿದ್ದಾರೆ. ರವಿವಾರದಿಂದಲೇ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ಡಿಸಿಎಂ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ […]

ನಮ್ಮ ದಿನನಿತ್ಯದ ಆರೋಗ್ಯ ಸಮಸ್ಯೆಗಳು, ವ್ಯಾಧಿ ನಿವಾರಣೆಗೆ – ಯೋಗದ ಜೊತೆ ಹೋಮಿಯೋಪಥಿ ಅಳವಡಿಸಿಕೊಂಡರೆ ಪರಿಹಾರ ಕುರಿತ ಲೇಖನ

ಡಾ. ರವಿ ಎಸ್. ಕೋಟೆಣ್ಣವರ (ಹೊಮಿಯೋಪಥಿ ವೈದ್ಯರು) ವಿಜಯಪುರ: ಜೂ. 21, 2015 ರಂದು ವಿಶ್ವಾದ್ಯಂತ ಮೊದಲ ಆಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ನಮ್ಮ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಜೀ ಅವರ ಸಾರಥ್ಯದಲ್ಲಿ ಭಾರತದ ಸಂಸ್ಕೃತಿ – ಸಂಪ್ರದಾಯವನ್ನು ಇಡೀ ಜಗತ್ತಿಗೆ ಪರಿಚಸಲಾಯಿತು. ಹಾಗೂ ಎಲ್ಲ ರಾಷ್ಟ್ರಗಳೂ ಇದನ್ನು ಮನಸಾಪೂವ೯ಕವಾಗಿ ಸ್ವಿಕರಿಸಿ ಆಚರಣೆಯಲ್ಲೂ ಕೂಡ ತಂದರು. ಪ್ರಥಮ ಯೋಗ ದಿನಾಚರಣೆ ನವದೆಹಲಿಯಲ್ಲಿ ಐತಿಹಾಸಿಕ ಕೆಂಪುಕೋಟೆಯ ಮುಂದೆ ಸುಮಾರು 84 ರಾಷ್ಟ್ರಗಳ ಪ್ರತಿನಿಧಿಗಳು ಸೇರಿದಂತೆ 35,000 ಜನ […]

ಅನಲಾಕ್ ಮಧ್ಯೆಯೂ ಬಸವ ನಾಡಿನಲ್ಲಿ ಬಸ್ ಸಂಚಾರ ಆರಂಭ- ಸಿಂಗರಿಸಿಕೊಂಡು ನಿಲ್ದಾಣಗಳಿಗೆ ಬಂದ ಬಸ್ಸುಗಳು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇದ್ದರೂ ಅನಲಾಕ್ ಮಾಡಿಲ್ಲ. ಅನಲಾಕ್ ಭಾಗ್ಯವಿಲ್ಲದಿದ್ದರೂ ವಿಜಯಪುರ ಜಿಲ್ಲಾದ್ಯಂತ ಬಸ್ ಸಂಚಾರ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಬಸ್ಸುಗಳ ಓಡಾಟ ಬಹಳ ದಿನಗಳ ನಂತರ ಪುನಾರಂಭವಾಗಿದ್ದು, ಪ್ರಯಾಣಿಕರೂ ಕೂಡ ಉತ್ಸಾಹದಿಂದಲೇ ಬಸ್ ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ. ಆಗಮಿಸುತ್ತಿದ್ದಾರೆ. ವಿಜಯಪುರ ನಗರದಲ್ಲಿರುವ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸೆಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ ಸೇವೆ ಬೆಳಿಗ್ಗೆ 6 ಗಂಟೆಯಿಂದಲೇ ಪುನಾರಂಭವಾಗಿದೆ. ಲಾಕಡೌನ್ ನಂತರ ಬಸ್ಸುಗಳು ಸಂಚಾರ […]