ಸೈಕ್ಲಿಷ್ಟ್ ಗಳಿಂದ ವಿಜಯಪುರದ ಅರಣ್ಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ವಿಜಯಪುರ: ಇಂದು ವಿಶ್ವ ಯೋಗ ದಿನ. ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿಜಯಪುರ ಸೈಕ್ಲಿಂಗ್ ಗ್ರೂಪ್ ವತಿಯಿಂದ ಕಾರ್ಯಕ್ರಮ ನಡೆಯಿತು.

ವಿಜಯಪುರ ನಗರದ ಹೊರ ವಲಯದ ಕರಾಡದೊಡ್ಡಿ ಬಳಿ ಭೂತನಾಳ ಕೆರೆಯ ಹಿಂಭಾಗದಲ್ಲಿ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ಹಚ್ಚ ಹಸುರಿನ ಹುಲ್ಲು ಪ್ರದೇಶದಲ್ಲಿ ನಡೆದ ಕಾರ್ಯಕ್ರಮ ಗಮನ ಸೆಳೆಯಿತು.

ವಿಜಯಪುರ ನಗರದ ಹೊರವಲಯದ ಕರಾಡದೊಡ್ಡಿ ಬಳಿ ಅರಣ್ಯದಲ್ಲಿ ಯೋಗಾಸನ ಮಾಡುತ್ತಿರುವ ಸೈಕ್ಲಿಷ್ಟಗಳು

ವಿಜಯಪುರ ಸೈಕ್ಲಿಂಗ್ ಗ್ರೂಪ್ ಈಗಾಗಲೇ ಸರ್ವರಿಗೂ ಆರೋಗ್ಯ ಹಾಗೂ ಪರಿಸರ ದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತ ಬಂದಿದ್ದು, ರಾಜ್ಯದ ನಾನಾ ಕಡೆ ಖ್ಯಾತಿ ಗಳಿಸಿದೆ.

ಬೆಳಿಗ್ಗೆ ವಿಸಿಜಿ ಸಂಚಾಲಕ ಡಾ. ಮಹಾಂತೇಶ ಬಿರಾದಾರ ಹಾಗೂ ಶಾಂತೇಶ ಕಳಸಗೊಂಡ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಿತು. ಕೊರೊನಾ ಸಂದರ್ಭದಲ್ಲಿ ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು‌.

ವಿಜಯಪುರ ನಗರದ ಹೊರವಲಯದ ಕರಾಡದೊಡ್ಡಿ ಬಳಿ ಅರಣ್ಯದಲ್ಲಿ ಯೋಗಾಸನ ಮಾಡುತ್ತಿರುವ ಸೈಕ್ಲಿಷ್ಟಗಳು

ಸೈಕ್ಲಿಂಗ್ ಜೊತೆಯಲ್ಲಿ ಯೋಗಕ್ಕೂ ಕೂಡ ಮಹತ್ವ ನೀಡಲಾಗಿದ್ದು‌, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗ‌ವನ್ನು ಮಾಡಬೇಕಾಗುತ್ತದೆ. ಯೋಗದಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಈಗಿನ ಸಂದರ್ಭದಲ್ಲಿ ಪಿತ್ತ, ಅಜೀರ್ಣ, ಹೃದಯ ಸಂಬಂಧಿ ಕಾಯಿಲೆಗಳು, ಸೊಂಟ ನೋವು ಮುಂತಾದ ಕಾಯಿಲೆಗಳಿಗೆ ತಕ್ಕಂತೆ ಯೋಗ ಮಾಡಿಸಲಾಯಿತು.

ಕೊರೊನಾ ವೇಳೆ ಪ್ರಾಣಾಮಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಯೋಗ ದಿನಾಚರಣೆಯಲ್ಲಿ‌ ಶಿವನಗೌಡ ಪಾಟೀಲ, ಬಸವರಾಜ ದೇವರ, ಸಮೀರ ಬಳಗಾನೂರ, ಶಿವರಾಜ ಪಾಟೀಲ, ಗಜಾನಂದ ಮಂದಿಹಾಳ, ಸಂತೋಷ ಔರಸಂಗ ಮತ್ತಿತರ ಸೈಕಲ್ ಪ್ರೇಮಿಗಳು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌