ವಿಜಯಪುರ: ವಿಜಯಪುರ ನಗರದ ಕಬಾಡೆ ಲೇ ಔಟ್ ನಲ್ಲಿ ಆರು ದಿನಗಳ ಯೋಗ ತರಬೇತಿ ಶಿಬಿರ ಮುಕ್ತಾಯವಾಗಿದೆ.
ಅಂತಾರಾಷ್ಟ್ಯೀಯ ಯೋಗ ದಿನದಂದು ಮುಕ್ತಾಯ ಕಾರ್ಯಕ್ರಮ ನಡೆಯಿತು. ಅಷ್ಟಲಕ್ಷ್ಮಿ ಮಹಿಳಾ ಸಂಘದ ಸಹಯೋಗದಲ್ಲಿ ನಡೆದ ಈ ತರಬೇತಿ ಶಿಬಿರದಲ್ಲಿ ಆಯುರ್ವೇದ ವೈದ್ಯ ಡಾ. ಮಹೇಶ ನಾವದಗಿ ತರಬೇತಿ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ಈ ತರಬೇತಿಯನ್ನು ನೀಡಲಾಗಿದೆ. ಈ ಶಿಬಿರದಲ್ಲಿ ಸುಮಾರು 20 ರಿಂದ 25 ಜನರು ಯೋಗ ತರಬೇತಿ ಪಡೆದಿದ್ದಾರೆ. ಬಹುತೇಕ ಮಹಿಳೆಯರೇ ಈ ಯೋಗ ಶಿಬಿರದಲ್ಲಿ ಪಾಲ್ಗೋಂಡಿದ್ದು ಗಮನಾರ್ಹವಾಗಿದೆ ಎಂದು ಡಾ. ಮಹೇಶ ನಾವದಗಿ ತಿಳಿಸಿದ್ದಾರೆ.
ಜೂ. 16 ರಿಂದ ಆರಂಭವಾದ ಈ ಯೋಗ ಶಿಬಿರ ಮುಕ್ತಾಯವಾಗಿದ್ದು, ಈ ಯೋಗ ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ, ಸಮಗ್ರ ಯೋಗ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಪಾಲ್ಗೋಂಡ ಜನರೂ ಕೂಡ ಉತ್ಸುಕತೆಯಿಂದ ಯೋಗ ಕಲಿತಿದ್ದಾರೆ ಎಂದು ಡಾ. ಮಹೇಶ ನಾವದಗಿ ತಿಳಿಸಿದ್ದಾರೆ.