ನಿಷೇಧವಿದ್ದರೂ ಮಠಕ್ಕೆ ಲಗ್ಗೆಯಿಟ್ಟ ಭಕ್ತರು- ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ಬಂದ ಭಕ್ತ- ಬಬಲಾದಿ ಸದಾಶಿವ ಮುತ್ಯಾನ ಮಠದ ಸುತ್ತ ಭಕ್ತಸಾಗರ

ವಿಜಯಪುರ: ಸರಕಾರ ಮತ್ತು ವಿಜಯಪುರ ಜಿಲ್ಲಾಡಳಿತ ನಿಷೇಧ ವಿಧಿಸಿದ್ದರೂ ಭಕ್ತರು ಮಾತ್ರ ಹೊಳೆಬಬಲಾದಿ ಸದಾಶವಿ ಮುತ್ಯಾನ ಮಠಕ್ಕೆ ಈಗಲೂ ಕೂಡ ಹರಿದು ಬರುತ್ತಿದ್ದಾರೆ.

ಕೊರೊನಾ ಸೋಂಕು ನಿವಾರಣೆಯಾಗಬೇಕಾದರೆ ಭಕ್ತರು ತಂತಮ್ಮ ಮನೆಗಳಲ್ಲಿಯೇ ಅಂಬಲಿ ಮಾಡಿ ನೈವೇದ್ಯ ಅರ್ಪಿಸಿ ಎಂದು ಐದು ವಾರಗಳ ಹಿಂದೆ ಇದೇ ಬಬಲಾದಿ ಸದಾಶಿವ ಮಠದ ಕಾರ್ಣಿಕ ಸಿದ್ಧರಾಮಯ್ಯ ಹಿರೇಮಠ ಭಕ್ತರಿಗೆ ಸಲಹೆ ನೀಡಿದ್ದರು. ಕಾರ್ಣಿಕರು ಸ್ಪಷ್ಟವಾಗಿ ಹೇಳಿದ್ದರೂ ಲೆಕ್ಕಸದ ಭಕ್ತರು ಕಳೆದ ನಾಲ್ಕು ಸೋಮವಾರಗಳಿಂದ ಮಠಕ್ಕೆ ಆಗಮಿಸುತ್ತಲೇ ಇದ್ದಾರೆ.

ವಿಜಯಪುರ ಜಿಲ್ಲೆಯ ಹೊಳೆಬಬಲಾದಿ ಸದಾಶಿವ ಮಠದ ಮುಂದೆ ಸೇರಿರುವ ಜನಸಾಗರ

ಪ್ರತಿ ಸೋಮವಾರ ಬಬಲಾದಿ ಸದಾಶಿವ ಮುತ್ಯಾನ ವಾರ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮತ್ತು ಈಗ ಕಾರ್ಣಿಕರ ಭವಿಷ್ಯವಾಣಿಯಂತೆ ಕೊರೊನಾ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಆದರೆ, ಸರಕಾರ ಮತ್ತು ವಿಜಯಪುರ ಜಿಲ್ಲಾಡಳಿತ ಈಗಲೂ ಕೂಡ ಮಠ, ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳಿಗೆ ಸಾರ್ವಜನಿಕರು ತೆರಳುವುದನ್ನು ನಿಷೇಧಿಸಿದೆ. ಆದರೆ, ಭಕ್ತರು ಮಾತ್ರ ನಿನ್ನೆ ಮಧ್ಯರಾತ್ರಿಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಅಂಬಲಿ ಮಾಡಿ ನೈವೇದ್ಯ ಅರ್ಪಿಸಿದ್ದಾರೆ. ಮಠಕ್ಕೆ ಈಗಾಗಲೇ ಬಾಗಿಲು ಹಾಕಿ ಭಕ್ತರಿಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಹಾಕಿದ್ದರೂ ಭಕ್ತರ ಪರಾಕಾಷ್ಠೆ ಮಾತ್ರ ನಿಂತಿಲ್ಲ.

ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ಬಂದ ಭಕ್ತ

ಈ ಮಧ್ಯೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಭಕ್ತನೊಬ್ಬ ಕಾಲಿಕೆ ಕಟ್ಟಿಕೆ ಕಟ್ಟಿಕೊಂಡು ಅದರ ಮೇಲೆ ನಡೆದುಕೊಂಡು ಬಂದು ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾನೆ. ಸುಮಾರು 50 ರಿಂದ 60 ಕಟ್ಟಿಗೆಯ ಮೇಲೆಯೇ ನಡೆದುಕೊಂಡು ಬಂದಿರುವ ಭಕ್ತ ಮಠದ ಎದುರು ಬಂದು ತನ್ನ ಹರಕೆಯನ್ನು ತೀರಿಸಿದ್ದಾನೆ.

ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಕ್ಕೆ ಕಾಲಿಗೆ ಕಟ್ಟಿಗೆ ಕಟ್ಟಿ ಅದರ ಮೇಲೆ ನಡೆದುಕೊಂಡು ಬಂದ ಭಕ್ತ

ಸರಕಾರದ ನಿಷೇಧದ ಹೊರತಾಗಿಯೂ ಭಕ್ತರು ಪರಾಕಾಷ್ಠೆ ಮೆರೆಯುತ್ತಿರುವುದು ವಿಜಯಪುರ ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.

Leave a Reply

ಹೊಸ ಪೋಸ್ಟ್‌