ಡಾ. ರವಿ ಎಸ್. ಕೋಟೆಣ್ಣವರ
(ಹೊಮಿಯೋಪಥಿ ವೈದ್ಯರು)
ವಿಜಯಪುರ: ಜೂ. 21, 2015 ರಂದು ವಿಶ್ವಾದ್ಯಂತ ಮೊದಲ ಆಂತರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ನಮ್ಮ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಜೀ ಅವರ ಸಾರಥ್ಯದಲ್ಲಿ ಭಾರತದ ಸಂಸ್ಕೃತಿ – ಸಂಪ್ರದಾಯವನ್ನು ಇಡೀ ಜಗತ್ತಿಗೆ ಪರಿಚಸಲಾಯಿತು. ಹಾಗೂ ಎಲ್ಲ ರಾಷ್ಟ್ರಗಳೂ ಇದನ್ನು ಮನಸಾಪೂವ೯ಕವಾಗಿ ಸ್ವಿಕರಿಸಿ ಆಚರಣೆಯಲ್ಲೂ ಕೂಡ ತಂದರು. ಪ್ರಥಮ ಯೋಗ ದಿನಾಚರಣೆ ನವದೆಹಲಿಯಲ್ಲಿ ಐತಿಹಾಸಿಕ ಕೆಂಪುಕೋಟೆಯ ಮುಂದೆ ಸುಮಾರು 84 ರಾಷ್ಟ್ರಗಳ ಪ್ರತಿನಿಧಿಗಳು ಸೇರಿದಂತೆ 35,000 ಜನ ಯೋಗ ಪಟುಗಳು ಯೋಗದ ಆಸನಗಳನ್ನು ಪ್ರದಶಿ೯ಸಿದರು. ಇದರಲ್ಲಿ ನಮ್ಮ ಪ್ರಧಾನಿಗಳೂ ಕೂಡ ಸಾಮಾನ್ಯ ಯೋಗ ಪಟುಗಳಂತೆ ಭಾಗವಹಿಸಿ ವಿವಿಧ ಯೋಗದ ಆಸನಗಳನ್ನು ಪ್ರದಶಿ೯ಸಿದರು. ಯೋಗ ಕುರಿತು ಪ್ರಕೃತಿಯ ಸೃಷ್ಠಿ ಕತ೯ ಶಿವ ಪರಮಾತ್ಮ ಹೇಳುತ್ತಾನೆ
“ಆಲೋಕ್ಯ ಸವ೯ಶಾಸ್ತ್ರಣಿ ವಿಚಾಯ೯ಚ ಪುನಃ ಪುನಃ
ಇದo ಏವ ಸುನಿಸ್ವನ್ನನಂ ಶಾಸ್ತ್ರಂ ಪರಂ ಮತಂ
ಅಂದರೆ ಯೋಗಶಾಸ್ತ್ರವನ್ನು ಓದಿದಾಗಲೂ ಮತ್ತಿತರ ಶಾಸ್ತ್ರಗಳನ್ನು ಓದಿದಾಗಲೂ, ಯಾವುದು ಮೇಲು, ಯಾವುದು ಕೀಳು ಎಂದು ಎಷ್ಟು ಭಾರಿ ವಿಚಾರಿಸಿದರು ಯೋಗಶಾಸ್ತ್ರವೇ ಶ್ರೇಷ್ಠ ಎಂದು ತಿಳಿದು ಬರುತ್ತದೆ ಎಂದು ಶಿವ ಪರಮಾತ್ಮ ಹೇಳುತ್ತಾನೆ. ಹಾಗೆಯೇ ಮಹಷಿ೯ ಅರವಿಂದರವರು ಯೋಗ ಉಪನ್ಯಾಸ ಮಾಲಿಕೆಯಲ್ಲಿ “ಯೋಗವೆಂದರೆ ನಮಲ್ಲಿರುವ ಸುಪ್ತವಾಗಿರುವ ದಿವ್ಯತ್ವವನ್ನು ಅಭಿವ್ಯಕ್ತಗೊಳಿಸಿ ಆತ್ಮ ಸಾಕ್ಷಾತ್ಕಾರದ ಕಡೆಗೆ ಮುನ್ನೆಡೆಯಲು ಇರುವ ವ್ಯವಸ್ಥಿತವಾದ ಮಾಗ೯ವೇ ಯೋಗ ಎಂದು ವಿವರಿಸಿದ್ದಾರೆ
ಯೋಗಶಾಸ್ತ್ರದ ಉದ್ದೇಶಗಳು: ಪ್ರಪಂಚಾದ್ಯಂತ ಜನಸಾಮಾನ್ಯರಿಗೆ ಯೋಗದ ಕುರಿತು ಮಹತ್ವ & ಅದರ ಲಾಭಗಳ ಬಗ್ಗೆ ಅರಿವು ಮೂಡಿಸುವುದು. ನಿಸಗ೯ ಹಾಗೂ ಪ್ರಕೃತಿ೯ಯೊಂದಿಗೆ ಸಹ ಬಾಳವೆ ಮಾಡುವುದನ್ನು ರೂಡಿಸಿಕೊಳ್ಳುವುದು. ಇಂದಿನ ಯಾಂತ್ರಿಕ ಯುಗದಲ್ಲಿ ಮಾನವ ಹಲವಾರು ರೋಗಗಳಿಗೆ ತುತ್ತಾಗ್ತಾಯಿದ್ದಾನೆ , ಈ ಯೋಗದ ಮುಖಾಂತರ ಈ ರೋಗ, ರುಜಿನಗಳ ಪ್ರಮಾಣವನ್ನು ಹತೋಟಿಯಲ್ಲಿ ಇಡಬಹುದು ಹಾಗೂ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ದೈಹಿಕ ಬೆಳವಣಿಗೆ, ಮಾನಸಿಕ ಶಾಂತಿ ಪಡೆದುಕೊಂಡು ಸಂಪೂಣ೯ ಆರೋಗ್ಯ ಪಡೆದುಕೊಳ್ಳುವುದು ಮುಖ್ಯ ಉದ್ದೇಶವಾಗಿದೆ.
ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗಾಸನವು ಹಲವಾರು ಆಸನಗಳನ್ನು ಒಳಗೊಂಡಿದ್ದು ಈ ಆಸನಗಳು ದೈಹಿಕವಾಗಿ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ.
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ‘ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ’. ಅನಾದಿ ಕಾಲದಿಂದಲೂ ಯೋಗಿಗಳು ತಪಸ್ವಿಗಳು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅನುಷ್ಠಾನಿಕೊಂಡವರು. ಕೆಲವು ಆಸನಗಳಾದ ಅನುಸಾರ, ವಿನ್ಯಾಸ ಮತ್ತು ಬಿಕ್ರಮ ನಿಮ್ಮ ವಿನ್ಯಾಸವಿರುವ ದೇಹ ಆಕಾರಕ್ಕೆ ಕಾರಣವಾಗಿವೆ.
ಯೋಗವೆoದರೆ ಕೇವಲ ವಿವಿಧ ಶಾರೀರಿಕ ಭಂಗಿಗಳಲ್ಲ ಇದು ಜೀವನ ಕಲೆಯನ್ನು ಕಲಿಸಿಕೊಡುವ ಕಲೆ ಹಾಗೂ ವಿಜ್ಞಾನ ಪದ್ದತಿಯಾಗಿದೆ.ಈ ಯೋಗದ ಮೂಲಕ ಪ್ರಪ್ರಂಚಿನಾದ್ಯಂತ ಶಾಂತಿ, ಸಮನ್ವಯ, ಸಾಮರಸ್ಯ ಬೆಳೆಸಿ, ಎಲ್ಲ ಸಮುದಾಯಗಳನ್ನು ಪರಸ್ವರ ಹತ್ತಿರ ತಂದು, ಮನಸ್ಸಿಗೆ ಶಾಂತಿ, ಒತ್ತಡ ರಹಿತ ಜೀವನ ನಡೆಸಲು ಅತೀ ಉಪಯುಕ್ತವಾದ ಪದ್ದತಿಯೇ ಯೋಗವಾಗಿದೆ.. ಆದಿ ಕಾಲದಿಂದಲೂ, ವೇದ ಕಾಲದಿಂದಲೂ ಭಾರತದಲ್ಲಿ ಮಾತ್ರ ರೂಡಿಯಲ್ಲಿದ್ದ ಯೋಗವನ್ನು ಇಡೀ ಜಗತ್ತಿಗೆ ಪರಿಚಯಿಸಿ ಜಗತ್ತಿನಾದ್ಯಂತ ಆಚರಣೆಯಲ್ಲಿ ತರಲು ಕಾರಣಿ ಭೂತರಾದ ವಿಶ್ವನಾಯಕ, ಭಾರತವನ್ನು ಮತ್ತೊಮ್ಮೆ ಜಗದ್ಗುರುವನ್ನು ಮಾಡುವ ಪಣ ತೊಟ್ಟಿರುವ ನಮ್ಮ ಹೆಮ್ಮೆಯ ಪ್ರಧಾನ ಸೇವಕ ಮೋದಿಜಿವರಿಗೆ ಹಾಗೂ ಎಲ್ಲ ಯೋಗ ಗುರುಗಳಿಗೆ, ಭಾರತದ ಈ ಜೀವನ ಕಲೆಯನ್ನು ವಿನಮ್ರವಾಗಿ ಸ್ವೀಕರಿಸಿ ತಂತಮ್ಮ ರಾಷ್ಟ್ರಗಳಲ್ಲಿ ಆಚರಣೆಗೆ ತಂದ ಎಲ್ಲ ರಾಷ್ಟ್ರಗಳ ಘಟ ನಾಯಕರುಗಳಿಗೆ ಹೃದಯ ಪೂವ೯ಕ ಅಭಿನಂದನೆಗಳು. ನಮ್ಮ ದಿನನಿತ್ಯದ ಆರೋಗ್ಯ ಸಮಸ್ಯೆಗಳ ನಿವಾರಣೆಗೆ – ಸಂಪೂಣ೯ ವ್ಯಾಧಿ ನಿವಾರಣೆಗೆ ಹೋಮಿಯೋಪಥಿ ವೈದ್ಯ ಪದ್ದತಿಯ ಜೊತೆಗೆ ಯೋಗ ವನ್ನು ಅಳವಡಿಸಿಕೊಂಡರೆ ಸ್ವಸ್ಥ – ಸಮಥ೯-ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಎಲ್ಲ ಗುರು-ಹಿರಿಯರಿಗೆ, ಬಂಧು-ಮಿತ್ರರಿಗೆ 7 ನೇಯ ಅಂತರಾಷ್ಟ್ರಿಯ ಯೋಗ ದಿನದ ಹಾದಿ೯ಕ ಶುಭಾಷಯಗಳು.
II ಸವೇ೯ ಜನಃ ಸುಖಿನೋ ಭವಂತು II
(ಇಲ್ಲಿ ಪ್ರಕಟವಾದ ಮಾಹಿತಿ ಮತ್ತು ಚಿತ್ರ ಲೇಖಕರು ಹಂಚಿಕೊಂಡಿದ್ದು).