ನಾಳೆ ಶನಿವಾರ ರೂ. 50 ಕೋ. ಮೌಲ್ಯದ ಮೌಲ್ಯದ ವಸ್ತುಗಳನ್ನು ನಾಶಪಡಿಸಲಿರುವ ರಾಜ್ಯ ಸರಕಾರ- ಯಾಕೆ ಗೊತ್ತಾ?
ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿರುವ ರೂ. 50 ಕೋ. ಗೂ ಹೆಚ್ಚು ಮೌಲ್ಯದ ನಾನಾ ಬಗೆಯ ಮಾದಕ ದ್ರವ್ಯ(ಡ್ರಗ್ಸ್)ನ್ನು ಶನಿವಾರ ನಾಶ ಪಡಿಸಲಾಗುವುದು ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶನಿವಾರ ಅಂತಾರಾಷ್ಟ್ರೀಯ ಡ್ರಗ್ ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ದಿನದ ಅಂಗವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಡ್ರಗ್ಸ್ ನಾಶ ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಗಾಂಜಾ, ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, […]
ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸಿದ ಅನ್ನದಾತರು
ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಅನಲಾಕ್ ಜಾರಿಯಾಗುತ್ತಿದ್ದಂತೆ ಒಂದೊಂದೆ ಚಟುವಟಿಕೆಗಳು ಶುರುವಾಗಿವೆ. ವಿಜಯಪುರ ಜಿಲ್ಲೆಯ ಹಡಗಲಿಯಲ್ಲಿ ಕಾರ ಹುಣ್ಣಿಮೆ ಅಂಗವಾಗಿ ರೈತರು ಎತ್ತಿನ ಗಾಡಿ ಮತ್ತು ಎತ್ತುಗಳನ್ನು ಓಡಿಸಿ ಸಂಭ್ರಮಿಸಿದ್ದಾರೆ. ಕಾರ ಹುಣ್ಣಿಮೆ ಅನ್ನದಾತರ ಪಾಲಿಗೆ ತಮ್ಮ ಕುಟುಂಬ ಸದಸ್ಯರಂತಿರುವ ಎತ್ತುಗಳಿಗೆ ಸ್ನಾನ ಮಾಡಿಸಿ, ನಾನಾ ಬಣ್ಣಗಳನ್ನು ಹಚ್ಚಿ ರಿಬ್ಬನ್ ಕಟ್ಟಿ ಸಂಭ್ರಮಿಸುವ ಹಬ್ಬ. ಮುಂಗಾರು ಕೃಷಿ ಚಟುವಟಿಕೆಗಳು ಇದರಿಂದ ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಕಾರ ಹುಣ್ಣಿಮೆ ರೈತರ ಪಾಲಿಗೆ ಸಂಭ್ರಮದ ಹಬ್ಬವಾಗಿದೆ. ಕೊರೊನಾ ಮಾರ್ಗಸೂಚಿ ಇದ್ದರೂ ಹಡಗಲಿಯಲ್ಲಿ […]