ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸಿದ ಅನ್ನದಾತರು

ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಅನಲಾಕ್ ಜಾರಿಯಾಗುತ್ತಿದ್ದಂತೆ ಒಂದೊಂದೆ ಚಟುವಟಿಕೆಗಳು ಶುರುವಾಗಿವೆ.

ವಿಜಯಪುರ ಜಿಲ್ಲೆಯ ಹಡಗಲಿಯಲ್ಲಿ ಕಾರ ಹುಣ್ಣಿಮೆ ಅಂಗವಾಗಿ ರೈತರು ಎತ್ತಿನ ಗಾಡಿ ಮತ್ತು ಎತ್ತುಗಳನ್ನು ಓಡಿಸಿ ಸಂಭ್ರಮಿಸಿದ್ದಾರೆ. ಕಾರ ಹುಣ್ಣಿಮೆ ಅನ್ನದಾತರ ಪಾಲಿಗೆ ತಮ್ಮ ಕುಟುಂಬ ಸದಸ್ಯರಂತಿರುವ ಎತ್ತುಗಳಿಗೆ ಸ್ನಾನ ಮಾಡಿಸಿ, ನಾನಾ ಬಣ್ಣಗಳನ್ನು ಹಚ್ಚಿ ರಿಬ್ಬನ್ ಕಟ್ಟಿ ಸಂಭ್ರಮಿಸುವ ಹಬ್ಬ. ಮುಂಗಾರು ಕೃಷಿ ಚಟುವಟಿಕೆಗಳು ಇದರಿಂದ ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಕಾರ ಹುಣ್ಣಿಮೆ ರೈತರ ಪಾಲಿಗೆ ಸಂಭ್ರಮದ ಹಬ್ಬವಾಗಿದೆ.

ವಿಜಯಪುರ ಜಿಲ್ಲೆಯ ಹಡಗಲಿಯಲ್ಲಿ ಕರುವನ್ನು ಓಡಿಸುವ ಮೂಲಕ ಕಾರ ಹುಣ್ಣಿಮೆ ಸಂಭ್ರಮಾಚರಣೆ ನಡೆಸಿದ ಯುವಕರು

ಕೊರೊನಾ ಮಾರ್ಗಸೂಚಿ ಇದ್ದರೂ ಹಡಗಲಿಯಲ್ಲಿ ಯುವಕರು ಮತ್ತು ರೈತರು ತಂತಮ್ಮ ಎತ್ತುಗಳನ್ನು ಗಾಡಿಗಳಿಗೆ ಕಟ್ಟಿ ಓಡಿಸಿದ್ದಾರೆ. ಹಲವಾರು ರೈತರು ಎತ್ತುಗಳಿಗೆ ಕಟ್ಟಲಾಗಿದ್ದ ಹಗ್ಗದ ಜೊತೆ ಎತ್ತುಗಳನ್ನು ಓಡಿಸಿ ತಾವೂ ಅವುಗಳ ಹಿಂದೆ ಓಡುವ ಮೂಲಕ ಗಮನ ಸೆಳೆದಿದ್ದಾರೆ.

ಅಷ್ಟೇ ಅಲ್ಲ, ಕಲ್ಲು ಗುಂಡುಗಳನ್ನು ಎತ್ತುವ ಮೂಲಕ ಗ್ರಾಮೀಣ ಕ್ರೀಡೆಯನ್ನೂ ನಡೆಸಿದ್ದಾರೆ. ಒಟ್ಟಾರೆ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಜನರಲ್ಲಿನ ಭಯವೂ ದೂರವಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳ ಜೊತೆ ಜಾನುವಾರುಗಳನ್ನು ಓಡಿಸುವ ಮೂಲಕ ಕಾರ ಹುಣ್ಣಿಮೆ ಆಚರಿಸಿ ಸಂಭ್ರಮಿಸಿದ್ದಾರೆ.

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಶಿರಬೂರ ಗ್ರಾಮದಲ್ಲಿ ಕಾರ ಹುಣ್ಣಿಮೆ ಸಡಗರ

ಬಬಲೇಶ್ವರ ತಾಲೂಕಿನ ತಾಲೂಕಿನ ಶಿರಬೂರ ಗ್ರಾಮದಲ್ಲಿ ಈ ಬಾರಿ ಕಾರಹುಣ್ಣಿಮೆಯ ಕಿಲಾರಿ ಎತ್ತುಗಳ ಮೆರವಣಿಗೆ ನಡೆಯಿತು. ಮನೆಮನೆಗೆ ಮೆರವಣಿಗೆ ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಬಿ ಪಾಟೀಲ(ಶಿರಬೂರ) ಮತ್ತು ಗ್ರಾಮದ ರೈತರು ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌