ವಿಜಯಪುರ: ಇದು ಕೊರೊನಾ ಲಾಕಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಬಾಲಕನ ಸ್ಟೋರಿ. ಕೊರೊನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೇಮ್ಸ್, ಟಿವಿ, ಆನಲೈನ್ ಕ್ಲಾಸ್ ಗಳಲ್ಲಿ ಸಮಯ ಕಳೆದಿದ್ದೆ ಹೆಚ್ಚು. ಆದರೆ, ಬಸವ ನಾಡು ವಿಜಯಪುರದ ಈ ಬಾಲಕ ಇತರ ಮಕ್ಕಳಂತೆ ಕಾಲಹರಣ ಮಾಡದೇ ಎಲ್ಲರನ್ನು ಆಕರ್ಷಿಸುವಂಥ ಕೆಲಸ ಮಾಡಿದ್ದಾನೆ.
ತನ್ನ ಮನೆಯಲ್ಲಿ ಬಿದ್ದ ವೇಸ್ಟ್ ಪೇಪರ್ ಗಳನ್ನ ಬಳಸಿದ ಈ ಬಾಲಕ ಅಸಲಿ ಹೂವುಗಳಂತೆ ಬಣ್ಣ ಬಣ್ಣದ ತರಹೇವಾರಿ ಫ್ಲಾವರ್ ಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾನೆ. ಹೀಗೆ ವೇಸ್ಟ್ ಪೇಪರ್ ಗಳನ್ನು ಕೈಯ್ಯಲ್ಲಿರುವ ಕತ್ತರಿಯಿಂದ ಕಟ್ ಮಾಡುತ್ತ ಕುಳಿತುವ ಬಾಲಕನ ಹೆಸರು ಸುಮೀತ ಸಾವಳಂಸಗ. ವಯಸ್ಸು 14 ವರ್ಷ. ವಿಜಯಪುರ ನಗರದ ಬೆಂಡಿಗೇರಿ ಗಲ್ಲಿಯ ಹುಡುಗ.
ವಿಜಯಪುರ ನಗರದ ರುಕ್ಮಾಂಗದ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಕೊರೊನಾ ಸೋಂಕು ಹೆಚ್ಚಳದಿಂದ ಎರಡು ತಿಂಗಳು ಲಾಕಡೌನ್ ಇದ್ದಾಗ ಆನಲೈನ್ ಕ್ಲಾಸ್ ಗಳೂ ಬಂದ್ ಆಗಿದ್ದವು. ಆಗ ಮನೆಯಲ್ಲಿದ್ದ ಸುಮೀತ ಸಾವಳಸಂಗ ಬೇಸರು ಕಳೆಯಲು ಮನೆಯಲ್ಲಿದ್ದ ಹಳೆಯ ಕಲರ್ ಕಲರ್ ಲಗ್ನ ಪತ್ರಿಕೆಗಳನ್ನು ತೆಗೆದುಕೊಂಡು ಅವುಗಳಿಗೆ ಹೂವಿನ ರೂಪ ನೀಡಿದ್ದಾನೆ.
ಈ ಹೂವುಗಳನ್ನು ನೋಡಿದರೆ ಥೇಟ್ ಅಸಲಿ ಹೂವುಗಳಂತೆ ಗೋಚರಿಸುತ್ತವೆ. ಮನೆಯಲ್ಲಿದ್ದ ವೇಸ್ಟ್ ಪೇಪರ್‌ನಲ್ಲೆ ಒಂದಕ್ಕಿಂದ ಒಂದು ಸುಂದರ ಹೂಗಳನ್ನು ಅರಳಿಸುವ ಮೂಲಕ ಬಾಲಕ ಭೇಷ್ ಎನಿಸಿಕೊಂಡಿದ್ದಾನೆ.
ಲಾಕ್‌ಡೌನ್ ಸಮಯದಲ್ಲಿ ಉಳಿದ ಮಕ್ಕಳಂತೆ ಮೋಬೈಲ್ ಹಿಡಿದು ಗೇಮ್ಸ್ ಣಾಡುತ್ತ ಕಾಲಹರಣ ಮಾಡುವ ಬದಲು ಯ್ಯೂಟ್ಯೂಬ್ ಮತ್ತು ಗೂಗಲ್ ನಲ್ಲಿ ಹೂವಿನ ಚಿತ್ರಗಳನ್ನು ನೋಡಿ ತನ್ನಲ್ಲಿರುವ ಕಲೆಯನ್ನು ಅರಳಿಸಿದ್ದಾನೆ. ಸೂರ್ಯಕಾಂತಿ, ಕಮಲ, ಸೇವಂತಿ, ಗುಲಾಬಿ ಹೂಗಳು ಇವನ ಕೈಚಳಕದಲ್ಲಿ ಮೂಡಿ ಬಂದಿದ್ದು, ಎಂಥವರನ್ನೂ ಮಂತ್ರಮುಗ್ದಗೊಳಿಸುವಂತಿವೆ.
ಇವುಗಳ ಜೊತೆಯಲ್ಲಿಯೇ ನಿರುಪಯುಕ್ತ ಕಾಗದ ಮತ್ತು ರಟ್ಟಿನಲ್ಲಿ ಆಕರ್ಷಕ ಪೋಟೋ ಪ್ರೇಮ್ ಗಳನ್ನು ಕೂಡ ತಯಾರಿಸಿದ್ದಾನೆ. ಸ್ಥಳೀಯರು ಮತ್ತು ಈತನ ಕುಟುಂಬದವರು ಬಾಲಕ ಸುಮೀತ ಸಾವಳಸಂಗ ನಲ್ಲಿರುವ ಕಲೆಯನ್ನು ಕಂಡು ಬೆರಗಾಗಿದ್ದಾರೆ.
ಲಾಕಡೌನ್ ಸಂದರ್ಭದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಆಟ, ಆನಲೈನ್ ಕ್ಲಾಸಿನಲ್ಲಿ ಬ್ಯೂಸಿಯಾಗಿದ್ದರೆ, ಈತ ಮಾತ್ರ ತನ್ನಲ್ಲಿರುವ ಕಲೆಯನ್ನು ಹೊರ ಹಾಕಲು ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದು ಮಾತ್ರ ಶ್ಲಾಘನೀಯವಾಗಿದೆ.