ವಿಜಯಪುರ: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ನಾನಾ ಸಂಘ, ಸಂಸ್ಥೆಗಳು, ದಾನಿಗಳು ವಿಜಯಪುರ ಜಿಲ್ಲೆಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ನೀಡಿದ್ದು, ಅವುಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸಂಬಂಧಿಸಿದ ಸರಕಾರಿ ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ತಿಳಿಸಿದ್ದಾರೆ.
ಜೂ. 30 ರಂದು ಬೆಂಗಳೂರಿನ ಸಂಭವ ಫೌಂಡೇಶನ್, 10 ಎಲ್ ಪಿ ಎಂ ಸಾಮರ್ಥ್ಯದ 10 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡಿದೆ. ಅವುಗಳನ್ನು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಲಾಗಿದೆ. ಅಷ್ಟೇ ಅಲ್ಲ ಸಂಭವ ಫೌಂಡೇಶನ್ ಮಂಂಬರುವ ದಿನಗಳಲ್ಲಿ ವೈದ್ಯಕೀಯ ಉಪಕರಣಗಳನ್ನೂ ಜಿಲ್ಲೆಗೆ ನೀಡುವುದಾಗಿ ತಿಳಿಸಿದೆ. ಚೆಕ್ ಪೋಸ್ಟ್ ಸ್ವ್ಯಾಬ್ ಕಲೆಕ್ಷನ್ ಗಾಗಿ 14 ಸ್ವ್ಯಾಬ್ ಸಂಗ್ರಹಕಾರರು, 14 ಡಾಟಾ ಎಂಟ್ರಿ ಆಪ್‌ರೇಟರಗಳು, ಮಹಾರಾಷ್ಟ್ರ ಗಡಿ ಗ್ರಾಮಗಳ ವ್ಯಾಪ್ತಿಯಲ್ಲಿ 120 ಆಶಾ ಸಹಾಯಕರು, ಕಾಲೇಜು ವ್ಯಾಕ್ಸಿನೇಶನ್ ಸೆಂಟರ್ ಗಳಿಗಾಗಿ 10 ಸ್ಟಾಫ್ ನರ್ಸ್ ಗಳು, 10 ಡಾಟಾ ಎಂಟ್ರಿ ಆಪ್‌ರೇಟರಗಳನ್ನು ಒದಗಿಸುವುದಾಗಿ ತಿಳಿಸಿರುತ್ತಾರೆ ಎಂದು ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಈ ವೈದ್ಯಕೀಯ ಸಲಕರಣೆಗಳ ಸ್ವೀಕಾರ ಸಂದರ್ಭದಲ್ಲಿ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ, ಮುಖಂಡರಾದ ಅಡಿವೆಪ್ಪ ಸಾಲಗಲ್ ಹಾಗೂ ಇತರರು ಉಪಸ್ಥಿತರಿದ್ದರು.