ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಡಾಕ್ಟರ್ಸ್ ಗಳ ಬಳಿಕೆ ತೆರಳಿ ಗೌರವಿಸಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್

ವಿಜಯಪುರ: ರಾಷ್ಟ್ರೀಯ ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ವಿಜಯಪುರ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ ತಮ್ಮ ಬೆಂಬಲಿಗರೊಂದಿಗೆ ನಾನಾ ವೈದ್ಯರ ಬಳಿಗೆ ತೆರಳಿ ಸನ್ಮಾನಿಸಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಕೊರೊನಾ ಸಂಕಷ್ಟ ಸಮಯದಲ್ಲಿ ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ರೋಗಿಗಳ ಸೇವೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರ ಸೇವೆಯನ್ನು ಸ್ಮರಿಸಲು ಅಬ್ದುಲ್ ಹಮೀದ್ ಮುಶ್ರೀಫ್ ನಾನಾ ವೈದ್ಯರ ಬಳಿಗೆ ತೆರಳಿ ಸನ್ಮಾನಿಸಿದರು.

ಮೊದಲಿಗೆ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪಸೆ ಅವರ ಕಚೇರಿಗೆ ತೆರಳಿದ ಅವರು ಆರೋಗ್ಯಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.

ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪಸೆ ಅವರನ್ನು ಸನ್ಮಾನಿಸಿದ ಹಮೀದ ಮುಶ್ರಿಫ್

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈಧ್ಯರಿಗೂ ಕುಟುಂಬಗಳಿವೆ. ಕೊರೊನಾ ಸಂಕಷ್ಟ ಸಮಯದಲ್ಲಿ ಡಾಕ್ಟರ್ಸ್ ಗಳು ತಮ್ಮ ಕೊಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ, ರೋಗಿಗಳ ಸೇವೆಯೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ನಾವೆಲ್ಲ ಅವರಿಗೆ ಚಿರಋಣಿಯಾಗಿರಬೇಕು ಎಂದು ಹೇಳಿದರು.

ನಂತರ ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ತೆರಳಿದ ಅವರು, ತಾಲೂಕು ಆರೋಗ್ಯಾಧಿಕಾರಿ ಡಾ. ಕವಿತಾ ದೊಡಮನಿ ಅವರನ್ನೂ ಸನ್ಮಾನಿಸಿದರು.

ಅಲ್ಲದೇ, ಆಯುಷ್ ಆಸ್ಪತ್ರೆಗೆ ತೆರಳಿದ ಅಬ್ದುಲ್ ಹಮೀದ ಮುಶ್ರಿಫ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಿತೀನ ಅಗರವಾಲ ಅವರನ್ನು ಸನ್ಮಾನಿಸಿ ಗೌರವಿಸಿದರು.

ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಿತೀನ ಅಗರವಾಲ ಅವರಿಗೆ ಸನ್ಮಾನಿಸಿದ ಹಮೀದ ಮುಶ್ರಿಫ್

ನವಭಾಗ ನಗರ ಆರೋಗ್ಯ ಕೇಂದ್ರಕ್ಕೆ ತೆರಳಿದ ಅವರು, ಅಲ್ಲಿನ ವೈದ್ಯೆ ಡಾ. ಜೀನತ್ ಫಯಾಜ್ ಮುಶ್ರಿಫ್ ಅವರನ್ನೂ ಸನ್ಮಾನಿಸಿ ಗೌರವಿಸಿದರು.

ವಿಜಯಪುರದಲ್ಲಿ ಡಾ. ಜೀನತ ಫಯಾಜ ಮುಶ್ರಿಫ್ ಅವರನ್ನು ಸನ್ಮಾನಿಸಿದ ಕಾಂಗ್ರೆಸ್ ಮುಖಂಡರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಇರ್ಫಾನ ಶೇಖ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶರಣಪ್ಪ ಯಕ್ಕುಂಡಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆರತಿ ಶಹಾಪುರ, ಮುಖಂಡರಾದ ಮಂಜುಳಾ ಜಾಧವ, ಹಮೀದಾ ಪಟೇಲ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌