ವಿಜಯಪುರ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ 45ನೇ ಸ್ಥಾನ

ವಿಜಯಪುರ: ಟೈಮ್ಸ್ ಎಂಜಿನಿಯರಿಂಗ್ ಸಂಸ್ಥೆ ನಡೆಸಿದ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜುಗಳ ಸಮೀಕ್ಷೆಯಲ್ಲಿ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜನಿಯರಿಂಗ್ ಕಾಲೇಜು ರಾಷ್ಟ್ರೀಯ ಮಟ್ಟದಲ್ಲಿ 45ನೇ ಸ್ಥಾನ ಪಡೆದು ಗಮನ ಸೆಳೆದಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಕಾಲೇಜಿನ ಪ್ರಾಚಾರ್ಯ ಡಾ. ಅತುಲ ಆಯಿರೆ, ದೇಶದಲ್ಲಿಯೇ ಪ್ರಖ್ಯಾತ ಟೈಮ್ಸ್ ಸಂಸ್ಥೆಯು ಅಂಗ ಸಂಸ್ಥೆ ಟೈಮ್ಸ್ ನಾನಾ ಎಂಜಿನಿಯರಿಂಗ್ ಕಾಲೇಜುಗಳ ಮೂಲಭೂತ ಸೌಕರ್ಯಗಳು, ತಂತ್ರಜ್ಞಾನದ ಅನುಭವ, ಸಂಶೋಧನೆ ಯೋಜನೆಗಳು, ಬೋಧನಾ ಸಲಕರಣೆಗಳನ್ನು ಗಣನೆಗೆ ತೆಗೆದುಕೊಂಡು 2020ನೇ ವರ್ಷದಲ್ಲಿ 53ನೇ ಸ್ಥಾನವನ್ನು ನೀಡಿತ್ತು. ಈಗ 2021ನೇ ವರ್ಷದಲ್ಲಿ ವಿಶೇಷವಾಗಿ ಪದವಿ ವಿದ್ಯಾರ್ಥಿಗಳ ಸಂಶೋಧನೆ ಹಾಗೂ ಜಗತ್ತಿನ ಪ್ರಸಿದ್ಧ ಕಂಪನಿಗಳಲ್ಲಿ ನಾನಾ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವದನ್ನು ಪರಿಗಣಿಸಿ 43ನೇ ಸ್ಥಾನ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ರಾಷ್ಟ್ರ ಮಟ್ಟದಲ್ಲಿ 45ನೇ ಸ್ಥಾನ ಪಡೆದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜು

ಅಲ್ಲದೇ, ಭಾರತದ ಖಾಸಗಿ ಎಂಜನಿಯರಿಂಗ್ ಕಾಲೇಜುಗಳ ಪೈಕಿ ತಮ್ಮ ಕಾಲೇಜಿಗೆ 35ನೇ ಸ್ಥಾನ ಹಾಗೂ ಕರ್ನಾಟಕದ ಎಂಜಿನಿರಿಂಗ್ ಕಾಲೇಜುಗಳಲ್ಲಿ 6ನೇ ಸ್ಥಾನವನ್ನು ಲಭಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ 36 ವರ್ಷಗಳಿಂದ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವತ್ತ ಸತತ ಪರಿಶ್ರಮ ವಹಿಸಿದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಕಾರ್ಯವನ್ನು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌