ಕೊರೊನಾ ನಿಯಂತ್ರಣಕ್ಕಾಗಿ ಅರ್ಹ ಪಲಾನುಭವಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಇ- ಆಡಳಿತ ನಿರ್ದೆಶಕಿ ಶಿಲ್ಪಾ ನಾಗ ಕರೆ

ವಿಜಯಪುರ: ಕೊರೊನಾ ಬಡವ ಶ್ರೀಮಂತ, ಹಿರಿಯರೂ, ಕಿರಿಯರೂ ಎನ್ನದೆ ಒಂದೂವರೆ ವರ್ಷದಿಂದ ಕಾಡುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲು ಕಡ್ಡಾಯವಾಗಿ ಪ್ರತಿಯೊಬ್ಬರು ಲಸಿಕೆ ಹಾಕಿ ಕೊಳ್ಳಬೇಕು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ ಇಲಾಖೆಯ ಇ- ಆಡಳಿತ ನಿರ್ದೆಶಕಿ ಶಿಲ್ಪಾ ನಾಗ ಕರೆ ನೀಡಿದ್ದಾರೆ.

ವಿಜಯಪುರ ನಗರದ ಜಿಲ್ಲಾಸ್ಪತ್ರೆಯ ಆವರಣದ ಕ್ಷಯ ರೋಗ ನಿರ್ವಹಣೆ ತರಬೇತಿ ಸಭಾಂಗಣದಲ್ಲಿ ನಡೆದ ಎರಡು ದಿನಗಳ ಮೂರು ಜಿಲ್ಲೆಗಳ ಕೊವಿಡ್ ಲಸಿಕಾ ಆಂದೋಲನ ಹಾಗೂ ತರಬೇತಿ ಕಾರ್ಯಕ್ರಮವನ್ನು ವರ್ಚುವಲ್ ಸಮಾರಂಭದ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೊರೊನಾ ಹೋಗಲಾಡಿಸಬೇಕಾದರೆ ನಾವು ಮುನ್ನಚ್ಚರಿಕೆ ಕ್ರಮಗಳನ್ನು ದಿನನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧರಿಸುವುದು, ಸ್ಯಾನಿಟೈಸರ್ ಬಳಕೆಯನ್ನು ತಪ್ಪದೆ ಪಾಲಿಸಬೇಕು. ಭಾರತದಲ್ಲಿ ವಿತರಿಸಲಾಗುತ್ತಿರುವ ಲಸಿಕೆಗಳು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಪ್ರತಿಯೊಬ್ಬರು ಲಸಿಕೆಗಳನ್ನು ಹಾಕಿಸಿಕೊಂಡು ಈ ಮಹಾಮಾರಿಯನ್ನು ತಡೆಗಟ್ಟಬಹುದಾಗಿದೆ. ಲಸಿಕೆಯ ಬಗ್ಗೆ ಅಪಪ್ರಚಾರವಾಗುತ್ತಿದ್ದು, ಇಂಥ ವದಂತಿಗಳಿಗೆ ಕಿವಿಗೊಡಬೇಡಿ. ಸರಕಾರವು ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವ ಗುರಿಯನ್ನು ಹೊಂದಿದ್ದು, ಲಸಿಕೆಯಿಂದ ಯಾರೂ ವಂಚಿತರಾಗಬಾರದು ಎಂದು ಹೇಳಿದರು.

ರಾಜ್ಯದ ಧ್ವನಿ ಪೌಂಡೇಶನ ಹಾಗೂ ನಾನಾ ಜಿಲ್ಲೆಗಳ ಸಂಘ ಸಂಸ್ಥೆಗಳು ಲಸಿಕಾ ಆಂದೋಲನಕ್ಕೆ ನಮ್ಮೊಂದಿಗೆ ಕೈಜೊಡಿಸಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯ. ಸಂಘ ಸಂಸ್ಥ್ಥೆಯ ಸಿಬ್ಬಂದಿಗಳಿಗೆ ನುರಿತ ವೈದ್ಯರುಗಳಿಂದ ತರಬೇತಿಯನ್ನು ನೀಡಿದ್ದು, ಅದರ ಅಂಗವಾಗಿ ರಾಜ್ಯದ ಎಲ್ಲೆಡೆ ಮುಂಚೂಣಿ ಕಾರ್ಯಕರ್ತರಿಗೆ ಅಚ್ಚುಕಟ್ಟಾಗಿ ಲಸಿಕಾ ಕಾರ್ಯಕ್ರಮವು ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ್ವನಿ ಪೌಂಡೇಶನ ಬೆಂಗಳೂರು, ಗ್ರಾಮೀಣಾಭಿವೃದ್ದಿ ಸಂಸ್ಥೆ- ಕೊರೊನಾ ಜಿಲ್ಲಾ ನೋಡಲ್ ಸಂಸ್ಥೆ ಹಾಗೂ ಪೆವಾರ್ಡ-ಕೆ ವಿಜಯಪುರ ಅವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಧ್ವನಿ ಫೌಂಡೇಶನ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಿನಾಥ ಕೆ. ಎಸ್, ಬೀದರ ಜಿಲ್ಲಾ ಪಂಚಾಯಿತಿ ಸಿಇಒ ಜಹೀರ ನಾಸಿಮ್, ಕೊಪ್ಪಳ ಜಿಲ್ಲೆಯ ನೋಡಲ್ ಅಧಿಕಾರಿಗಳು ಹಾಗೂ ಆರ್ ಸಿ ಎಚ್ ಅಧಿಕಾರಿ ಡಾ, ಮಹೇಶ ನಾಗರಬೆಟ್ಟ, ಫೇವರ್ಡ್ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಎನ್. ಮೇಟಿ, ಉಪಾಧ್ಯಕ್ಷ ಡಾ, ಮಲ್ಲಮ್ಮ ಯಾಳವಾರ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ, ರವೀಂದ್ರ ಮದ್ದರಕಿ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿ ಡಾ, ಈರಣ್ಣ ಧಾರವಾಡಕರ, ಎ. ಬಿ. ಅಲ್ಲಾಪೂರ, ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ, ಬಾಬು ಸಜ್ಜನ, ವಿಶಾಲಾ ಸಂಸ್ಥೆಯ ಸರೋಜಾ ಕೌಲಾಪುರ, ಕೆ. ಬೂದೆಪ್ಪ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌