ಬಸವಾದಿ ಶರಣರು, ಅವರ ವಚನಗಳು, ಕೊಡುಗೆ ಬೆಳಕಿಗೆ ಬರಲು ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಕಾರಣ- ಎಂ. ಬಿ. ಪಾಟೀಲ

ವಿಜಯಪುರ: ಬಸವಾದಿ ಶರಣರು, ಅವರ ವಚನಗಳು ಮತ್ತು ಅವರ ಕೊಡುಗೆಗಳು ಜಗತ್ತಿಗೆ ತಿಳಿಯಲು ವಚನ ಪಿತಾಮಹ ಫ. ಗು. ಹಳಕಟ್ಟಿ ಅವರೇ ಕಾರಣ. ಒಂದು ವೇಳೆ ಫ. ಗು. ಹಳಕಟ್ಟಿ ಅವರು ಇರದಿದ್ದರೆ ಬಸವ ನಾಡಿನ ಶರಣ ಚರಿತ್ರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ವಚನ ಪಿತಾಮಹ ಡಾ. ಡಾ. ಫ. ಗು. ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರದಮಲ್ಲಿ ಪಾಲ್ಗೋಂಡ ಎಂ. ಬಿ. ಪಾಟೀಲ

ವಿಜಯಪುರದಲ್ಲಿ ಬಿ. ಎಲ್. ಡಿ. ಇ. ಸಂಸ್ಥೆಯ ಆವರಣದಲ್ಲಿರುವ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಹಳಕಟ್ಟಿ ಅವರ 141ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಬಸವಾದಿ ಶರಣರು ಮತ್ತು ಅವರ ಸಾಧನೆ, ಕೊಡುಗೆಗಳು ಜನರಿಗೆ ತಿಳಿಯಲು ವಚನ ಪಿತಾಮಹ ಫ. ಗು. ಹಳಕಟ್ಟಿ ಅವರು ಕಾರಣ. ಅವರು ಇರದಿದ್ದರೆ ಇಂದು ಬಸವಾದಿ ಶರಣರ ಬಗ್ಗೆ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ವಿಜಯಪುರದಲ್ಲಿ ವಚನ ಪಿತಾಮಹ ಡಾ. ಡಾ. ಫ. ಗು. ಹಳಕಟ್ಟಿ ಸಮಾಧಿಗೆ ನಮನ ಸಲ್ಲಿಸಿದ ಎಂ. ಪಿ. ಪಾಟೀಲ

ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳಕಟ್ಟಿ ಅವರು ತಮ್ಮ ತನು, ಮನ, ಧನದಿಂದ ಶರಣರು ಮತ್ತು ಶರಣರ ವಚನಗಳು ಹಾಗೂ ಇತರ ಕೊಡುಗೆಗಳನ್ನು ಬೆಳಕಿಗೆ ತಂದಿದ್ದಾರೆ. ಹಳಕಟ್ಟಿ ಅವರು ಕೇವಲ ಸಾಹಿತ್ಯ ಮಾತ್ರವಲ್ಲ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ವಿಜಯಪುರ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜನರ ಮನಸ್ಸಿನಲ್ಲಿ ಉಳಿಯುವಂಥ ಕಾಯಕ ಮಾಡಿದ್ದಾರೆ ಎಂದು‌ ಬಣ್ಣಿಸಿದರು.

ಫ. ಗು. ಹಳಿಕಟ್ಟಿ ಅವರು ತಮ್ಮ ಮನೆಯನ್ನು ಮಾರಾಟ ಮಾಡಿ, ಶಿವಾನುಭವ ದಿನ ಪತ್ರಿಕೆಯನ್ನು ಹೊರತಂದು ಸುಮಾರು 250 ಜನ ಶರಣರು ಮತ್ತು ಅವರ ಸಾವಿರಾರು ವಚನಗಳನ್ನು ಹಾಗೂ ಕೊಡುಗೆಗಳನ್ನು ನಾಡಿಗೆ ಪರಿಚಯಿಸಿದ್ದಾರೆ ಎಂ. ಬಿ. ಪಾಟೀಲ ತಿಳಿಸಿದರು.

ಇದೇ ಸಂದರ್ಭಲ್ಲಿ ಫ. ಗು. ಹಳಕಟ್ಟಿ ಅವರ ಮೊಮ್ಮಗ ಮತ್ತು ಅವರ ಕುಟುಂಬದವರಿಗೆ ಎಂ. ಬಿ. ಪಾಟೀಲ ಸಹಾಯಧನದ ಚೆಕ್ ವಿತರಿಸಿದರು.

ವಿಜಯಪುರದಲ್ಲಿ ವಚನ ಪಿತಾಮಹ ಫ. ಗು. ಹಳಕಟ್ಟಿ ಕುಟುಂಬ ಸದಸ್ಯರಿಗೆ ಸಹಾಯ ಧನದ ಚೆಕ್ ವಿತರಿಸಿದ ಎಂ. ಬಿ. ಪಾಟೀಲ

ಇದಕ್ಕೂ ಮುಂಚೆ ಎಂ. ಬಿ. ಪಾಟೀಲ ಅವರು ಹಳಕಟ್ಟಿ ಸಂಶೋಧನೆ ಕೇಂದ್ರದಲ್ಲಿ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಲ್ಲದೇ, ಹಳಕಟ್ಟಿ ಅವರ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು ಮತ್ತು ಹಳಕಟ್ಟಿ ಅವರ ಪ್ರತಿಮೆಗೂ ಗೌರವ ನಮನ ಸಲ್ಲಿಸಿದರು.

ವಿಜಯಪುರದಲ್ಲಿ ದಾವಣಗೆರೆ ಬಸವ ಕೇಂದ್ರದ ಮಹಾಂತೇಶ ಅಗಡಿ ಅವರಿಂದ ಎಂ. ಬಿ. ಪಾಟೀಲ ಅವರಿಗೆ ಪುಸ್ತಕ ಹಸ್ತಾಂತರ

ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿವಿ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ರಿಜಿಸ್ಟ್ರಾರ್ ಡಾ. ಜೆ. ಜಿ. ಅಂಬೇಕರ, ಹಿರಿಯ ಸಂಶೋಧಕ ಕೃಷ್ಣ ಕೋಲ್ಹಾರ ಕುಲಕರ್ಣಿ, ಡಾ. ಅರುಣ ಇನಾಮದಾರ, ಡಾ. ರಾಘವೇಂದ್ರ ಕುಲಕರ್ಣಿ, ಹಳಕಟ್ಟಿಯವರ ಮೊಮ್ಮಗ ಗಿರೀಶ ಹಳಕಟ್ಟಿ, ದಾವಣಗೆರೆ ಬಸವ ಕೇಂದ್ರದ ಮಹಾಂತೇಶ ಅಗಡಿ, ಡಾ. ಎಂ. ಎಸ್. ಮದಭಾವಿ, ಎಸ್. ಎ. ಬಿರಾದಾರ, ಎ. ಎಸ್. ಪೂಜಾರ, ಬೂದಿಹಾಳ, ವಿ. ಡಿ. ಐಹೊಳಿ, ಡಾ. ಮಹಾಂತೇಶ ಬಿರಾದಾರ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು

Leave a Reply

ಹೊಸ ಪೋಸ್ಟ್‌