ಬೆಂಗಳೂರು: ರಾಜ್ಯದಲ್ಲಿ ಮೊದಲ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದೆ.
ಬೆಂಗಳೂರಿನ ಜಯನಗರದ ಯುನೈಟೆಡ್ ಆಸ್ಪತ್ರೆಗೆ ಸ್ಪುಟ್ನಿಕ್-ವಿ ಲಸಿಕೆ ಸರಬರಾಜಾಗಿದ್ದು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಕರೋನಾ ಸಾಂಕ್ರಾಮಿಕದ ವಿರುದ್ದ ವಿಶ್ವದ ಮೊದಲ ಲಸಿಕೆಯಾಗಿರುವ ಸ್ಪುಟ್ನಿಕ್-ವಿ ರಾಜ್ಯದ ಮೊದಲ ಲಸಿಕಾ ಅಭಿಯಾನ ಇದಾಗಿದೆ. ಯುನೈಟೆಡ್ ಆಸ್ಪತ್ರೆಗೆ ಈಗಾಗಲೇ ಸಾಕಷ್ಟು ಡೋಸ್ ಗಳಷ್ಟು ಲಸಿಕೆ ಸರಬರಾಜಾಗಿದೆ. ಪ್ರತಿವಾರ ನಮ್ಮ ಅಗತ್ಯತೆಗೆ ತಕ್ಕಂತೆ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ರೆಡ್ಡಿ ಲ್ಯಾಬೋರೇಟರಿ ನೀಡಿದೆ. ಈ ಲಸಿಕೆಯ ಸಂಗ್ರಹಕ್ಕೆ ಅಗತ್ಯವಿರುವ ಅತ್ಯಾಧುನಿಕ ಫ್ರೀಜರ್‌ಗಳನ್ನು ಇಲ್ಲಿ ಅಳವಡಿಸಿಲಾಗಿದ್ದು, ಮೈನ್ಸ್ 30 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನದಲ್ಲಿ ಲಸಿಕೆಗಳನ್ನು ಸಂಗ್ರಹಿಸಲಾಗಿದೆ. ನಮ್ಮ ಎಲ್ಲಾ ಅತ್ಯಾಧುನಿಕ ಗುಣಮಟ್ಟದ ಸೇವೆಗಳನ್ನು ಎರಡು ವಾರಗಳ ಮಟ್ಟಿಗೆ ಲಸಿಕೆ ನೀಡುವ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ ಎಂದು ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕ ಡಾ. ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ಈ ಲಸಿಕೆಯನ್ನು ಅತ್ಯಂತ ಜತನದಿಂದ ಕಾಪಾಡಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ನಾವುಗಳು ದಿನದ ಎಲ್ಲಾ ಸಮಯದಲ್ಲೂ ಅತ್ಯಂತ ನಿಗಾ ಇಡುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದೇವೆ. ದೇಶದ ಯಾವುದೇ ಮೂಲೆಯಿಂದ ತಾಪಾಂಶದಲ್ಲಿ ಆಗುವ ಬದಲಾವಣೆಗಳನ್ನು ಮಾನಿಟರ್ ಮಾಡಬಹುದಾಗಿದೆ. ಹಾಗೂ ತುರ್ತು ಸಂಧರ್ಭದಲ್ಲಿ ಅಟೋಮ್ಯಾಟಿಕ್ ಆಗಿ ಎಸ್‌ಎಂಎಸ್ ಅಲರ್ಟ್ ಕಳುಹಿಸುವ ತಂತ್ರಜ್ಞಾನ ಇದಾಗಿದ್ದು, ತಕ್ಷಣ ನಮ್ಮ ತಂಡ ಸ್ಥಳಕ್ಕೆ ಆಗಮಿಸಿ ತುರ್ತು ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ ಮುರುಡಾ ತಿಳಿಸಿದರು.
ಲಸಿಕೆಯನ್ನು ಪಡೆದುಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ನಂ: 99169 77777 ನಲ್ಲಿ ಅತ್ಯಂತ ಸುಲಭವಾಗಿ ಲಸಿಕೆ ಪಡೆದುಕೊಳ್ಳುವ ಸ್ಲಾಟ್ ಬುಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080- 4566 6666/, 080-6933 3333, ಟೋಲ್ ಸಂಖ್ಯೆ- 1860 419 4444 ಅಥವಾ ಇ-ಮೇಲ್ info@unitedhospital.in ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.