ಹುತಾತ್ಮ ಯೋಧನ ಕುಟುಂಬಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ರೂ. 5 ಲಕ್ಷ ಸಹಾಯ ಧನ ನೀಡಿದ ಶಾಸಕ ಶಿವಾನಂದ ಪಾಟೀಲ
ವಿಜಯಪುರ: ದೇಶಕ್ಕಾಗಿ ಹುತಾತ್ಮನಾದ ವೀರಯೋಧ ಕಾಶಿರಾಯ ಬೊಮ್ಮನಹಳ್ಳಿ ಸೇವೆ ಅಪ್ರತಿಮವಾಗಿದೆ. ಯುವಕರು ಸೇನೆಗೆ ಸೇರಲು ನಾವು ಪ್ರೇರೇಪಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರು ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಹುತಾತ್ಮ ಕಾಶಿರಾಯ ಬೊಮ್ಮನಹಳ್ಳಿ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ರೂ. 5 ಲಕ್ಷ ಸಹಾಯ ಧನದ ಚೆಕ್ ವಿತರಿಸಿ ಮಾತನಾಡಿದರು. ಕಾಶಿರಾಯ […]
ಕಾರ್ಮಿಕ ಇಲಾಖೆಯಿಂದ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ
ವಿಜಯಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಆಹಾರ ವಿತರಣೆ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆಯಿತು. ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಿರೀಕ್ಷಕರ ಕಛೇರಿಗಳಲ್ಲಿ ಹೆಸರು ನೋಂದಾಯಿಸಿಕೊಂಡ ಕಟ್ಟಡ ಕಾರ್ಮಿಕರ ಆರೋಗ್ಯದ ಹಿತರಕ್ಷಣೆಗಾಗಿ ಮತ್ತು ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಇಂಡಿ ವಿಭಾಗದ ಉಪವಿಭಾಗಾಧಿಕಾರಿ ರಾಹುಲ ಶಿಂಧೆ, ಇಂಡಿ ತಹಶೀಲ್ದಾರ ಸಿ, […]
ಕೇಂದ್ರ ಸಂಪುಟ ವಿಸ್ತರಣೆ- ಪ್ರಾತಿನಿಧ್ಯ ವಿಜಯಪುರಕ್ಕೊ? ಚಿತ್ರದುರ್ಗಕ್ಕೊ? ಎಂಬುದೇ ಕುತೂಹಲ
ವಿಜಯಪುರ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿರುವ ಮಧ್ಯೆಯೇ ರಾಜ್ಯದಿಂದ ದಲಿತರ ಕೋಟಾದಲ್ಲಿ ಯಾರಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ರಾಜ್ಯದ ಐದೂ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರಿದ್ದಾರೆ. ಇವರಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆರನೇ ಬಾರಿ ಸಂಸದರಾಗಿದ್ದರೆ, ವಿ. ಶ್ರೀನಿವಾಸ ಪ್ರಸಾದ(ಚಾಮರಾಜನಗರ) ಎರಡನೇ ಬಾರಿ, ನಾರಾಯಣಸ್ವಾಮಿ(ಚಿತ್ರದುರ್ಗ), ಉಮೇಶ ಜಾಧವ(ಕಲಬುರಗಿ) ಮತ್ತು ಮುನಿಸ್ವಾಮಿ(ಕೋಲಾರ) ಇದೇ ಮೊದಲ ಬಾರಿಗೆ ಸಂಸದರಾಗಿದ್ದಾರೆ. ರಮೇಶ ಜಿಗಜಿಣಗಿ ಈಗಾಗಲೇ ಒಂದು ಬಾರಿ ಈ ಹಿಂದಿನ […]
ಬಿ ಎಲ್ ಡಿ ಇ ಡೀಮ್ಡ್ ವಿವಿಯ ಡಾ. ಪ್ರವೀಣ ಶಹಾಪುರ ಕೇರಳ ಆರೋಗ್ಯ ವಿವಿಗೆ ನಾಮನಿರ್ದೇಶನ
ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈಧ್ಯಕೀಯ ಮಹಾವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಪ್ರವೀಣ ರಾ. ಶಹಾಪುರ ಅವರನ್ನು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ರಿ-ಕ್ಲಿನಿಕಲ್ ಸ್ನಾತಕೋತ್ತರ ವಿಭಾಗಕ್ಕೆ ಅಧ್ಯಯನ ಮಂಡಳಿಯ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ. ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಈ ಕುರಿತು ಅಧಿಸೂಚನೆ ಬಿಡುಗಡೆ ಹೊರಡಿಸಿದೆ. ಈ ನಾಮನಿರ್ದೇಶನಕ್ಕೆ ಡಾ. ಪ್ರವೀಣ ರಾ. ಶಹಾಪುರ ಸಂತಸ ವ್ಯಕ್ತಪಡಿಸಿದ್ದಾರೆ.
ಆ್ಯಂಬ್ಯೂಲನ್ಸ್ ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಸಿಬ್ಬಂದಿ
ವಿಜಯಪುರ: ಮಹಿಳೆಯೊಬ್ಬಳು ಆಸ್ಪತ್ರೆಗೆ ಸಾಗಿಸುವಾಗ ಆ್ಯಂಬ್ಯೂಲನ್ಸ್ ನಲ್ಲಿಯೇ ಗಂಡು ಮುಗವಿಗೆ ಜನ್ಮ ನೀಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಬಳಿ ಪಟ್ಟಣದ ಬಳಿ ನಡೆದಿದೆ. ಮುದ್ದೇಬಿಹಾಳ ತಾಲೂಕಿನ ಬೈಲಕೂರ ಗ್ರಾಮದ ಭುವನೇಶ್ವರಿ ಬಸವರಾಜ ಛಲವಾದಿ(23) ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ಆಕೆಯನ್ನು ನಾಲವತವಾಡದ 108 ಆ್ಯಂಬ್ಯೂಲನ್ಸ್ ನಲ್ಲಿ ಸಮೀಪದ ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋ್ಗಲಾತುತ್ತಿತ್ತು. ಆದರೆ, ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಆ್ಯಂಬ್ಯೂಲನ್ಸ್ ನಲ್ಲಿದ್ದ ಸಿಬ್ಬಂದಿಯಾದ ಸ್ಟಾಫ್ ನರ್ಸ್ ಶರಣು ನಾವಿ […]
ಮೈಸೂರು ಜಿಲ್ಲೆಯ ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ಭೇಟಿ ನೀಡಿದ ಶಾಸಕ ಯತ್ನಾಳ
ಮೈಸೂರು: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದರು. 12ನೇ ಶತಮಾನದಲ್ಲಿ ಕಾಯಕ, ದಾಸೋಹ ತತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 18ನೇ ಶತಮಾನಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀ ಗುರುಮಲ್ಲೇಶ್ವರರ ಕಾಲದಲ್ಲಿ.ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ವವು ಶ್ರೀ ಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು ಎಂಬ ಪ್ರತೀತಿ […]