ವಿಜಯಪುರ: ಮಹಿಳೆಯೊಬ್ಬಳು ಆಸ್ಪತ್ರೆಗೆ ಸಾಗಿಸುವಾಗ ಆ್ಯಂಬ್ಯೂಲನ್ಸ್ ನಲ್ಲಿಯೇ ಗಂಡು ಮುಗವಿಗೆ ಜನ್ಮ ನೀಡಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಬಳಿ ಪಟ್ಟಣದ ಬಳಿ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಬೈಲಕೂರ ಗ್ರಾಮದ ಭುವನೇಶ್ವರಿ ಬಸವರಾಜ ಛಲವಾದಿ(23) ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ಆಕೆಯನ್ನು ನಾಲವತವಾಡದ 108 ಆ್ಯಂಬ್ಯೂಲನ್ಸ್ ನಲ್ಲಿ ಸಮೀಪದ ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋ್ಗಲಾತುತ್ತಿತ್ತು. ಆದರೆ, ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಆ್ಯಂಬ್ಯೂಲನ್ಸ್ ನಲ್ಲಿದ್ದ ಸಿಬ್ಬಂದಿಯಾದ ಸ್ಟಾಫ್ ನರ್ಸ್ ಶರಣು ನಾವಿ ಮತ್ತು ಅನ್ವರ್ ಹುಸೇನ್ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಈ ಮಹಿಳೆಗೆ ಎರಡನೇ ಹೆರಿಗೆ ಇದಾಗಿದ್ದು, ಹೆರಿಗೆಯ ಬಳಿಕ ಆರೋಗ್ಯದಿಂದಿರುವ ತಾಯಿ ಮತ್ತು ಮಗುವನ್ನು ಆ್ಯಂಬ್ಯೂಲನ್ಸ್ ಸಿಬ್ಬಂದಿ ನಂತರ ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.
108 ಆ್ಯಂಬ್ಯೂಲನ್ಸ್ ಸಿಬ್ಬಂದಿಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.