ಭಾರತ ಗ್ಯಾಸ್ ವತಿಯಿಂದ ವಿಜಯಪುರದಲ್ಲಿ ಸ್ವಚ್ಛ ಭಾರತ ಸಪ್ತಾಹ ಆಚರಣೆ
ವಿಜಯಪುರ: ಭಾರತ ಗ್ಯಾಸ್ ವತಿಯಿಂದ ವಿಜಯಪುರ ನಗರದಲ್ಲಿ ಸ್ವಚ್ಛ ಭಾರತ ಸಪ್ತಾಹ ಆಚರಿಸಲಾಯಿತು. ಸಪ್ತಾಹದ ಅಂಗವಾಗಿ ಸ್ವಚ್ಚ ಭಾರತ ಅಭಿಯಾನ ನಡೆಯಿತು. ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಜಾಥಾ ಗಾಂಧಿಚೌಕ್ ವರೆಗೆ ನಡೆಯಿತು. ಧಾರವಾಡ ಭಾರತ ಗ್ಯಾಸ್ ಟೆರಿಟರಿ ಮುಖ್ಯಸ್ಥ ದೀಪಕ್ ಅಗರವಾಲ ಮತ್ತು ಮಾರಾಟ ಅಧಿಕಾರಿ ಶಾಶ್ವತ ಶರ್ಮಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಡೆಲಿವರಿ ಬಾಯ್ ಗಳ ಸಭೆ ಕೂಡ ನಡೆಸಲಾಯಿತು. ಈ ಸಂಧರ್ಭದಲ್ಲಿ ವಿಜಯಪುರ ಜಿಲ್ಲೆಯ ವಿತರಕರದ ಉಮೇಶ […]
ಜು. 10 ಶನಿವಾರದಿಂದ ಸಾರಿಗೆ ಸಿಬ್ಬಂದಿ ವೇತನ ಬಿಡುಗಡೆ-ಡಿಸಿಎಂ ಲಕ್ಷ್ಮಣ ಸವದಿ
ವಿಜಯಪುರ: ಜು. 10 ರಿಂದ ಸಾರಿಗೆ ಇಲಾಖೆಯ ಎಲ್ಲ ಸಿಬ್ಬಂದಿಯ ಸಂಬಳ ಕೊಡಲಾಗುವುದು. ಎರಡು ಹಂತದಲ್ಲಿ ಸಂಬಳ ಹಾಕುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಸಮಯದಲ್ಲಿ ಸಾರಿಗೆ ಇಲಾಖೆಗೆ ಅತೀ ಹೆಚ್ಚು ತೊಂದರೆಯಾಗಿದೆ. ಸಂಬಳ ನೀಡಲು ಸಮಸ್ಯೆ ಇದೆ. ಈ ಮೊದಲು ಸಿಎಂ ರೂ. 2480 ಕೋ. ಕೊಟ್ಟಿದ್ದರು. ಈಗ ರೂ. 165 ಕೋ. ನೀಡಿದ್ದಾರೆ. ಜು. 10 ರಿಂದ ಎಲ್ಲರ ಸಂಬಳ ನೀಡಲಾಗುವುದು. ಎರಡು ಹಂತದಲ್ಲಿ ಸಂಬಳ […]
ಬೆಳಿಗ್ಗೆ ಬೇಡಿಕೆಯಿಟ್ಟ ಶಾಸಕ ಎಂ. ಬಿ. ಪಾಟೀಲ- ಸಂಜೆ ವೇಳೆಗೆ ತಥಾಸ್ತು ಎಂದು ಆದೇಶ ಹೊರಡಿಸಿದ ಸಿಎಂ
ಬೆಂಗಳೂರು: ಬೆಳಿಗ್ಗೆಯಷ್ಟೇ ತಮ್ಮನ್ನು ಭೇಟಿ ಮಾಡಿದ್ದ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಬೇಡಿಕೆಗೆ ಸಂಜೆ ವೇಳೆಗೆ ಸಿಎಂ ಬಿ. ಎಸ್. ಯಡಿಯೂರಪ್ಪ ತಥಾಸ್ತು ಎಂದು ಆದೇಶ ಹೊರಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಭಾಗದ 16 ಕೆರೆಗಳಿಗೆ ತಿಡಗುಂದಿ ಅಕ್ವಾಡಕ್ಟ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಎಂ. ಬಿ. ಪಾಟೀಲ ಅವರು ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಬಬಲೇಶ್ಬರ […]
ಸಿಎಂ ಭೇಟಿ ಮಾಡಿದ ಶಾಸಕ ಎಂ. ಬಿ. ಪಾಟೀಲ- ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸಲು ಅನುದಾನಕ್ಕೆ ಮನವಿ
ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 16 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುದಾನ ಒದಗಿಸುವಂತೆ ಆಗ್ರಹಿಸಿ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿನಂತಿ ಮಾಡಿದರು. ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಯಡಿಯೂರಪ್ಪ ಅ ರನ್ನು ಭೇಟಿ ಮಾಡಿ ಚರ್ಚಿಸಿದ ಎಂ. ಬಿ. ಪಾಟೀಲ ಅವರು, ಭೀಮಾನದಿ ಪಾತ್ರದಲ್ಲಿ ನೀರಿನ ಕೊರತೆಯ ಕಾರಣ ಇಂಡಿ ಭಾಗದ ಕೆಲವು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿಲ್ಲ. […]