ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಸ್ಪುಟ್ನಿಕ್ ಲಸಿಕೆ ಜು. 12 ಸೋಮವಾರದಿಂದ ಲಭ್ಯವಿದೆ ಎಂದು ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸ್ಪುಟ್ನಿಕ್ ಲಸಿಕೆ ಕೊರೊನಾ ಸೋಂಕನ್ನು ಶೇ.92 ರಷ್ಟು ತಡೆಗಟ್ಟುವ ದಕ್ಷತೆಯನ್ನು ಹೊಂದಿದೆ. ಈ ಲಸಿಕೆಯನ್ನು ಸಾರ್ವಜನಿಕರಿಗೆ ಬಿ ಎಲ್ ಡಿ ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಪ್ರತಿದಿನ ಬೆ.9 ರಿಂದ ಸಂ.5 ಗಂಟೆಯವರೆಗೆ ನೀಡಲಾಗುವುದು. ಮೊದಲ ಲಸಿಕೆ ಪಡೆದ 21 ದಿನಗಳಲ್ಲಿಯೇ ಎರಡನೇ ಲಸಿಕೆಯನ್ನು ನೀಡಲಾಗುತ್ತದೆ. ಪ್ರತಿ ಡೋಸ್‍ಗೆ ಸರಕಾರ ನಿಗದಿ ಪಡಿಸಿರುವ ರೂ. 1145 ನಿಗದಿ ಪಡಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಪ್ರವೀಣ ಗಂಗನಹಳ್ಳಿ-9901317974, ಡಾ. ಎಂ. ಆರ್. ಗುಡದಿನ್ನಿ-9448210760 ಹಾಗೂ ವೀರಣ್ಣ-9880390666 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.