ವಿಜಯಪುರ: ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ಧಾಳಿಯಲ್ಲಿ ಹುತಾತ್ಮನಾದ ವೀರಯೋಧ ಕಾಶೀರಾಯ ಬೊಮ್ಮನಹಳ್ಳಿ ನಿವಾಸಕ್ಕೆ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿದರು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಯೋಧ ಕಾಶೀರಾಯ ಬೊಮ್ಮನಹಳ್ಳಿ ಜು. 2 ರಂದು ಭಯೋತ್ಪಾದಕತ ಧಾಳಿಯಲ್ಲಿ ಹುತಾತ್ಮರಾಗಿದ್ದರು. ಇಂದು ವೀರಯೋಧನ ನಿವಾಸಕ್ಕೆ ಭೇಟಿ ನೀಡಿದ ಸುನೀಲಗೌಡ ಪಾಟೀಲ ಯೋದನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಹುತಾತ್ಮ ಯೋಧನ ಪತ್ನಿ ಸಂಗೀತಾ ಅವರಿಗೆ ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ ನೀಡುತ್ತೇನೆ. ಅಲ್ಲದೇ, ಯೋಧನ ಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡುವುದಾಗಿ ಸುನೀಲಗೌಡ ಪಾಟೀಲ ಭರವಸೆ ನೀಡಿದರು.
ವೀರಯೋಧ ಕಾಶೀರಾಯ ಬೊಮ್ಮನಹಳ್ಳಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಹುತಾತ್ಮ ಯೋಧನ ಬಗ್ಗೆ ನಮಗೆಲ್ಲ ಹೆಮ್ಮೆಯಿದೆ. ವೀರಯೋಧನ ಕುಟುಂಬದ ಜೊತೆ ನಾವಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಸುನೀಲಗೌಡ ಪಾಟೀಲ ಉಕ್ಕಲಿಯಲ್ಲಿರುವ ಹುತಾತ್ಮ ಯೋಧನ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಣ್ಣಾಸಾಹೇಬಗೌಡ ಪಾಟೀಲ, ಪಂಡಿತ ಓಜಿ, ಬಾಳಾಸಾಹೇಬ ಗೌಡ ಬಿರಾದಾರ, ಮುದುಕು ಸಿಂದಗಿ ಹಾಗೂ ಊರಿನ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಯೋಧ ಕಾಶೀರಾಯವಿಜಯಪುರ ಬೊಮ್ಮನಹಳ್ಳಿ ಜು. 2 ರಂದು ಭಯೋತ್ಪಾದಕತ ಧಾಳಿಯಲ್ಲಿ ಹುತಾತ್ಮರಾಗಿದ್ದರು. ಇಂದು ವೀರಯೋಧನ ನಿವಾಸಕ್ಕೆ ಭೇಟಿ ನೀಡಿದ ಸುನೀಲಗೌಡ ಪಾಟೀಲ ಯೋದನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.