ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 14.33 ಕೋ. ಕ್ರಿಯಾ ಯೋಜನೆಗೆ ಸರಕಾರ ಒಪ್ಪಿಗೆ- ಸಚಿವ ಬೊಮ್ಮಾಯಿ
ಬೆಂಗಳೂರು: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ರೂ. 14. 33 ಕೋ. ವೆಚ್ಚದ ಕ್ರಿಯಾ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ. ಬೆಂಗಳೂರಿನಲ್ಲಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಯಿತು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 2021- 22 ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಕಾಗಿನೆಲೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರ, ವಸ್ತುಸಂಗ್ರಹಾಲಯದ ಮುಂದುವರಿದ […]
ವಿಜಯಪುರ ಆಯುಷ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಹಾರ್ಟ್ ಕೇರ್ ಸೆಂಟರ್ ಆರಂಭ
ವಿಜಯಪುರ: ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯಲ್ಲಿ ಈಗ ಪ್ರತ್ಯೇಕವಾಗಿ ಹಾರ್ಟ್ ಕೇರ್ ಸೆಂಟರ್ ಆರಂಭವಾಗಿದೆ. ಈ ವಿಭಾಗವನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಶ್ರೀ ಸಂಗನಬಸವ ಸ್ವಾಮೀಜಿ ಮತ್ತು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಗನ ಬಸವ ಶ್ರೀಗಳು ಮತ್ತು ಶಾಸಕ ಶಿವಾನಂದ ಪಾಟೀಲ ಆಯುಷ್ ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದರು. ಅಲ್ಲದೇ, ಇಲ್ಲಿನ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಪ್ರಶಂಶಿಸಿದರು. ಈ ಆಸ್ಪತ್ರೆಯಿಂದ ರೋಗಿಗಳಿಗೆ ಮತ್ತಷ್ಟು ಗುಣಮಟ್ಟದ […]
ಗತವೈಭವಕ್ಕೆ ಮರಳಿದ ಹೊಳೆ ಬಬಲಾದಿ ಭಕ್ತರ ಭಕ್ತಿಯ ಪರಾಕಾಷ್ಠೆ- ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಭಕ್ತಸಾಗರ
ವಿಜಯಪುರ: ಇದು ಭಕ್ತರ ಪರಾಕಾಷ್ಠೆಗೆ ಸಾಕ್ಷಿಯಾಗಿರುವ ಘಟನೆ. ಸ್ವತಃ ಈ ಮಠದ ಮಠಾಧೀಶರ ಮನವಿಗೂ ಭಕ್ತರು ಸ್ಪಂದಿಸುತ್ತಿಲ್ಲ. ಅದರಲ್ಲೂ ಸೋಮವಾರ ಬೇರೆ. ಸದಾಶವಿ ಮುತ್ಯಾನ ವಾರ ಎಂಬ ಕಾರಣದಿಂದ ಎಲ್ಲಿ ನೋಡಿದರೂ ಜನರೋ ಜನ. ಇಲ್ಲಿ ನೋಡಿದರೆ ಇವರಾರಿಗೂ ಕೊರೊನಾ ಭಯ ಕೂಡ ಇಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಕೂಡ ಧರಿಸಿಲ್ಲ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಮಠಕ್ಕೆ ದೇವರ ದರ್ಶನಕ್ಕೆ ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ. ಲಾಕಡೌನ್ […]
ಕಾಲಘಟಕ್ಕೆ ತಕ್ಕಂತೆ ಆರೋಗ್ಯಪೂರ್ಣ ಸ್ಪರ್ಧೆಯ ಮೂಲಕ ಶೈಕ್ಷಣಿಕ ಸಂಸ್ಥೆಗಳನ್ನು ಬೆಳೆಸಬೇಕು- ಎಂ. ಬಿ. ಪಾಟೀಲ
ವಿಜಯಪುರ: ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಆರೋಗ್ಯ ಪೂರ್ಣ ಸ್ಪರ್ಧೆಯ ಮೂಲಕ ಶೈಕ್ಷಣಿಕ ಸಂಸ್ಥೆಗಳನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಕರೆ ನೀಡಿದ್ದಾರೆ. ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ನೂತನ ಉಪಕುಲಪತಿಗಳಾಗಿ ಡಾ. ಆರ್. ಎಸ್. ಮುಧೋಳ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಕಾಯಿಲೆ ಎರಡನೇ ಅಲೆ ಸಂದರ್ಭದಲ್ಲಿ ಬಿ ಎಲ್ ಡಿ […]
ದೇಶದಲ್ಲಿಯೇ ಮೊದಲು: ರಾಜ್ಯದಲ್ಲಿ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆ ಸೃಷ್ಟಿ- ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು: ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಈ ಕುರಿತು ನೀಡಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ನಾಳೆ ಜು. 13ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೃತ್ಯ ಸ್ಥಳ […]
ಇಂಡಿಯಲ್ಲಿ ಪುರಸಭೆ ಕಾರ್ಯಾಲಯ, ಮೆಗಾ ಮಾರ್ಕೆಟ್ ನಿರ್ಮಾಣಕ್ಕೆ ಶಂಕುಸ್ಥಾಪನೆ
ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪುರಸಭೆ ಕಾರ್ಯಾಲಯ ಮತ್ತು ಮೆಗಾ ಮಾರ್ಟ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಕಾಮಗಾರಿಗೆ ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಮತ್ತು ಚಮಕೇರಿ ಸದಾಶಿವ ಮಠಾಧೀಶ ಶಿವಯ್ಯ ಮಹಾಸ್ವಾಮಿಗಳು ಹಾಗೂ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ಸೇರಿದಂತೆ ನಾನಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಶ್ರೀ ಸಾಯಿ ಸೇವಾ ಸಮಿತಿಯಿಂದ ಸಿಇಟಿ, ನಿಟ್ ವಿದ್ಯಾರ್ಥಿಗಳಿಗಾಗಿ ಜು.15 ರಿಂದ ಐದು ದಿನ ಉಚಿತ ಆನಲೈನ್ ವರ್ಕಶಾಪ್
ವಿಜಯಪುರ: ವಿಜಯಪುರದ ಶ್ರೀ ಸಾಯಿ ಸೇವಾ ಸಮಿತಿಯಿಂದ ಸಿಇಟಿ ಮತ್ತು ನೀಟ್ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಆನಲೈನ್ ವರ್ಕಶಾಪ್ ಆಯೋಜಿಸಲಾಗಿದೆ. ಜು. 15 ರಿಂದ ಜು.19ರ ವರೆಗೆ ಐದು ದಿನಗಳ ಕಾಲ ಈ ಆನಲೈನ್ ವರ್ಕಶಾಪ್ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ ಝಳಕಿ- 9845352308 ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಸಾಯಿ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯ ಕಾಲೇಜು ಅಂಚೆ ಕಚೇರಿ ಈಗ ಬಿ ಎಲ್ ಡಿ ಇಎ ಕ್ಯಾಂಪಸ್ ಪೋಸ್ಟ್ ಆಫೀಸ್ ಆಗಿ ಮರು ನಾಮಕರಣ
ವಿಜಯಪುರ: ಅಂಚೆ ಕಚೇರಿ ಸಿಬ್ಬಂದಿ ಸೇವಾ ಮನೋಬಾವ ಹೆಚ್ಚಿಸಿಕೊಂಡು ಸಮಾಜ ಮುಖಿಯಾಗಿ ಸೇವೆ ಸಲ್ಲಿಸಬೇಕು ಎಂದು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಕರೆ ನೀಡಿದ್ದಾರೆ. ವಿಜಯಪುರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ವಿಜಯ ಕಾಲೇಜು ಅಂಚೆ ಕಚೇರಿ ಹೆಸರನ್ನು ಬಿ ಎಲ್ ಡಿ ಇ ಎ ಕ್ಯಾಂಒಸ್ ಪೋಸ್ಟ್ ಆಫೀಸ್ ಆಗಿ ಮರು ನಾಮಕರಣ ಮತ್ತು ಮೇಘದೂತ್ ಪೋಸ್ಟ್ […]