ಗತವೈಭವಕ್ಕೆ ಮರಳಿದ ಹೊಳೆ ಬಬಲಾದಿ ಭಕ್ತರ ಭಕ್ತಿಯ ಪರಾಕಾಷ್ಠೆ- ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಭಕ್ತಸಾಗರ

ವಿಜಯಪುರ: ಇದು ಭಕ್ತರ ಪರಾಕಾಷ್ಠೆಗೆ ಸಾಕ್ಷಿಯಾಗಿರುವ ಘಟನೆ. ಸ್ವತಃ ಈ ಮಠದ ಮಠಾಧೀಶರ ಮನವಿಗೂ ಭಕ್ತರು ಸ್ಪಂದಿಸುತ್ತಿಲ್ಲ.

ಅದರಲ್ಲೂ ಸೋಮವಾರ ಬೇರೆ. ಸದಾಶವಿ ಮುತ್ಯಾನ ವಾರ ಎಂಬ ಕಾರಣದಿಂದ ಎಲ್ಲಿ ನೋಡಿದರೂ ಜನರೋ ಜನ. ಇಲ್ಲಿ ನೋಡಿದರೆ ಇವರಾರಿಗೂ ಕೊರೊನಾ ಭಯ ಕೂಡ ಇಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಕೂಡ ಧರಿಸಿಲ್ಲ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಮಠಕ್ಕೆ ದೇವರ ದರ್ಶನಕ್ಕೆ ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ.

ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಾಧೀಶ ಶ್ರೀ ಸಿದ್ಧರಾಮಯ್ಯ ಹೊಳಿಮಠ

ಲಾಕಡೌನ್ ಸಂದರ್ಭದಲ್ಲಿ ಮನವಿ ಮಾಡಿದರೂ ಕೇಳದೆ ಮಠಕ್ಕೆ ಬಂದು ತಮ್ಮ ಭಕ್ತಿ ಮೆರೆದಿದ್ದ ಸದಾಶಿವ ಮುತ್ಯಾನ ಭಕ್ತರು ಇಂದು ಕೂಡ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಕ್ಕೆ ಆಗಮಿಸಿರುವ ಭಕ್ತಸಾಗರ

ಕೊರೊನಾ ಮತ್ತು ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಮಠದ ಕಾರ್ಣಿಕ ಶ್ರೀ ಸಿದ್ಧರಾಮಯ್ಯ ಹೊಳಿಮಠ ಮುತ್ಯಾ ಮಠಕ್ಕೆ ಹೆಚ್ಚು ಜನ ಬರಬಾರದು ಎಂದು ಮನವಿ ಮಾಡಿದರೂ ಕೇಳದ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುವ ಮೂಲಕ ಮತ್ತೆ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ.

ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಕ್ಕೆ ಆಗಮಿಸಿರುವ ಭಕ್ತಸಾಗರ

ವಿಜಯಪುರ ಜಿಲ್ಲೆಯಷ್ಟೇ ಅಲ್ಲ ರಾಜ್ಯದ ನಾನಾ ಜಿಲ್ಲೆಗಳಿಂದ ಮಠಕ್ಕೆ ಬಂದಿರುವ ಭಕ್ತರು ಅಂಬಲಿ ನೈವೇದ್ಯ ಅರ್ಪಿಸಿದ್ದಾರೆ. ಕೊರೊನಾ ನಿಯಂತ್ರಣವಾಗಲು ಐದು ಸೋಮವಾರಗಳ ಕಾಲ ಮನೆಯಲ್ಲಿ ಅಂಬಲಿ ನೈವ್ಯದೆ ಮಾಡಿ ಎಂದಿದ್ದ ಶ್ರೀಗಳ ಮಾತನ್ನು ಲಾಕಡೌನ್ ಸಂದರ್ಭದಲ್ಲಿ ಅಪಾರ್ಥ ಮಾಡಿಕೊಂಡಿದ್ದ ಭಕ್ತರು ಅಂದೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಈಗ ಸೋಮವಾರ ಹಿನ್ನೆಲೆಯಲ್ಲಿ ಅನಲಾಕ್ ನಂತರವೂ ಆದರೆ ಭಕ್ತರು ಮಾತ್ರ ಮಠಕ್ಕೆ ಆಗಮಿಸಿ ಅಂಬಲಿ ನೈವೇದ್ಯ ಅರ್ಪಣೆ ಮಾಡುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಕ್ಕೆ ಆಗಮಿಸಿರುವ ಭಕ್ತಸಾಗರ

ಈಗ ಮಠದ ಆವರಣಕ್ಕೆ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದು, ರವಿವಾರ ರಾತ್ರಿಯಿಂದ ಈವರೆಗೆ ಸುಮಾರು 40 ಸಾವಿರ ಜನರಿಂದ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಕೂಡ ಧರಿಸದಿರುವುದು ಕೂಡ ಜನರಲ್ಲಿ ಚರ್ಚೆಗೆ ಕಾರಣವಾಗಿದೆ. ಮಠದ ಶ್ರೀಗಳಾದ ಸಿದ್ದು ಮುತ್ಯಾ ಎಷ್ಟೇ ಮನವಿ ಮಾಡದರೂ ಕೇಳದ ಭಕ್ತರು ಮಾತ್ರ ಅತ್ತ ಲಕ್ಷ ಕೊಡದಿರುವುದು ವಿಪರ್ಯಾಸವಾಗಿದೆ. ಮಠದ ಆವರಣಕ್ಕೆ ಆಗಮಿಸುತ್ತಿರುವ ಭಕ್ತರು ಅಂಬಲಿ ಅರ್ಪಣೆ ಮಾಡುತ್ತಿದ್ದಾರೆ. ಬಬಲಾದಿ ಮಠದ ಭವಿಷ್ಯವಾಣಿ ಸುಳ್ಳಾದ ಉದಾಹರಣೆ ಇಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಇಲ್ಲಿನ ಕಾರ್ಣಿಕ ಸಿದ್ಧು ಮುತ್ಯಾ ಕೊರೊನಾ ಒಂದೂವರೆ ತಿಂಗಳಲ್ಲಿ ಕಡಿಮೆಯಾಗಲಿದೆ ಎಂದು ನುಡಿದಿದ್ದ ಭವಿಷ್ಯ ಈಗ ನಿಜವಾಗಿರುವ ಹಿನ್ನೆಲೆಯಲ್ಲಿ ಈಗ ಭಕ್ತರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಹೊಳೆ ಬಬಲಾದಿ ಸದಾಶಿವ ಮಠಕ್ಕೆ ಆಗಮಿಸಿರುವ ಭಕ್ತಸಾಗರ

ಬಬಲಾದಿ ಮಠದ ಪವಾಡಗಳಿಂದಾಗಿ ಇದನ್ನ ಬೆಂಕಿ‌ ಬಬಲಾದಿ ಎಂದು ಕರೆಯುವ ಭಕ್ತರು ಈಗ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅನಲಾಕ್ ಆಗಿರುವ ಹಿನ್ನೆಲೆಯಲ್ಲಿ ನಾನಾ ರೀತಿಯ ಹರಕೆಗಳನ್ನು ತೀರಿಸಲು ಈಗಲೂ ಆಗಮಿಸುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌