ವಿಜಯಪುರ ಆಯುಷ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಹಾರ್ಟ್ ಕೇರ್ ಸೆಂಟರ್ ಆರಂಭ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯಲ್ಲಿ ಈಗ ಪ್ರತ್ಯೇಕವಾಗಿ ಹಾರ್ಟ್ ಕೇರ್ ಸೆಂಟರ್ ಆರಂಭವಾಗಿದೆ.

ಈ ವಿಭಾಗವನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಶ್ರೀ ಸಂಗನಬಸವ ಸ್ವಾಮೀಜಿ ಮತ್ತು ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು.

ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯ ಹಾರ್ಟ್ ಕೇರ್ ಸೆಂಟರ್ ಹೈಟೆಕ್ ಆ್ಯಂಬ್ಲೂಲನ್ಸ್ ಉದ್ಘಾಟಿಸಿದ ಯರನಾಳ ಶ್ರೀಗಳು

ಈ ಸಂದರ್ಭದಲ್ಲಿ ಮಾತನಾಡಿದ ಸಂಗನ ಬಸವ ಶ್ರೀಗಳು ಮತ್ತು ಶಾಸಕ ಶಿವಾನಂದ ಪಾಟೀಲ ಆಯುಷ್ ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸಿದರು. ಅಲ್ಲದೇ, ಇಲ್ಲಿನ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಪ್ರಶಂಶಿಸಿದರು. ಈ ಆಸ್ಪತ್ರೆಯಿಂದ ರೋಗಿಗಳಿಗೆ ಮತ್ತಷ್ಟು ಗುಣಮಟ್ಟದ ಸೇವೆ ಸಿಗಲಿ ಎಂದು ಹಾರೈಸಿದರು.

ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯ ಹಾರ್ಟ್ ಕೇರ್ ಸೆಂಟರ್ ಒಳನೋಟ

ಈ ಹಾರ್ಟ್ ಕೇರ್ ಸೆಂಟರ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಥ್ ಲ್ಯಾಬ್, ಐಐಸಿಯು, ಹೈಟೆಕ್ ಆಂಬ್ಯೂಲನ್ಸ್(ಐಸಿಯು ಆನ್ ವ್ಹೀಲ್) ಮತ್ತು ಹೊಸ ಸ್ಟ್ರೆಚರ್ ವ್ಹೀಲ್ ಸೌಲಭ್ಯಗಳಿವೆ.

ಯರನಾಳ ಸಂಗನ ಬಸವ ಶ್ರೀಗಳ ಜೊತೆ ವಿಜಯಪುರದ ಪ್ರತಿಷ್ಠಿತ ಆಯುಷ್ ಆಸ್ಪತ್ರೆಯ ಡಾ. ನಿತೀನ ಅಗರವಾಲ ದಂಪತಿ

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಆಯುಷ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಿತೀನ ಅಗರವಾಲ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌