ಕೆಪಿಟಿಸಿಎಲ್ ಅಧಿಕಾರಿ ಸಿದ್ದನಗೌಡ ಮಲ್ಲಿಕಾರ್ಜುನ ಬಿರಾದಾರಗೆ ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ ಎಸಿಬಿ ಅಧಿಕಾರಿಗಳು

ವಿಜಯಪುರ: ಕೆಪಿಟಿಸಿಎಲ್ ಭ್ರಷ್ಟ ಅಧಿಕಾರಿ ನಿವಾಸದ ಮೇಲೆ ಧಾಳಿ ನಡೆಸುವ ಮೂಲಕ ಎಸಿಬಿ ಅಧಿಕಾರಿಗಳು ಅಧಿಕಾರಿಗೆ ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಾರೆ.

ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದು, ಕೆಪಿಟಿಟಿಎಲ್ ಭ್ರಷ್ಟ ಅಧಿಕಾರಿ ಸಿದ್ಧರಾಮ ಮಲ್ಲಿಕಾರ್ಜುನ ಬಿರಾದಾರ ಮತ್ತು ಸಂಬಂಧಿಕರಿಗೆ ಸೇರಿದ ಸೇರಿದ ಆರು ಕಡೆಗಳಲ್ಲಿ ಏಕಕಾಲಕ್ಕೆಎಸಿಬಿ ಧಾಳಿ ಮಾಡಿದ್ದಾರೆ. ಕೆಪಿಟಿಸಿಎಲ್ ಕಚೇರಿಯಲ್ಲಿ ಎಇಇ ಆಗಿರುವ ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಈಗ ಪ್ರಭಾರ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೂಡ ಆಗಿದ್ದಾರೆ‌.

ವಿಜಯಪುರ ನಗರದ ಸುಕೂನ್ ಲೇ ಔಟ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ. ಬೆಳಗಿನ ಜಾವದಿಂದಲೇ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಯ ಮನೆಯಲ್ಲಿರುವ ದಾಖಲೆಗಳ ತೀವ್ರ ತಪಾಸಣೆ ನಡೆಸಿದ್ದಾರೆ. ಅಲ್ಲದೇ, ಸಿದ್ಧರಾಮ ಮಲ್ಲಿಕಾರ್ಜುನ ಬಿರಾದಾರ ಅಳಿಯ ಅರ್ಜುನ ಬಿರಾದಾರ ಅವರ ಮನೆ, ಕೆಪಿಟಿಸಿಎಲ್ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ ಕಚೇರಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಕಚೇರಿ ಮತ್ತು ಭ್ರಷ್ಟ ಅಧಿಕಾರಿಯ ಸ್ವಗ್ರಾಮ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದಲ್ಲಿರುವ ಮನೆ ಮತ್ತು ಜೇವೂರ ಗ್ತ್ರಾಮದ ಬಳಿ‌ ಇರುವ ತೋಟದ ಮನೆಗಳ‌ ಮೇಲೂ ಆರು ತಂಡಗಳಲ್ಲಿ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.

ಬೆಳಗಾವಿ ಎಸಿಬಿ ಎಸ್ಪಿ ಬಿ. ಎಸ್. ನೇಮೆಗೌಡ ಮಾರ್ಗದರ್ಶನದಲ್ಲಿ ವಿಜಯಪುರ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್, ಬಾಗಲಕೋಟೆ ಎಸಿಬಿ ಡಿವೈಎಸ್ಪಿ ಸುರೇಶರೆಡ್ಡಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಎಸಿಬಿಯ 7 ಜನ ಸಿಪಿಐಗಳು, 30 ಜನ ಸಿಬ್ಬಂದಿ ಈ ಧಾಳಿಯಲ್ಲಿ ಭಾಗವಹಿಸಿದ್ದಾರೆ. ಎಸಿಬಿ ಎಸ್ಪಿ ಬಿ. ಎಸ್. ನೇಮೆಗೌಡ ಕೂಡ ಬೆಳಗಾವಿಯಿಂದ ವಿಜಯಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳು ಬಸವ ನಾಡು ವೆಬ್ ಸೈಟ್ ಗೆ ತಿಳಿಸಿವೆ‌.

Leave a Reply

ಹೊಸ ಪೋಸ್ಟ್‌