ವಿಜಯಪುರ: ಶೈಕ್ಷಣಿಕ ಬದುಕಿನ ಮೊದಲ ಪ್ರಮುಖ ಯುದ್ಧ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಗೆಲ್ಲಲು ತಾವೆಲ್ಲರೂ ಈಗಾಗಲೇ ಸನ್ನದ್ಧರಾಗಿದ್ದಿರಿ. ಜು. 19 ರಿಂದ 22 ರವರೆಗೆ ತಮ್ಮ ಪರೀಕ್ಷೆ ಅತ್ಯಂತ ಶಿಸ್ತುಬದ್ಧತೆ ಮತ್ತು ಕೊರೊನಾ ನಿಯಮಗಳನ್ನು ಅನುಸರಿಸಿ ಕಾಳಜಿ ಪೂರ್ವಕವಾಗಿ ಬರೆಯಬೇಕು ಎಂದು ವಿಧಾನ ಪರಿಷತ ಬಿಜೆಇ ಸದಸ್ಯ ಹನುಮಂತ ನಿರಾಣಿ ಅವರು ಹೇಳಿದ್ದಾರೆ
ವಿಜಯಪುರ ನಗರದ ಅಲ್ ಅಮಿನ್ ಆಸ್ಪತ್ರೆ ಬಳಿಬಿರುವ ಇರುವ, ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್)ಯಲ್ಲಿ ಎಸ್ ಎಸ್ ಎಲ್ ವಿದ್ಯಾರ್ಥಿಗಳಿಗೆ ನಿರಾಣಿ ಫೌಂಡೇಶನ್ ವತಿಯಿಂದ ನೀಡಲಾದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಹಸ್ತಾಂತರಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 188 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆದರದೆ ಧೈರ್ಯದಿಂದ ಎದುರಿಸಿ ವಿಜಯಶಾಲಿಗಳಾಗಿರಿ. ನಿಲ್ಲ ಗೆಲುವಿಗೆ ನಾವೆಲ್ಲರೂ ಬೆಂಬಲವಾಗಿದ್ದೇವೆ ಎಂದು ಅವರು ಹೇಳಿದರು.
ಈ ಪರೀಕ್ಷೆ ವಿಚಾರದಲ್ಲಿ ಶಿಕ್ಷಣ ಸಚಿವರಾದ ಸುರೇಶಕುಮಾರ ಅವರು ದೃಢ ನಿಲುವು ತಾಳಿದ್ದು ಸ್ವಾಗತಾರ್ಹ. ಹೈಕೋರ್ಟ್ ಇಡಿ ಇಲಾಖೆಯು ಅಧಿಕಾರಿಗಳು, ಪಾಲಕರು, ಸಂಘ-ಸಂಸ್ಥೆಗಳ ತಮ್ಮ ಬೆನ್ನೆಲುಬಿಗೆ ನಿಂತು ಈ ಕರೋನಾ ಮಹಾಮಾರಿಯ ಮಧ್ಯೆಯೂ ಈ ಪರೀಕ್ಷೆ ಎಂಬ ಯುದ್ದವನ್ನು ಗೆಲ್ಲುವ ಮಾದರಿಯ ಕ್ಷಣವನ್ನು ಕೂತುಹಲದಿಂದ ಗಮನಿಸುತ್ತಿದ್ದೆ. ಕರೋನಾ ಸಂದರ್ಭದಲ್ಲಿ ಪರೀಕ್ಷೆ ಬರೆಯದೇ ಪಾಸಾಗಿ ಜೀವನದುದ್ದಕ್ಕೂ ಸಂತ್ರಸ್ತರ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಳ್ಳದೆ ಕರೋನಾ ಎದುರಿಸಿ ಪರೀಕ್ಷೆ ಬರೆದು ವಾರಿಯರ್ಸ್ ಗಳಾಗಿ ತಲೆಯೆತ್ತಿ ನಡೆಯೋದು ಹೆಮ್ಮೆಲ್ಲಯವೆ? ಅಂಥ ಹೆಮ್ಮೆಯ ಸುಪುತ್ರರಾದ ತಮ್ಮ ಬೆಂಬಲಕ್ಕೆ ನಿಂತ ಅಧಿಕಾರಿಗಳು ಮತ್ತು ಪಾಲಕರಿಗೆ ಅಭಿನಂದನೆಗಳು ಎಂದು ಹನುಮಂತ ನಿರಾಣಿ ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಎನ್. ವಿ. ಹೊಸೂರ, ಅಧಿಕಾರಿಗಳಾದ ಎಸ್. ಪಿ. ಬಾಡಂಗಡಿ, ಎಸ್. ಜೆ. ಹಂಚಿನಾಳ, ರವೀಂದ್ರ ತುಂಗಳ, ಬಿಜೆಪಿ ಮುಖಂಡರಾದ ಭೀಮಾಶಂಕರ ಹದನೂರು, ಮಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಸುರೇಶ ಬಿರಾದಾರ, ರವಿ ಖಾನಾಪುರ, ವಿನಾಯಕ ದಹಿಂಡೆ, ಬಸವರಾಜ ಗೋಲಾಯಿ, ವಿಜಯ ಜೋಶಿ ಇತರರು ಉಪಸ್ಥಿತರಿದ್ದರು.