ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ ಗಡಿಯಲ್ಲಿ ಪ್ರವೇಶ- ಪ್ರಯಾಣಿಕರ ತಪಾಸಣೆ ಚುರುಕು

ವಿಜಯಪುರ: ಕೊರೊನಾ ಮೂರನೇ ಅಲೆ ಎಚ್ಚರಿಕೆ ಮತ್ತು ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮಹಾರಾಷ್ಟ್ರದ ಗಡಿ ರಸ್ತೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಶಿರಾಡೋಣ ರಾಜ್ಯ ಹೆದ್ದಾರಿ ಮತ್ತು ಸೋಲಾಪುರ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಧೂಳಖೇಡ ಬಳಿ ಜಿಲ್ಲಾಡಳಿತ ಚೆಕ್ ಪೋಸ್ಟ್ ಆರಂಭಿಸಿದೆ.

ಈ ರಸ್ತೆಗಳ ಮೂಲಕ ಆಗಮಿಸುವ ವಾಹನ ಸವಾರರ ಕೊರೊನಾ ವ್ಯಾಕ್ಸಿನೇಷನ್ ವಿಚಾರಣೆ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿ ರಾಜ್ಯದೊಳಗೆ ಪ್ರವೇಶ ನೀಡಲಾಗುತ್ತಿದೆ. ವಿಜಯುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆದೇಶ ಮತ್ತು ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ಈ ತಪಾಸಣೆ ನಡೆಸಲಾಗುತ್ತಿದೆ.

ವ್ಯಾಕ್ಸಿನೇಷನ್ ಪ್ರಮಾಣೊತ್ರ ಅಥವಾ ನಿಗದಿತ ಅವಧಿಯೊಳಗಿನ ಕೊರೊನಾ ನೆಗೆಟಿವ್ ಆರ್ ಟಿ ಪಿ ಸಿ ಆರ್ ವರದಿ ಇಲ್ಲದ ವಾಹನ ಸವಾರರನ್ನು ಕರ್ನಾಟಕ ಗಡಿ ಪ್ರವೇಶ ನಿರಕಾರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹ ದಾಕಲಾತಿ‌ ಇಲ್ಲದವರನ್ನು ಮಹಾರಾಷ್ಟ್ರಕ್ಕೆ ವಾಪಸ್ ಕಳುಹಿಸಲಾಗುತ್ತಿದೆ.

ಚಡಚಣ ತಹಸೀಲ್ದಾರ ಸುರೇಶ ಚವಲರ, ಸಿಪಿಐ ಸಾಹೇಬಗೌಡ ಬಿರಾದಾರ ಉಸ್ತುವಾರಿಯಲ್ಲಿ ಗಡಿ ಪ್ರವೇಶ ಮಾರ್ಗಗಳಲ್ಲಿ ಬಿಗೀ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.

Leave a Reply

ಹೊಸ ಪೋಸ್ಟ್‌