ಕಳೆದ 24 ಗಂಟೆಗಳಲ್ಲಿ ಬಸವ ನಾಡಿನಲ್ಲಿ ಸುರಿದ ಮಳೆ ಎಷ್ಟು? ಹವಾಮಾನ ಮುನ್ಸೂಚನೆ ಏನಿದೆ? ಇಲ್ಲಿದೆ ಮಾಹಿತಿ

ವಿಜಯಪುರ: ಶನಿವಾರದಿಂದ ಇಂದಿನವರೆಗೆ ಕಳೆದ 24 ಗಂಟೆಯವರೆಗೆ ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಬಸವನ ಬಾಗೇವಾಡಿ ತಾಲೂಕಿನಲ್ಲಿ ಅತ್ಯಧಿಕ 27.,73 ಮಿ. ಮಿ. ಮಳೆಯಾಗಿದ್ದರೆ, ದೇವರ ಹಿಪ್ಪರಗಿ ತಾಲೂಕಿನಲ್ಲಿ ಅತೀ ಕಡಿಮೆ ಅಂದರೆ 3.33 ಮಿ. ಮಿ. ಮಳೆ ದಾಖಲಾಗಿದೆ. ಚಡಚಣ ಪಟ್ಟಣದಲ್ಲಿ ಅತ್ಯಧಿಕ 61 ಮಿ. ಮಿ. ಮಳೆ ದಾಖಲಾಗಿದೆ.

ತಾಲೂಕು ಮತ್ತು ಪ್ರಮುಖ ಸ್ಥಳಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ

ವಿಜಯಪುರ ತಾಲೂಕು

ವಿಜಯಪುರ ನಗರ- 27.40 ಮಿ. ಮೀ., ಭೂತನಾಳ- 31.40 ಮಿ. ಮೀ., ಹಿಟ್ನಳ್ಳಿ- 17.80 ಮಿ. ಮೀ.

ಬಬಲೇಶ್ವರ ತಾಲೂಕು

ಬಬಲೇಶ್ವರ ಪಟ್ಟಣ- 5.60 ಮಿ. ಮೀ., ಕುಮಟಗಿ- 3.60 ಮಿ. ಮೀ.

ತಿಕೋಟಾ ತಾಲೂಕು

ತಿಕೋಟಾ- 13.30 ಮಿ. ಮೀ., ಕನ್ನೂರ- 9.20 ಮಿ. ಮೀ.

ಬಸವನ ಬಾಗೇವಾಡಿ ತಾಲೂಕು

ಬಸವನ ಬಾಗೇವಾಡಿ- 20.20 ಮಿ. ಮೀ., ಮನಗೂಳಿ- 35.20 ಮಿ. ಮೀ., ಹೂವಿನ ಹಿಪ್ಪರಗಿ- 27.80 ಮಿ. ಮೀ.

ನಿಡಗುಂದಿ ತಾಲೂಕು

ಆಲಮಟ್ಟಿ- 10 ಮಿ. ಮೀ., ಅರೆಶಂಕರ- 10 ಮಿ. ಮೀ.

ಕೊಲ್ಹಾರ ತಾಲೂಕು

ಮಟ್ಟಿಹಾಳ- 8.84 ಮಿ. ಮೀ.

ಮುದ್ದೇಬಿಹಾಳ ತಾಲೂಕು

ಮುದ್ದೇಬಿಹಾಳ- 10 ಮಿ. ಮೀ., ನಾಲತವಾಡ- 14.40 ಮಿ. ಮೀ.

ತಾಳಿಕೋಟೆ ತಾಲೂಕು

ಢವಳಗಿ- 15 ಮಿ. ಮೀ.

ಇಂಡಿ ತಾಲೂಕು

ಇಂಡಿ- 52.50 ಮಿ. ಮೀ., ನಾದ ಬಿ. ಕೆ. 2.20 ಮಿ. ಮೀ. ಹೊರ್ತಿ- 7.20 ಮಿ. ಮೀ.

ಚಡಚಣ ತಾಲೂಕು

ಚಡಚಣ 61 ಮಿ. ಮೀ., ಝಳಕಿ- 52 ಮಿ. ಮೀ.

ಸಿಂದಗಿ ತಾಲೂಕು

ಸಿಂದಗಿ- 26 ಮಿ. ಮೀ., ಆಲಮೇಲ- 10 ಮಿ. ಮೀ., ಸಾಸಾಬಾಳ- 4 ಮಿ. ಮೀ., ರಾಮನಳ್ಳಿ- 8.60 ಮಿ ಮೀ.

ದೇವರ ಹಿಪ್ಪರಗಿ ತಾಲೂಕು

ದೇವರ ಹಿಪ್ಪರಗಿ- 3 ಮಿ. ಮೀ., ಕೊಂಡಗೂಳಿ- 2 ಮಿ. ಮೀ., ಕಡ್ಲೇವಾಡ ಪಿಸಿಎಚ್- 5 ಮಿ. ಮೀ.

ವಿಜಯಪುರದಲ್ಲಿ ಸುರಿಯುತ್ತಿರುವ ಮಳೆ

ಹವಾಮಾನ ಇಲಾಖೆ ಮುನ್ಸೂಚನೆ

ವಿಜಯಪುರ ಜಿಲ್ಲೆಯ ನಾನಾ ಭಾಗಗಳಲ್ಲಿ ಇಂದು, ನಾಳೆ ಮತ್ತು ಜು. 21ರಂದು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು, ನಾಳೆ ಮತ್ತು ಜು. 21 ರಂದು ಮಂಗಳವಾರ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಹಲವು ಕಡೆಗಳಲ್ಲಿ 64.50 ಮಿ. ಮೀ. ಯಿಂದ ಹಿಡಿದು 115.50 ಮಿ. ಮೀ. ವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Leave a Reply

ಹೊಸ ಪೋಸ್ಟ್‌