ನಳೀನಕುಮಾರ ಕಟೀಲ ಅವರ ಆಡಿಯೋ ಲೀಕ್ ಪ್ರಕರಣದ ತನಿಖೆಯಾಗಬೇಕು- ಶಾಸಕ ಯತ್ನಾಳ ಆಗ್ರಹ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುನಾರ ಕಟೀಲ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಪ್ರಕರಣ ಕುರಿತು ತನಿಖೆಯಾಗಬೇಕು ಎಂದು ವಿಜಯಪುರ ನಗರ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮದವರ ಜೊತೆ ಅವರು, ನಳಿನಕುಮಾರ ಕಟೀಲ ಅವರು ಪಾಪ ವೈಕ್ತಿಕವಾಗಿ ಏನನ್ನೋ ಮಾತನಾಡಿದ್ದಾರೆ. ಅದು ಅವರ ಧ್ವನಿ ಹೌದೋ? ಅಲ್ಲವೋ ಗೊತ್ತಿಲ್ಲ. ಆಡಿಯೋದಲ್ಲಿರುವ ಧ್ವನಿ‌ ತಮ್ಮದಲ್ಲ ಎಂದು ನಳೀನಕುಮಾರ ಕಟೀಲ‌ ಅವರೇ ಸ್ಪಷ್ಟಪಡಿಸಿದ್ದಾರೆ ಈ ಬಗ್ಗೆ ತನಿಖೆ ಆಗಬೇಕು ಎಂದು ಯತ್ನಾಳ ಆಗ್ರಹಿಸಿದರು.

ಖಾಸಗಿಯಾಗಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಳ್ಳುವುದು ಅಪರಾಧ. ತಮ್ಮ ಆತ್ಮೀಯರ ಮುಂದೆ ಮಾತನಾಡಿರುತ್ತಾರೆ.‌‌ ವ್ಯಕ್ತಿಗತ ಗೌಪ್ಯತೆಗೆ ರಾಜ್ಯದಲ್ಲಿ ಭದ್ರತೆ ಎಲ್ಲಿದೆ? ರಾಜ್ಯದಲ್ಲಿ ಏನು ಬೇಕಾದುದು ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಸಿಬಿಯವರು ಏನ್ ಮಾಡುತ್ತಿದ್ದಾರೆ? ಸಿಸಿಬಿ ಅಧಿಕಾರಿಗಳು ಕೆಲಸವಿರದ ತನಿಖೆಗಳನ್ನೆಲ್ಲ ಮಾಡುತ್ತಿದ್ದಾರೆ. ಡ್ರಗ್ಸ್ ಕೇಸ್, ಯುವರಾಜ ಕೇಸ್ ಗಳನ್ನು ಅರ್ಧಕ್ಕೆ ಬಿಟ್ಟಿದ್ದಾರೆ‌. ವಿಜಯೇಂದ್ರ ಅವರಿಗೆ ಆಪ್ತರಿರುವವರು ಸಿಸಿಬಿಯಲ್ಲಿದ್ದಾರೆ. ಕಣ್ಣು ತೆರೆದು ನೋಡಲಿ. ಸಿಸಿಬಿಯಲ್ಲಿರುವ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ ಅವರು ಎಂದು ಯತ್ನಾಳ ಹೇಳಿದರು.

ಜು. 26ಕ್ಕೆ ಶಾಸಕಾಂಗ ಸಭೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತಮಗೆ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ‌ಶಾಸಕಾಂಗ ಪಕ್ಷದ ಸಭೆ ಕರೆದರೆ ನಾನು ಹೋಗುತ್ತೇನೆ. ಶಾಸಕಾಂಗ ಪಕ್ಷದ ಸಭೆ ಕರೆದಾಗ ಹೋಗಲೇ ಬೇಕಾಗುತ್ತದೆ. ಇದನ್ನು ನಾವು ಉಪಯೋಗ ಮಾಡಿಕೊಂಡೇ ಮಾಡಿಕೊಳ್ತೀನಿ. ನಾವು ಏನ್ ಹೇಳಬೇಕು ಅದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳುತ್ತೇವೆ ಎಂದು ಯತ್ನಾಳ ಇದೇ ಸಂದರ್ಭದಲ್ಲಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌