ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ರವಿವಾರವೂ ಉತ್ತಮ ಮಳೆ ಸುರಿದಿದೆ.
ಹಿಟ್ನಳ್ಳಿಯಲ್ಲಿ ಅತ್ಯಧಿಕ 71 ಮಿ. ಮೀ. ಮಳೆ ದಾಖಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ರವಿವಾರದಿಂದ ಇಂದಿನವರೆಗೆ ಕಳೆದ 24 ಗಂಟೆಯವರೆಗೆ ಅಲ್ಲಲ್ಲಿ ಉತ್ತಮ ಮಳೆಯಾಗಿದೆ.
ತಾಲೂಕು ಮತ್ತು ಪ್ರಮುಖ ಸ್ಥಳಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ
ವಿಜಯಪುರ ತಾಲೂಕು
ವಿಜಯಪುರ ನಗರ- 11.40 ಮಿ. ಮೀ., ನಾಗಠಾಣ- 9.10 ಮಿ. ಮೀ., ಭೂತನಾಳ- 21.80 ಮಿ. ಮೀ., ಹಿಟ್ನಳ್ಳಿ- 71 ಮಿ. ಮೀ.
ಬಬಲೇಶ್ವರ ತಾಲೂಕು
ಮಮದಾಪುರ- 31.60 ಮಿ. ಮೀ., ಬಬಲೇಶ್ವರ- 26.80 ಮಿ. ಮೀ., ಕುಮಟಗಿ- 4.20 ಮಿ. ಮೀ.
ತಿಕೋಟಾ ತಾಲೂಕು
ತಿಕೋಟಾ-18.30 ಮಿ. ಮೀ.
ಬಸವನ ಬಾಗೇವಾಡಿ ತಾಲೂಕು
ಬಸವನ ಬಾಗೇವಾಡಿ- 27.30 ಮಿ. ಮೀ., ಮನಗೂಳಿ- 40 ಮಿ. ಮೀ., ಹೂವಿನ ಹಿಪ್ಪರಗಿ- 69.40 ಮಿ. ಮೀ.
ನಿಡಗುಂದಿ ತಾಲೂಕು
ಆಲಮಟ್ಟಿ- 19 ಮಿ. ಮೀ., ಅರೆಶಂಕರ- 20 ಮಿ. ಮೀ.
ಕೊಲ್ಹಾರ ತಾಲೂಕು
ಮಟ್ಟಿಹಾಳ- 37 ಮಿ. ಮೀ.
ಮುದ್ದೇಬಿಹಾಳ ತಾಲೂಕು
ಮುದ್ದೇಬಿಹಾಳ- 8 ಮಿ. ಮೀ., ನಾಲತವಾಡ- 25.04 ಮಿ. ಮೀ.
ತಾಳಿಕೋಟೆ ತಾಲೂಕು
ತಾಳಿಕೋಟೆ- 39.30 ಮಿ. ಮೀ, ಢವಳಗಿ- 15 ಮಿ. ಮೀ.
ಇಂಡಿ ತಾಲೂಕು
ಇಂಡಿ- 1.50 ಮಿ. ಮೀ., ನಾದ ಬಿ. ಕೆ. 4.40 ಮಿ.,
ಅಗರಖೇಡ- 14.10 ಮೀ. ಹೊರ್ತಿ- 1.80 ಮಿ. ಮೀ.
ಚಡಚಣ ತಾಲೂಕು
ಚಡಚಣ 7.50 ಮಿ. ಮೀ., ಝಳಕಿ- 0.30 ಮಿ. ಮೀ.
ಸಿಂದಗಿ ತಾಲೂಕು
ಸಿಂದಗಿ- 8 ಮಿ. ಮೀ., ಆಲಮೇಲ- 3 ಮಿ. ಮೀ., ಸಾಸಾಬಾಳ- 2.20 ಮಿ. ಮೀ., ರಾಮನಳ್ಳಿ- 6.20 ಮಿ ಮೀ.
ದೇವರ ಹಿಪ್ಪರಗಿ ತಾಲೂಕು
ದೇವರ ಹಿಪ್ಪರಗಿ- 7.80 ಮಿ. ಮೀ., ಕೊಂಡಗೂಳಿ- 12 ಮಿ. ಮೀ.
ಹವಾಮಾನ ಇಲಾಖೆ ಮುನ್ಸೂಚನೆ
ವಿಜಯಪುರ ಜಿಲ್ಲೆಯ ನಾನಾ ಭಾಗಗಳಲ್ಲಿ ಇಂದು ಮತ್ತು ನಾಳೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು, ನಾಳೆ ಮತ್ತು ಜು. 21 ರಂದು ಮಂಗಳವಾರ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಹಲವು ಕಡೆಗಳಲ್ಲಿ 64.50 ಮಿ. ಮೀ. ಯಿಂದ ಹಿಡಿದು 115.50 ಮಿ. ಮೀ. ವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.