ಬಸವ ನಾಡಿನ ಗಾನಯೋಗಿ ಸಂಘದ ಯುವಕರ ಕಾಯಕ ಇತರರಿಗೂ ಪ್ರೇರಕ

ವಿಜಯಪುರ: ಮನಸ್ಸಿದ್ದರೆ ಮಾರ್ಗ. ಯುವಕರು ಕೈ ಜೋಡಿಸಿದರೆ ಎಷ್ಟೋಂದು ಸುಂದರವಾಗಿರುತ್ತೆ ಎಂಬುದಕ್ಕೆ ಪೂರಕ ಈ ಪ್ರಸಂಗ.

ಅದು ಯಾರೂ ಊಹಿಸದ ಕಾರ್ಯ. ಅದರ ಅಕ್ಕಪಕ್ಕದಲ್ಲಿಯೇ ವಾಸಿಸುತ್ತರೂ ಜನ ಮಾತ್ರ ಕ್ಯಾರೆ ಎನ್ನುತ್ತಿರಲ್ಲಿ. ಕಸದಿಂದ ರಸ ಎಂಬ ಮಾತಿನಂತೆ ಗಲೀಜಾಗಿದ್ದ ಈ ಪ್ರದೇಶ ಈಗ ಸ್ವಚ್ಛ ಸುಂದರ ಪರಿಸರಕ್ಕೆ ಮಾದರಿಯಾಗಿದೆ.

ಸ್ವಚ್ಝಗೊಳಿಸುವ ಮುಂಚೆ ಭಾವಿಯ ದೃಶ್ಯ

ಅಷ್ಟಕ್ಕೂ ಆಗಿದ್ದೇನೆಂದರೆ, ಬಸವ ನಾಡು ವಿಜಯಪುರ ನಗರದ ಗೌರಿ ಗಣೇಶ ಬಡಾವಣೆಯಲ್ಲೊಂದು ಪ್ರಾಚೀನ ಭಾವಿಯಿತ್ತು. ಆದರೆ, ಸುತ್ತಮುತ್ತಲಿನ ಜನರಿಗೆ ಅದರ ಬಗ್ಗೆ ಕಾಳಜಿಯೇ ಇರಲಿಲ್ಲ. ನಾನಾ ಇಲಾಖೆಗಳು ಈ ಭಾವಿಗೆ ಸಿಮೆಂಟ್ ನಿಂದ ತಡೆಗೋಡೆ ನಿರ್ಮಿಸಿದ್ದರೂ ಅದರ ಬಗ್ಗೆ ನಿಷ್ಕಾಳಜಿ ವಹಿಸಿದ್ದ ಬಡಾವಣೆ ನಿವಾಸಿಗಳು ಅದರಲ್ಲಿ ಕಸಕಡ್ಡಿಗಳನ್ನು ಎಸೆಯುವ ಮೂಲಕ ಪಾಚಿಗಳು ಬೆಳೆದು ಇಡೀ ಭಾವಿಯ ವಾತಾವರಣ ಗಬ್ಬೆದ್ದು ನಾರುವಂತೆ ಮಾಡಿದ್ದರು. ಭಾವಿಯ ನೀರೆಲ್ಲ ಹಸಿರು ಬಣ್ಣಕ್ಕೆ ತಿರುಗಿ ನೋಡಲು ಅಸಹ್ಯ ಅನಿಸುತ್ತಿತ್ತು.

ಗಾನಯೋಗಿ ಸಂಘದ ಯುವಕರು ಪ್ರಾಚೀನ ಭಾವಿಯನ್ನು ಸ್ವಚ್ಛಗೊಳಿಸುತ್ತಿರುವುದು

ಒಂದು ದಿನ ಈ ಭಾವಿಯನ್ನು ಗಮನಿಸಿದ ಹತ್ತು ಜನ ಯುವಕರ ತಂದ ಇದಕ್ಕೊಂದು ಕಾಯಕಲ್ಪ ನೀಡಲು ನಿರ್ಧರಿಸಿ ಅದರಲ್ಲಿ ಯಶಸ್ವಿಯಾಗಿದೆ. ವಿಜಯಪುರ ಮಹಾನಗರದ ದರ್ಗಾ ಪ್ರದೇಶದಲ್ಲಿ ಬರುವ ಗೌರಿ ಗಣೇಶ ನಗರದಲ್ಲಿರುವ ಈ ಭಾವಿಗೆ ಹೊಸ ಸ್ಪರ್ಷ ನೀಡಲು ಮುಂದಾದ ಇಲ್ಲಿನ ಗಾನಯೋಗಿ ಸಂಘದ 10 ಜನ ಯುವಕರು ಕೈಗೆ ಗ್ಲೌಸ್, ಕೈಯ್ಯಲ್ಲಿ ಬಡಿಗೆ, ಬಿದಿರು ಸೇರಿದಂತೆ ಭಾವಿ ಸ್ವಚ್ಛತೆಗೆ ಬೇಕಾದ ಸಲಕರಣೆಗಳನ್ನು ತಂದು ಸ್ವಚ್ಛಗೊಳಿಸಿ ಸುಂದರವಾಗಿದ್ದಾರೆ.

ಪ್ರಾಚೀನ ಭಾವಿಯನ್ನು ಸ್ವಚ್ಛಗೊಳಿಸಿದ ಗಾನಯೋಗಿ ಸಂಘದ ಯುವಕರು

ಸತತ ಎರಡು ದಿನಗಳ ಕಾರ್ಯಾಚರಣೆ ನಡೆಸಿ ಮೂರು ಟ್ರ್ಯಾಕ್ಟರ್ ಗಳಲ್ಲಿ ತುಂಬಬಹುದಾದ ತ್ಯಾಜ್ಯ ವಸ್ತುಗಳನ್ನು ಹೊರಗೆ ತೆಗೆದಿದ್ದಾರೆ. ಬಡಾವಣೆಯ ಜನರೂ ನಾಚಿಕೆ ಪಟ್ಟುಕೊಳ್ಳುವಂತ ಕಾಯಕ ಮಾಡುವ ಮೂಲಕ ಗಾನಯೋಗಿ ಸಂಘದ ಯುವಕರು ಈ ಭಾವಿಗೊಂದು ಸುಂದರ ರೂಪ ನೀಡಿದ್ದಾರೆ.

ಪ್ರಾಚೀನ ಭಾವಿಯ ಈಗಿನ ದೃಶ್ಯ

ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗಾನಯೋಗಿ ಸಂಘದ ಪ್ರಕಾಶ ಆರ್. ಕೆ. ಮತ್ತು ಸಂತೋಷ ಎಂ. ಚವ್ಹಾಣ ತಾವು ಕೈಗೊಂಡ ಕಾರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಭಾವಿಯಲ್ಲಿನ ನೀರು ಈಗ ಸ್ವಚ್ಥವಾಗಿದ್ದು, ಇದನ್ನು ಕಾಳಜಿಯಿಂದ ಕಾಪಾಡಬೇಕು ಎಂದು ಅವರು ಮನವಿಯನ್ನೂ ಮಾಡಿದ್ದಾರೆ.

ಈಗ ಸುಂದರ ಪರಿಸದರಲ್ಲಿರುವ ಪ್ರಾಚೀನ ಭಾವಿ

ವಿಜಯಪುರ ಜಿಲ್ಲೆ ಬರಕ್ಕೆ ಹೆಸರುವಾಸಿ. ಈಗ ನಾವು ಕಷ್ಟಪಟ್ಟು ಈ ಭಾವಿಯನ್ನು ಸ್ವಚ್ಛಗೊಳಿಸಿದ್ದೇವೆ. ಶತಮಾನ ಇತಿಹಾಸದ ಭಾವಿಯ ನೀರು ಈಗ ಸ್ವಚ್ಛವಾಗಿದ್ದು, ಬೇಸಿಗೆಯಲ್ಲಿ ದಿನೋಪಯೋಗಿ ಕೆಲಸಗಳಿಗೆ ಬಳಸಬಹುದಾಗಿದೆ. ಇನ್ನು ಮುಂದಾದರು ಗೌರಿ ಗಣೇಶ ಬಡಾವಣೆಯ ನಿವಾಸಿಗಳು ಈ ಭಾವಿಯಲ್ಲಿ ತ್ಯಾಜ್ಯಗಳನ್ನು ಹಾಕದೆ ಸ್ವಚ್ಛವಾಗಿಟ್ಟುಕೊಂಡು ಸುಂದರ ಪರಿಸರ ಉಳಿಸಿಕೊಳ್ಳುವ ಕಾಳಜಿ ತೋರಬೇಕು ಎಂದು ಇಲ್ಲಿನ ಬಡಾವಣೆ ನಿವಾಸಿಗಳಲ್ಲಿ ಮನವಿ ಮಾಡಿದ್ದಾರೆ. ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌