ಬಸವ ನಾಡಿನಲ್ಲೊಂದು ವಿನೂತನ ಪ್ರಯತ್ನ- ಸ್ವಚ್ಛಂದ ಪರಿಸರದಲ್ಲಿ ಚೆಂಬೆಳಕಿನಲ್ಲಿ ರಾತ್ರಿ ಕಳೆಯಲಿರುವ ಪರಿಸರ ಪ್ರೇಮಿಗಳು
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಪರಿಸರಕ್ಕೆ ಪೂರಕ ಮತ್ತು ಪರಿಸರದ ಬಗ್ಗೆ ಜನಜಾಗೃತಿ ಮೂಡಿಸುವ ವಿನೂತನ ಪ್ರಯತ್ನಗಳು ನಡೆಯುತ್ತಲೇ ಇವೆ. ಅದರಲ್ಲೂ ಗುರು ಪೂರ್ಣಿಮೆಯಂದು ಪರಿಸರದ ಕಾಳಜಿಯ ಜೊತೆಗೆ ಮಾನವ ನಿರ್ಮಿತ ಕಾಡಿನ ಪರಿಸರದಲ್ಲಿ ರಾತ್ರಿಯಿಡೀ ಕಳೆಯುವ ಮೂಲಕ ಹೊಸದೊಂದು ಪ್ರಯೋಗಕ್ಕೆ ಪರಿಸರ ಪ್ರೇಮಿಗಳು ಮುಂದಾಗಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಜೀವ ವೈವಿದ್ಯತೆ, ಪರಿಸರ ವ್ಯವಸ್ಥೆ ಪುನರ್ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಡಾ. ಮಹಾಂತೇಶ ಬಿರಾದಾರ ನೇತೃತ್ವದಲ್ಲಿ ಯುವಕರ ತಂಡ ತಮ್ಮಂಥ ತರುಣರನ್ನು ಪರಿಸರದತ್ತ ಹೆಚ್ಚೆಚ್ಚು ಆಕರ್ಷಿಸಲು […]
ಜನರ ಕೈಗೆ ಸಿಗದ ಯತ್ನಾಳ ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿರುತ್ತಾರೆ- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆರೋಪ
ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜನರ ಕೈಗೆ ಸಿಗುವುದಿಲ್ಲ. ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿರುತ್ತಾರೆ ಎಂದು ಸ್ವಪಕ್ಷೀಯ ಮಾಜಿ ಶಾಸಕ ಮತ್ತು ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಸ್ಥಳೀಯ ಶಾಸಕ ಯತ್ನಾಳ ಜನರ ಕೈಗೆ ಸಿಗುವುದಿಲ್ಲ. ಕೈಗೆ ಸಿಗುತ್ತಿಲ್ಲ. ಸ್ಟೇಟ್ ಲೆವಲ್ ಮತ್ತು ಸೆಂಟ್ರಲ್ ಲೇವಲ್ ನಲ್ಲಿ ಬೆಳೆದಿದ್ದಾರೆ ಎಂದು ಜನ ಲೇವಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಾವು ಶಾಸಕ ಮತ್ತು ಸಚಿವರಾಗಿದ್ದಾಗ ಹಾಗೂ […]
ವಿಜಯಪುರ ನೂತನ ಎಸ್ಪಿ ಎಚ್. ಡಿ. ಆನಂದ ಕುಮಾರ ಅಧಿಕಾರ ಸ್ವೀಕಾರ- ಶುಕ್ರವಾರ ರಾತ್ರಿಯೇ ಕರ್ತವ್ಯಕ್ಕೆ ಹಾಜರಾದ ಕನ್ನಡಿಗ ಎಸ್ಪಿ
ವಿಜಯಪುರ: ವಿಜಯಪುರ ನೂತನ ಎಸ್ಪಿಯಾಗಿ ಎಚ್. ಡಿ. ಆನಂದ ಕುಮಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈವರೆಗೆ ಆಂತರಿಕ ಭದ್ರತೆ ವಿಭಾಗದ ಎಸ್ಪಿಯಾಗಿದ್ದ ಎಚ್. ಡಿ. ಆನಂದ ಕುಮಾರ ಅವರನ್ನು ಸರಕಾರ ಇತ್ತೀಚೆಗೆ ವಿಜಯಪುರ ಎಸ್ಪಿಯಾಗಿ ವರ್ಗಾವಣೆ ಮಾಡ ವರ್ಗಾವಣೆ ಮಾಡಿತ್ತು. ಆದರೆ, ಮೂವಮೆಂಟ್ ಆರ್ಡರ್ ಬಾರದ ಹಿನ್ನೆಲೆಯಲ್ಲಿ ಈವರೆಗೆ ನೂತನ ಎಸ್ಪಿ ವಿಜಯಪುರಕ್ಕೆ ವರದಿ ಮಾಡಿಕೊಳ್ಳುವುದು ವಿಳಂಬವಾಗಿತ್ತು. ಶುಕ್ರವಾರ ರಾತ್ರಿ ಮೂವಮೆಂಟ್ ಆರ್ಡರ್ ಬಂದ ಹಿನ್ನಲೆಯಲ್ಲಿ ಡಿಜಿ ಆದೇಶದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಆಂತರಿಕ ಭದ್ರತೆ […]
ಮಹಾಮಳೆ ಆಲಮಟ್ಟಿ ಜಲಾಷಯದಿಂದ 3.50 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ- ರಾತ್ರಿ ವೇಳೆ ವರ್ಣರಂಜಿತ ಗೇಟುಗಳ ದೃಶ್ಯಗಳು ಇಲ್ಲಿವೆ
ವಿಜಯಪುರ: ನೆರೆಯ ಮಹಾರಾಷ್ಟ್ರ ಮತ್ತು ಬೆಳೆಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಷಯಕ್ಕೆ ಭಾರಿ ಪ್ರಮಾಮದಲ್ಲಿ ನೀರು ಹರಿದು ಬರುತ್ತಿದೆ.ಈ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಷಯದ ಎಲ್ಲ ಗೇಟುಗಳನ್ನು ತೆರೆಯಲಾಗಿದ್ದು ಮೂರು ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಗರಿಷ್ಠ 519.60 ಮೀ. ಎತ್ತರದ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಷಯದಲ್ಲಿ ಈಗ 516.76 ಮೀ. ನೀರು ಸಂಗ್ರಹವಾಗಿದೆ. ಗರಿಷ್ಠ 123.080 ಟಿಎಂಸಿ ಜಲಸಂಗ್ರಹ ಸಾಮರ್ಥ್ಯದ ಜಲಾಷಯದಲ್ಲಿ ಈಗ 82.387 […]