ಮಹಾಮಳೆ ಆಲಮಟ್ಟಿ ಜಲಾಷಯದಿಂದ 3.50 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ- ರಾತ್ರಿ ವೇಳೆ ವರ್ಣರಂಜಿತ ಗೇಟುಗಳ ದೃಶ್ಯಗಳು ಇಲ್ಲಿವೆ

ವಿಜಯಪುರ: ನೆರೆಯ ಮಹಾರಾಷ್ಟ್ರ ಮತ್ತು ಬೆಳೆಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಷಯಕ್ಕೆ ಭಾರಿ ಪ್ರಮಾಮದಲ್ಲಿ ನೀರು ಹರಿದು ಬರುತ್ತಿದೆ.ಈ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಷಯದ ಎಲ್ಲ ಗೇಟುಗಳನ್ನು ತೆರೆಯಲಾಗಿದ್ದು ಮೂರು ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದಿಂದ ರಾತ್ರಿ ನೀರು ಬಿಡುಗಡೆ ವೇಳೆ ನಾನಾ ವರ್ಣಗಳಲ್ಲಿ ಕಂಗೊಳಿಸುತ್ತಿರುವ ಗೇಟುಗಳು

ಗರಿಷ್ಠ 519.60 ಮೀ. ಎತ್ತರದ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಷಯದಲ್ಲಿ ಈಗ 516.76 ಮೀ. ನೀರು ಸಂಗ್ರಹವಾಗಿದೆ. ಗರಿಷ್ಠ 123.080 ಟಿಎಂಸಿ ಜಲಸಂಗ್ರಹ ಸಾಮರ್ಥ್ಯದ ಜಲಾಷಯದಲ್ಲಿ ಈಗ 82.387 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಷಯಕ್ಕೆ ಈಗ 2 ಲಕ್ಷ 37 ಸಾವಿರದ 963 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ 26 ಗೇಟುಗಳು ಮತ್ತು ವಿದ್ಯುತ್ ಉತ್ಪಾದನೆ ಘಟಕಗಳ ಮೂಲಕ 3.50 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಯ ಮೂಲಕ ನಾರಾಯಣಪುರ ಬಸವ ಸಾಗರ ಜಲಾಷಯಕ್ಕೆ ಹೊರ ಬಿಡಲಾಗುತ್ತಿದೆ.

ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರದಿಂದ ನೀರು ಬಿಡುಗಡೆ ರಾತ್ರಿ ವೇಳೆ ನಾನಾ ವರ್ಣಗಳಲ್ಲಿ ಕಂಗೊಳಿಸುತ್ತಿರುವ ಗೇಟುಗಳು

ಈ ಮಧ್ಯೆ ಜಲಾಷಯದ ಎಲ್ಲ ಗೇಟುಗಳನ್ನು ತೆರೆಯಲಾಗಿರುವ ಹಿನ್ನೆಲೆಯಲ್ಲಿ 26 ಗೇಟುಗಳಿಗೆ ಬಣ್ಣದ ಲೈಟುಗಳಿಂದ ವರ್ಣಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆಯಲ್ಲಿ ಈ ಗೇಟುಗಳ ಮೂಲಕ ನೀರು ಹೊರ ಬಿಡುವ ದೃಷ್ಯಗಳು ನಯನ ಮನೋಹವಾಗಿವೆ.

ಈ ಜಲಾಷಯದ ಎಲ್ಲ ಗೇಟುಗಳಿಗೆ ನಾನಾ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ದೂರದಿಂದಲೇ ಈ ದೃಷ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಆಲಮಟ್ಟಿ ಜಲಾಷಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಜಲಾಷಯದ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ನಿಡಗುಂದಿ ಮತ್ತು ಮುದ್ದೇಬಿಹಾಳ ತಾಲೂಕುಗಳ ಕೃಷ್ಣಾ ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾನವಿ ಮಾಡಿದ್ದಾರೆ.

ಈಗಾಗಲೇ ರೈತರ ಹತ್ತಾರು ಎಕರೆ ಪ್ರದೇಶಗಳು ಕೃಷ್ಣಾ ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಡೆಯಾಗಿವೆ.

Leave a Reply

ಹೊಸ ಪೋಸ್ಟ್‌