ಜನರ ಕೈಗೆ ಸಿಗದ ಯತ್ನಾಳ ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿರುತ್ತಾರೆ- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆರೋಪ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜನರ ಕೈಗೆ ಸಿಗುವುದಿಲ್ಲ. ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿರುತ್ತಾರೆ ಎಂದು ಸ್ವಪಕ್ಷೀಯ ಮಾಜಿ ಶಾಸಕ ಮತ್ತು ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸ್ಥಳೀಯ ಶಾಸಕ ಯತ್ನಾಳ ಜನರ ಕೈಗೆ ಸಿಗುವುದಿಲ್ಲ. ಕೈಗೆ ಸಿಗುತ್ತಿಲ್ಲ. ಸ್ಟೇಟ್ ಲೆವಲ್ ಮತ್ತು ಸೆಂಟ್ರಲ್ ಲೇವಲ್ ನಲ್ಲಿ ಬೆಳೆದಿದ್ದಾರೆ ಎಂದು ಜನ ಲೇವಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾವು ಶಾಸಕ ಮತ್ತು ಸಚಿವರಾಗಿದ್ದಾಗ ಹಾಗೂ ಬೇರೆಯವರು ಯಾರೂ ಯಾವುದೇ ಕೆಲಸ ಮಾಡಿಲ್ಲ ಎಂದು ಯತ್ನಾಳ ಆರೋಪಿಸುತ್ತಿರುತ್ತಾರೆ. ಆದರೆ, ನನ್ನ ಕಾಲದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಅಂದು ನಾನು ಮತ್ತು ಬೇರೆಯವರು ಮಂಜೂರು ಮಾಡಿದ ಕೆಲಸಗಳಿಗೆ ಯತ್ನಾಳ ಇಂದು ತಮ್ಮದು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಸಿಎಂ ಜೊತೆ ವೈಯಕ್ತಿಕ‌ ದ್ವೇಷ ಇದ್ದರೂ ಕೂಡ ಅಭಿವೃದ್ಧಿ ಕಾಮಗಾರಿಗಳಲ್ಲಿ ಸಿಎಂ ಅವರ ಪೊಟೋ ಹಾಕಿಕೊಳ್ಳಬೇಕು ಎಂದು ಯತ್ನಾಳ್ ಗೆ ಟಾಂಗ್ ನೀಡಿದರು.

ಯತ್ನಾಳ ಹೇಳಿಕೆಗಳನ್ನು ನೋಡಿದರೆ ಪ್ರತಿ ತಿಂಗಳು ಸುದ್ದಿಗೋಷ್ಠಿ ನಡೆಸಿ ಅವರ ಆರೋಪಗಳಿಗೆ ಪ್ರತ್ಯುತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದ ಅವರು, ಇತ್ತಿಚೆಗೆ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಮತ್ತು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಅವರಿಗೆ ಯತ್ನಾಳ ಲಿಗಲ್ ನೋಟಿಸ್ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ಆರೋಪ ಮಾಡುವವರು ಯತ್ನಾಳ ಅವರಿಗೆ ನೋಟಿಸ್ ನೀಡಲಾರಂಭಿಸಿದರೆ ಕೊರ್ಟ್ ತುಂಬಾ ಯತ್ನಾಳ ರ ವಿರುದ್ಧ ನೊಟಿಸ್ ಗಳ ಸುರಿಮಳೆಯಾಗಲಿದೆ. ಅವರು ಎಲ್ಲರ ವಿರುದ್ಧ ಮಾತನಾಡಿದ್ದಾರೆ. ಸುಖಾ ಸುಮ್ಮನೆ ಆರೋಪ ಮಾಡೋದು ಯತ್ನಾಳ ಅವರ ಖಯಾಲಿಯಾಗಿದೆ ಎಂದು ವ್ಯಂಗ್ಯವಾಡಿದರು.

ವಿಜಯಪುರ ಮಹಾನಗರ ಪಾಲಿಕೆ ಸದಸ್ಯರ ಅವಧಿ 2019 ಜುಲೈ 14 ರಂದು ಮುಗಿದಿದೆ. ಆದರೆ ಕೆಲವು ಜನ ಸದಸ್ಯರು ಈ ವಿಚಾರವಾಗಿ ಕೋರ್ಟ ಮೆಟ್ಟಿಲೇರಿದ್ದಾರೆ. ಪಾಲಿಕೆ ಚುನಾವಣೆ ನಡೆಯುವಂತೆ ಮಾಡಬೇಕಿದೆ. ವಿಜಯಪುರ ಮಹಾನಗರದ ಜನತೆ ತಮ್ಮ ಸಮಸ್ಯೆಗಳನ್ನು ಹೇಳಲು ವಾರ್ಡುಗಳಲ್ಲಿ ಮೆಂಬರ್ ಗಳಿಲ್ಲ. ಮಹಾನಗರ ಪಾಲಿಕೆ ಚುನಾವಣೆ ನಡೆಯದೇ ಇರುವದು ಶಾಸಕರಿಗೆ ವರದಾನವಾಗಿದೆ. ಇಷ್ಟೋಂದು ಗ್ಯಾಪ್ ಹಿಂದೆ ಕೂಡಾ ಎಂದು ಆಗಿಲ್ಲ. ಮಾಜಿ ಮೆಂಬರ್ ಗಳ ತಂತಮ್ಮಲ್ಲಿ ಮಾತಾನಾಡಿಕೊಂಡು ಕೋರ್ಟ್ ಮ್ಯಾಟರ್ ಸರಿ ಪಡಿಸಿಕೊಳ್ಳಬೇಕು ಎಂದು ಅಪ್ಪು ಪಟ್ಟಣಶೆಟ್ಟಿ ಸಲಹೆ ನೀಡಿದರು.

Leave a Reply

ಹೊಸ ಪೋಸ್ಟ್‌